ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಾಮ ಮಂದಿರ ನಿರ್ಮಾಣ: ರಾಜ್ಯಪಾಲರನ್ನು ಭೇಟಿ ಮಾಡಿದ ಬಜರಂಗದಳದ ಪ್ರಮುಖರು!

|
Google Oneindia Kannada News

ಬೆಂಗಳೂರು, ಫೆ. 09: ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಹಿನ್ನೆಲೆಯಲ್ಲಿ ಬಜರಂಗದಳದ ಪ್ರಮುಖರು ರಾಜ್ಯಪಾಲರಾದ ವಜೂಬಾಯಿ ವಾಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ, ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ ಸ್ವಾಮಿ ಹಾಗೂ ಬೆಂಗಳೂರು ಉತ್ತರ ವಿಭಾಗ ವಿಹಿಂಪ್ ಅಧ್ಯಕ್ಷ ಮುನಿರಾಜು ಅವರು ಭೇಟಿ ಮಾಡಿದರು.

ಬಜರಂಗದಳ ಪ್ರಮುಖರು ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಜ್ಯಪಾಲರು ತಾವು ರಾಮ ಮಂದಿರದ ಕರಸೇವೆಯಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಅಭಿಮಾನ ಮತ್ತು ಹೆಮ್ಮೆಯಿಂದ ಹೇಳಿಕೊಂಡರು. ಜೊತೆಗೆ ಇದೊಂದು ರಾಷ್ಟ್ರ ಕಾರ್ಯ. ರಾಮ ಮಂದಿರ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣವಾದಂತೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು ಎಂದು ಬಜರಂಗದಳದ ಪ್ರಮುಖರು ಮಾಹಿತಿ ನೀಡಿದ್ದಾರೆ.

Bajrang Dal Pramukhas met Governor Vajubhai Vala regarding Ram Mandir Nidhi Samarpana Abhiyan

ರಾಮ ಮಂದಿರ ನಿರ್ಮಾಣಕ್ಕೆ ಕನಿಷ್ಠ 10 ರೂಪಾಯಿಗಳಿಂದ ತಮ್ಮ ಶಕ್ತಾನುಸಾರ ದೇಣಿಗೆ ನೀಡಬಹುದಾಗಿದೆ. ಎರಡು ಸಾವಿರ ರೂಪಾಯಿಗಳವರೆಗೆ ದೇಣಿಗೆ ನೀಡುವವರಿಗೆ ಕೂಪನ್ ಕೊಡಲಾಗುತ್ತಿದೆ. 2 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ದೇಣಿಗೆ ನೀಡುವವರಿಗೆ ಶ್ರೀ ರಾಮಜನ್ಮಭೂಮಿ ಟ್ರಸ್ಟ್‌ ವತಿಯಿಂದ ರಸೀದಿ ಕೊಡಲಾಗುವುದು ಎಂದು ಬಜರಂಗದಳದ ಪ್ರಮುಖರು ರಾಜ್ಯಪಾಲರಿಗೆ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.
English summary
Bajrang Dal National Co Convenor Suryanarayana met Governor Vajubhai Vala regarding Shri Ram Janmbhoomi Nidhi Samarpana Abhiyan. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X