ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಜಾಮಿನು ಮಂಜೂರು
Actor Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ & ಗ್ಯಾಂಗ್ ಜೈಲು ಸೇರಿದೆ. ಈ ಪೈಕಿ ಇಬ್ಬರಿಗೆ ಇಂದು (ಅಕ್ಟೋಬರ್ 14) ಈ ಪೈಕಿ ಇಬ್ಬರಿಗೆ ಜಾಮೀನು ಮಂಜೂರು ಮಾಡಿ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ನಲ್ಲಿ ಜಡ್ಜ್ ಜೈಶಂಕರ್ ಆದೇಶ ಹೊರಡಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ13 ಆರೋಪಿ ದೀಪಕ್ ಹಾಗೂ ಎ8 ಆರೋಪಿ ರವಿಶಂಕರ್‌ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಇನ್ನು ಎ2 ಆರೋಪಿ ನಟ ದರ್ಶನ್, ಎ1 ಆರೋಪಿ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ಈ ಮೂಲಕ ಇವರಿಬ್ಬರ ಕಾನೂನು ಹೋರಾಟ ವ್ಯರ್ಥ ಆದಂತಾಗಿದೆ. ಇದೀಗ ದರ್ಶನ್ ಮುಂದಿನ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದಂತೆ ಪ್ರಕರಣದ ಎ2 ಆರೋಪಿ ನಟ ದರ್ಶನ್, ಎ1 ಪವಿತ್ರಾಗೌಡ, ಎ11 ನಾಗರಾಜ್, ಎ12 ಲಕ್ಷ್ಮಣ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ದೀಪಕ್ ಮತ್ತು ರವಿಶಂಕರ್‌ಗೆ ಮಾತ್ರ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಇನ್ನೂ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಇದೀಗ ಕೋರ್ಟ್ ಬಿಗ್ ಶಾಕ್ ನೀಡಿದ್ದು, ಮತ್ತಷ್ಟು ದಿನಗಳ ಕಾಳ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲೇ ಇರುವಂತೆ ಮಾಡಿದೆ. ಇದರಿಂದ ನಟ ದರ್ಶನ್ ಹಾಗೂ ಅಭಿಮಾನಿಗಳ ನಿರೀಕ್ಷೆ ಹುಸಿಯಾದಂತಾಗಿದೆ.
ಮೂವರಿಗೆ ಜಾಮೀನು ಮಂಜೂರು: ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ15 ಆರೋಪಿ ಕಾರ್ತಿಕ್, ಎ17 ಆರೋಪಿ ನಿಖಿಲ್‌ಗೆ 57ನೇ ಸಿಸಿಎಚ್ ಕೋರ್ಟ್ ಜಾಮೀನು ನೀಡಿದ್ದು, ಎ16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂ ಮಾಡಿ ಆದೇಶ ಹೊರಡಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಂದ ಹಣದ ಆಮಿಷಕ್ಕೋಳಗಾಗಿ ಶವ ಸಾಗಿಸುವಾಗ, ಪೊಲೀಸರಿಗೆ ಶರಣಾಗುವಲ್ಲಿ ಮಾತ್ರ ಇವರ ಪಾತ್ರ ಇತ್ತು. ಹತ್ಯೆಗೂ ಇವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಲಾವಗಿದೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಶವ ಸಿಕ್ಕ ಮರುದಿನ ಅಂದರೆ ಜೂನ್ 10ಕ್ಕೆ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೆ ಇವರು ಬಂದು ಶರಣಾಗಿದ್ದರು. ನಾವೇ ಕೊಲೆ ಮಾಡಿದ್ದಾಗಿಯೂ ಆರಂಭದಲ್ಲಿ ಹೇಳಿದ್ದರು. ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಸತ್ಯವನ್ನು ಹೊರಹಾಕಿದ್ದರು ಎನ್ನಲಾಗುತ್ತಿದೆ.
ವಾದ-ಪ್ರತಿವಾದ ಹೀಗಿತ್ತು: ನಟ ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ ಜಾಮೀನು ನೀಡಬೆಕೆಂದು ಕೇಳಿಕೊಂಡರು. ಆದರೆ, ಎಸ್‌ಪಿಪಿ ಪ್ರಸನ್ನ ಕುಮಾರ್ ಅವರೂ ಕೂಡ ಸಮರ್ಥವಾಗಿ ಪ್ರತಿವಾದ ಮಂಡಿಸಿ, ದರ್ಶನ್ ಜಾಮೀನಿಗೆ ಹೇಗೆ ಅನರ್ಹ ಎಂದು ಪ್ರಶ್ನೆ ಮಾಡಿದರು. ನಾಗೇಶ್ ಅವರು ದರ್ಶನ್ ಅವರ ಸಾಮಾಜಿಕ ಚಟುವಟಿಕೆಗಳನ್ನು ಪ್ರಸ್ತಾಪಿಸಿದರೆ, ಪ್ರಸನ್ನ ಕುಮಾರ್ ಅವರು, ದರ್ಶನ್ ಅವರ ಕ್ರೌರ್ಯದ ಮುಖವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ದರ್ಶನ್ ಪರ ವಕೀಲರ ವಾದ ಏನು?: ದರ್ಶನ್ ಸಿಮ್ ಹೇಮಂತ್ ಹೆಸರಿನಲ್ಲಿತ್ತು. ಹಾಗಾದರೆ ದರ್ಶನ್ ಫೋಟೋ ಹೇಗೆ ಬಂತು? ದರ್ಶನ್ ಪೋಟೋ ತೆಗೆದುಕೊಂಡು ಎಡಿಟ್ ಮಾಡಿ ತೋರಿಸಲಾಗಿದೆ. ರೇಣುಕಾಸ್ವಾಮಿ ದೇಹದ ಮೇಲೆ 1 ಸೆಂಟಿ ಮೀಟರ್ ಗಾಯ ಇತ್ತು. ದೇಹದ ಮೇಲೆ 39 ಗಾಯಗಳಿದ್ದವು ಎಂದು ವೈದ್ಯರು ಹೇಳಿದ್ದಾರೆ. ತಲೆಗೆ ಬಲವಾಗಿ ಹೊಡೆದರೆ ರಕ್ತ ಧಾರಕಾರವಾಗಿ ಸುರಿಯಲ್ಲ, ಚಿಮ್ಮುತ್ತದೆ ಎಂದು ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ. ಶೆಡ್ ಕೆಲಸಗಾರ ಕಿಶೋರ್ ಹೇಳಿಕೆ ದಾಖಲಿಸಲು ತಡ ಮಾಡಿದ್ಯಾಕೆ? ಸ್ಟೋನಿಬ್ರೂಕ್ ಪಬ್ ಸ್ಥಳವನ್ನು ಅಪರಾಧ ಜಾಗವಾಗಿ ತೋರಿಸಿದ್ದಾರೆ. ಇದೇನಾ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸ್ ಮಾದರಿಯ ತನಿಖೆ ಎಂದು ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದರು.
ಎಸ್‌ಪಿಪಿ ಪ್ರಸನ್ನಕುಮಾರ್ ವಾದ: ತನಿಖಾಧಿಕಾರಿ ಯಾವುದೇ ಸಾಕ್ಷಿಗಳನ್ನ ಸೃಷ್ಟಿ ಮಾಡಿಲ್ಲ. ಕೇವಲ ಐಪಿ ಅಡ್ರೆಸ್‌ನಿಂದ ಈ ವರದಿ ಸಿದ್ಧಪಡಿಸಿಲ್ಲ. ಜಿಪಿಎಸ್ ಲ್ಯಾಂಗಿಟ್ಯೂಡ್ ಲಾಟಿಟ್ಯೂಡ್ ಆಧರಿಸಿ ವರದಿ ಸಿದ್ಧವಾಗಿದೆ. ದರ್ಶನ್ ಸಿಮ್ ಹೇಮಂತ್‌ಗೆ ಸೇರಿದ್ದು ಅಂತಾ ಸಿ.ವಿ.ನಾಗೇಶ್ ಹೇಳುತ್ತಾರೆ. 'ಮಿಸ್ ಯೂ ಹೆಂಡ್ತಿ, ಯೂ ಆರ್ ಮೋಸ್ಟ್ ಇಂಪಾರ್ಟೆಂಟ್ ಇನ್ ಮೈ ಲೈಫ್ ಸುಬ್ಬಿ' ಎನ್ನುವಂತಹ ಮೆಸೇಜ್‌ಗಳನ್ನು ಹೇಮಂತ್ ಮಾಡಿದ್ದಾ? ದರ್ಶನ್ ಮಾಡಿದ್ದಾ? ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಕ್ಕೆ ರೇಣುಕಾಸ್ವಾಮಿ ಕೊಲೆಯಾಗಿದೆ. ಸಂಚು ರೂಪಿಸಿ ಕೊಲೆ ಮಾಡಿದ ಹಿನ್ನೆಲೆ ದರ್ಶನ್ ಬಂಧನವಾಗಿದೆ ಎಂದು ವಾದ ಮಂಡನೆ ಮಾಡಿದರು.












Click it and Unblock the Notifications