ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಕ್ಕೀಡಾದ ಮೇಟಿ ರಾಸಲೀಲೆ ಪ್ರಕರಣದ ಸಂತ್ರಸ್ತೆ ಹುಟ್ಟುಹಬ್ಬ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಅಕ್ಟೋಬರ್ 14: ಹೆಚ್ ವೈ ಮೇಟಿ ರಾಸಲೀಲೆ ಪ್ರಕರಣ ಸಂತ್ರಸ್ತೆ ವಿಜಯಲಕ್ಷ್ಮಿ ಸರೂರು ಹುಟ್ಟುಹಬ್ಬ ಆಚರಣೆ ವಿವಾದಕ್ಕೆ ಈಡಾಗಿದೆ. ನಿನ್ನೆ(ಅ.14) ಹುಟ್ಟು ಹಬ್ಬ ಆಚರಣೆ ವೇಳೆ ಬಾಗಲಕೋಟೆ ಜಿಲ್ಲಾ ಕುರುಬ ಸಂಘದ ಜಿಲ್ಲಾಧ್ಯಕ್ಷ ಡಿಬಿ ಸಿದ್ದಾಪುರ ಮತ್ತು ಸಂಘದ ಖಜಾಂಚಿ ಆತ್ಮಾನಂದ ಜಾಲಿಹಾಳ ವಿಜಯಲಕ್ಷ್ಮಿ ಸರೂರ ಗೆ ರೇಷ್ಮೆ ಸೀರೆ ನೀಡಿ ಹಣೆಗೆ ಭಂಡಾರ ಹಚ್ಚಿ ಕಂಬಳಿ ಹೊದಿಸಿ ಸನ್ಮಾನ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಈ ಆಚರಣೆ ನಡೆದಿದ್ದು, ಕುರುಬ ಸಮುದಾಯದ ಪ್ರಜ್ಞಾವಂತರು ಇದನ್ನು ಖಂಡಿಸಿದ್ದಾರೆ. ಕಂಬಳಿ ಕುರುಬ ಸಮುದಾಯದ ಪವಿತ್ರ ವಸ್ತು. ಯಾವುದೇ ಧರ್ಮ ಜಾತಿ ಜನಾಂಗದ ಪವಿತ್ರ ಕಾರ್ಯಕ್ಕೆ ಇದನ್ನು ಬಳಸುತ್ತಾರೆ. ಅಂತಹ ಕಂಬಳಿಯನ್ನು ವಿಜಯಲಕ್ಷ್ಮಿಗೆ ಹೊದಿಸಿ ಅಪವಿತ್ರ ಮಾಡಲಾಗಿದೆ ಎಂದು ಛೀಮಾರಿ ಹಾಕಲಾಗುತ್ತಿದೆ.

Bagalkot: Controversy of Meti issue victim Vijayalakshmi birthday

ವೀರರಾಣಿ ಅಹಲ್ಯಾಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಸತ್ಯ ಸಾವಿತ್ರಿ, ವನಕೆ ಓಬವ್ಬ, ಸಕ್ಕುಬಾಯಿ ಅಂತಹ ಮಹಾನ್ ಮಹಿಳೆಯರ ಹಣೆ ಮೇಲೆ ಭಂಡಾರ ಮತ್ತು ಮೈ ಮೇಲೆ ಕಂಬಳಿ ಹರಿದಾಡಬೇಕಾಗಿತ್ತು. ಈ ರೀತಿ ಆಚರಣೆ ಮಾಡಿದ ಕುರುಬ ಸಂಘದ ಜಿಲ್ಲಾಧ್ಯಕ್ಷ ಡಿಬಿ ಸಿದ್ದಾಪುರ ಮತ್ತು ಖಜಾಂಚಿ ಆತ್ಮಾನಂದ ಜಾಲಿಹಾಳ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಧ್ವನಿ ತುಣುಕೊಂದು ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಈ ಆಡಿಯೋ ಮೂಲಕ ಕುರುಬ ಸಮುದಾಯ ಸುಮ್ಮನೆ ಕೂರಬಾರದೆಂದು ಸಂದೇಶ ರವಾನೆ ಮಾಡಲಾಗದೆ.

English summary
Birthday of minister H Y Meti issue victim Vijayalakshmi's birthday became a controversy now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X