ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಲಾ, ಊಬರ್‌ ಆಟೋ ದರ ನಿಗದಿಗೆ ಸಾರಿಗೆ ಇಲಾಖೆ ಒಪ್ಪಿಗೆ

|
Google Oneindia Kannada News

ಬೆಂಗಳೂರು, ನವೆಂಬರ್ 25; ಓಲಾ, ಊಬರ್ ದರ ನಿಗದಿ ವಿಚಾರದಲ್ಲಿ ಸರ್ಕಾರ ಮತ್ತು ಕಂಪನಿಗಳ ಜೊತೆ ನಡೆಯುತ್ತಿದ್ದ ಜಟಾಪಟಿ ಅಂತ್ಯಗೊಂಡಿದೆ. ಸಾರಿಗೆ ಇಲಾಖೆ ಆಟೋಗಳಿಗೆ ದರ ನಿಗದಿ ಮಾಡಲು ಒಪ್ಪಿಗೆ ನೀಡಿದೆ.

ಶುಕ್ರವಾರ ಸಾರಿಗೆ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಮೋಟಾರು ವಾಹನಗಳ ಅಧಿನಿಯಮ, 1988 (ಕೇಂದ್ರ ಅಧಿನಿಯಮ ಸಂಖ್ಯೆ 59/1988) ರ ಕಲಂ 67 ರ ಉಪಕಲಂ (1)i) ರಡಿ ಪ್ರದತ್ತವಾದ ಅಧಿಕಾರದನ್ವಯ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಮಧ್ಯಂತರ ಆದೇಶದನ್ವಯ ಈ ಆದೇಶ ಹೊರಡಿಸಲಾಗಿದೆ.

ಓಲಾ, ಉಬರ್ ಆಟೋ ಬಿಕ್ಕಟ್ಟು: ನ.25ರೊಳಗೆ ದರ ನಿಗದಿ-ಸರ್ಕಾರಓಲಾ, ಉಬರ್ ಆಟೋ ಬಿಕ್ಕಟ್ಟು: ನ.25ರೊಳಗೆ ದರ ನಿಗದಿ-ಸರ್ಕಾರ

ಅಗ್ರಿಗೇಟರ್ ನಿಯಮದ ಅಡಿಯಲ್ಲಿ ಅಟೋರಿಕ್ಷಾ ಅಗ್ರಿಗೇಟರ್ ಸೇವ ಒದಗಿಸುವ ಸಂಸ್ಥೆಗಳಿಗೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಕಾಲಕಾಲಕ್ಕೆ ನಿಗದಿಪಡಿಸಿರುವ ಆಟೋರಿಕ್ಷಾ ಪಯಾಣದರಗಳಿಗೆ ಅನ್ವಯಿಸುವ ಜಿಎಸ್‌ಟಿ ತೆರಿಗೆಯನ್ನು ಪ್ರಾಧಿಕಾರ ಮತ್ತು ಸರ್ಕಾರವು ಪರಿಗಣಿಸಿ ಆದೇಶವನ್ನು ಪ್ರಕಟಿಸಿದೆ.

ಓಲಾ, ಉಬರ್ ಆಟೋ ಬಿಕ್ಕಟ್ಟು: ಸದ್ಯಕ್ಕೆ ಬಗೆಹರಿಯುವುದು ಡೌಟು!ಓಲಾ, ಉಬರ್ ಆಟೋ ಬಿಕ್ಕಟ್ಟು: ಸದ್ಯಕ್ಕೆ ಬಗೆಹರಿಯುವುದು ಡೌಟು!

Auto Fare Issue Transport Dept Directions Ola And Uber

ಆಟೋರಿಕ್ಷಾ ಅಗ್ರಿಗೇಟರ್ ಸೇವೆ ಒದಗಿಸಲು ಚಾಲ್ತಿಯಲ್ಲಿರುವ ಲೈಸೆನ್ಸ್ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಕಾಲಕಾಲಕ್ಕೆ ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣದರಗಳ ಮೇಲೆ ಶೇ 5ರಷ್ಟು ಸೇವಾಶುಲ್ಕ ಅನ್ವಯಿಸುವ ಜಿಎಸ್‌ಟಿ ತೆರಿಗೆಯನ್ನು ಸೇರಿಸಿ ಅಂತಿಮ ಪ್ರಯಾಣದರ ನಿಗದಿಪಡಿಸಲು ಕರ್ನಾಟಕ ರಾಜ್ಯದ ಎಲ್ಲಾ ಸಾರಿಗೆ ಪ್ರಾಧಿಕಾರಗಳಿಗೆ ಈ ಮೂಲಕ ನಿರ್ದೇಶನ ನೀಡಲಾಗಿದೆ ಎಂದು ಆದೇಶ ತಿಳಿಸಿದೆ.

ಓಲಾ, ಉಬರ್‌ಗೆ ಸೆಡ್ಡು ಹೊಡೆಯಲು ಬರುತ್ತಿದೆ ನಮ್ಮ ಯಾತ್ರಿ App ಓಲಾ, ಉಬರ್‌ಗೆ ಸೆಡ್ಡು ಹೊಡೆಯಲು ಬರುತ್ತಿದೆ ನಮ್ಮ ಯಾತ್ರಿ App

ಆಟೋ ದರ ಏರಿಕೆ ಜಟಾಪಟಿ; ಕರ್ನಾಟಕ ಸರ್ಕಾರ ಆಟೋ ರಿಕ್ಷಾಗಳಿಗೆ ಮೊದಲ 2 ಕಿ. ಮೀ.ಗೆ ಕನಿಷ್ಠ ಪ್ರಯಾಣ ದರವನ್ನು 30 ರೂ. ನಿಗದಿಪಡಿಸಿದೆ. ಆದರೆ ಓಲಾ, ಉಬರ್‌ನಂತಹ ಕಂಪನಿಗಳು 100 ರೂ. ದರವನ್ನು ನಿಗದಿ ಮಾಡಿದ್ದವು. ಕಂಪನಿಗಳು ಪ್ರಯಾಣದರ ಏರಿಕೆ ಮೂಲಕ ಜನರನ್ನು ಸುಲಿಗೆ ಮಾಡುತ್ತಿವೆ ಎಂದು ಆರೋಪಿಸಲಾಗಿತ್ತು.

ಸರ್ಕಾರ ಅಗ್ರಿಗೇಟರ್ ಆಟೋಗಳ ಸೇವೆ ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿತ್ತು. ಅನುಮತಿ ಇಲ್ಲದೇ ಸಂಚಾರ ನಡೆಸುತ್ತಿದ್ದ ಆಟೋಗಳನ್ನು ಸೀಜ್ ಮಾಡಿ ದಂಡ ವಿಧಿಸಿತು. ಆಗ ಆಟೋ ಚಾಲಕರು ಆರ್‌ಟಿಒ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಬಳಿಕ ಅಗ್ರಿಗೇಟರ್ ಕಂಪನಿಗಳು ಕರ್ನಾಟಕ ಹೈಕೋರ್ಟ್ ಮೊರೆ ಹೋದವು. ದರ ಏರಿಕೆ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದವು.

ಸಾರಿಗೆ ಇಲಾಖೆ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವಾಗ ನಾವು ಕನಿಷ್ಠ ದರ ನಿಗದಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆಗ ಕರ್ನಾಟಕ ಹೈಕೋರ್ಟ್‌ 15 ದಿನದಲ್ಲಿ ಕನಿಷ್ಠ ದರ ನಿಗದಿ ಮಾಡಿ ಎಂದು ಹೇಳಿತು. ಆದರೆ ಸಾರಿಗೆ ಇಲಾಖೆ ಅಧಿಕಾರಿಗಳು ಸರಣಿ ಸಭೆಗಳನ್ನು ನಡೆಸಿದರೂ ಸಹ ದರ ನಿಗದಿ ಮಾಡಲು ಸಾಧ್ಯವಾಗಲಿಲ್ಲ.

ಜಟಾಪಟಿ ಹೆಚ್ಚಾಗುತ್ತಿದ್ದಂತೆಯೇ ಸಾರಿಗೆ ಇಲಾಖೆ ಆಯುಕ್ತರಾದ ಟಿ. ಎಚ್. ಎಂ. ಕುಮಾರ್ ಆಟೋ ಚಾಲಕರ ಜೊತೆ ಸಭೆ ನಡೆಸಿದ್ದರು. ಸಾರಿಗೆ ಇಲಾಖೆಯ ಯಾವುದೇ ಆದೇಶಕ್ಕೂ ಬೆಲೆ ಕೊಡದೇ ಅಗ್ರಿಗೇಟರ್ ಕಂಪನಿಗಳು ಆಟೋ ಸೇವೆ ಮುಂದುವರೆಸಿದ್ದವು. ದರ ಏರಿಕೆ ಬಗ್ಗೆ ಚರ್ಚೆಗಳು ಮುಂದುವರೆದವು.

ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿಗಳ ವಿಚಾರಣೆ ವೇಳೆ ಸರ್ಕಾರ ನಾವು 90 ದಿನದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ. ಕನಿಷ್ಠ ದರ ನಿಗದಿ ಮಾಡುತ್ತೇವೆ ಎಂದು ಹೇಳಿಕೆ ನೀಡಿತ್ತು. ಆಗ ಕೋರ್ಟ್‌ ಸರ್ಕಾರಕ್ಕೆ ನೋಟಿಸ್ ನೀಡಿ ವಿಚಾರಣೆಯನ್ನು ಮುಂದೂಡಿತ್ತು. ಅಂತಿಮವಾಗಿ ಶುಕ್ರವಾರ ದರವನ್ನು ನಿಗದಿ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ.

English summary
Karnataka Transport department directed Ola, Uber and Rapido to collect base price set by government plus 5 per cent convenience charge plus GST as total fare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X