ಆಟೋದರ 1 ರೂ., ಮೋದಿಗಾಗಿ 'ಪ್ರಭು' ಸೇವೆ!

ಉಡುಪಿ, ಮೇ 27 : ಆಟೋ ದರ ಸಿಕ್ಕಾಪಟ್ಟೆ ಹೆಚ್ಚಾಗಿದೆ ಎಂದು ಜನರು ದೂರುವುದನ್ನು ಕೇಳಿದ್ದೇವೆ. ಆಟೋ ದರ 1 ರೂ. ಆದರೆ, ಅಚ್ಚರಿಯಾದರೂ ಇದು ಸತ್ಯ. ಕುಂದಾಪುರದಲ್ಲಿ ಆಟೋ ಪ್ರಯಾಣದರ ಕೇವಲ ಒಂದು ರೂ. ಆಗಿತ್ತು.

ಕುಂದಾಪುರದಲ್ಲಿ ಸುಮಾರು 20 ವರ್ಷಗಳಿಂದ ಆಟೋ ಓಡಿಸುತ್ತಿರುವ ಎಸ್.ಸತೀಶ್ ಪ್ರಭು ಅವರು ಮಂಗಳವಾರ ಆಟೋ ಪ್ರಯಾಣದರವನ್ನು 1 ರೂ.ಗೆ ಇಳಿಕೆ ಮಾಡಿದ್ದರು. ಅದು 5 ಕಿ.ಮೀ. ವ್ಯಾಪ್ತಿಯ ತನಕ ಮಾತ್ರ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. [ಮೋದಿ ಸರ್ಕಾರಕ್ಕೆ ಒಂದು ವರ್ಷ, ಓದುಗರ ಅಭಿಪ್ರಾಯ]

Satish Prabhu

ನರೇಂದ್ರ ಮೋದಿ ಅವರ ಅಭಿಮಾನಿಯಾಗಿರುವ ಸತೀಶ್ ಮೋದಿ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಆಟೋ ಪ್ರಯಾಣದರವನ್ನು ಒಂದು ರೂ.ಗೆ ಕಡಿಮೆ ಮಾಡಿದ್ದರು. ದರ ಕಡಿಮೆ ಮಾಡುವ ಮೂಲಕ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ್ದನ್ನು ವಿಶಿಷ್ಟವಾಗಿ ಆಚರಣೆ ಮಾಡಿದರು. [ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ]

ಸಂಗ್ರಹವಾದ ಹಣ ಮೋದಿಗೆ : ನಿಗದಿಯಂತೆ ಆಟೋ ದರ 20 ರೂ. ಇರುತ್ತದೆ ಎಂದುಕೊಂಡು ಸತೀಶ್ ಆಟೋ ಏರಿದವರು ಚಿಲ್ಲರೆಗಾಗಿ ಹುಡುಕಾಡಿದ್ದೂ ಉಂಟು. ಆಟೋದಲ್ಲಿ ಚಿಕ್ಕ ಪೆಟ್ಟಿಗೆ ಇಟ್ಟಿದ್ದ ಸತೀಶ್ ಮಂಗಳವಾರ ಬಂದ ಹಣವನ್ನು ಅದರಲ್ಲಿ ಸಂಗ್ರಹಿಸಿದ್ದಾರೆ. ಈ ಹಣವನ್ನು ಮೋದಿ ಅವರಿಗೆ ಕಳುಹಿಸುವ ಉದ್ದೇಶ ಸತೀಶ್ ಅವರದ್ದು. [ಬನ್ನಿ ಒಟ್ಟಿಗೆ ಕೆಲಸ ಮಾಡೋಣ: ಮೋದಿ ಪತ್ರ]

kundapur

ಕಳೆದ ವರ್ಷವೂ ಮಾಡಿದ್ದರು : ಕಳೆದ ವರ್ಷ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದಾಗಲೂ ಸತೀಶ್ 1 ರೂ. ಪ್ರಯಾಣದರ ಪಡೆದಿದ್ದರು. ಅಂದಹಾಗೆ ದಕ್ಷಿಣ ಕನ್ನಡದಲ್ಲಿ ಕನಿಷ್ಠ ಪ್ರಯಾಣ ದರ 23 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+