ATM ಸರ್ಕಾರದ ಕಲೆಕ್ಷನ್ ವಂಶಾವಳಿ ಪೋಸ್ಟರ್ ಬಿಡುಗಡೆ!
ಬೆಂಗಳೂರು, ಅಕ್ಟೋಬರ್ 20: 2024 ರ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೂರು ರಾಜಕೀಯ ಪಕ್ಷಗಳು ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದು, ಕೆಲ ದಿನಗಳ ಹಿಂದೆ ಗುತ್ತಿಗೆದಾರರ ನಿವಾಸದಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ @DVSadanandGowda ಅವರು ರಾಜ್ಯ ಕಾಂಗ್ರೆಸ್ನ "ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ" ಪೋಸ್ಟರ್ ಬಿಡುಗಡೆಗೊಳಿಸಿದರು.
— BJP Karnataka (@BJP4Karnataka) October 20, 2023
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @nrkbjp, ಶಾಸಕರಾದ ಶ್ರೀ @Ravi_LA, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ… pic.twitter.com/rcYlGJf5cB
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಹಿರಿಯ ಮುಖಂಡ ಕೆ.ಸಿ. ವೇಣುಗೋಪಾಲ್ ಅವರು ರಾಜ್ಯಕ್ಕೆ ಭೇಟಿ ನೀಡಿ ಸಭೆ ನಡೆಸಿ ಹಿಂತಿರುಗಿದ್ದಾರೆ. ಇದರ ಬೆನ್ನಲ್ಲೆ ಬಿಜೆಪಿ ಪಕ್ಷ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈದಿದೆ. ರಾಜ್ಯ ಸರ್ಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿದೆ.

ಹೌದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸರಣಿ ಪೋಸ್ಟರ್ ವಾರ್ ಜೋರಾಗಿದ್ದು, ರಾಜ್ಯ ಬಿಜೆಪಯೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ ಎಂಬ ಪೋಸ್ಟರ್ ಬಿಡುಗಡೆ ಮಾಡಿದೆ. ಎಟಿಎಂ ಸರ್ಕಾರದಲ್ಲಿ ಭ್ರಷ್ಟಾಚಾರದ ದರ್ಬಾರ್ ಎಂಬ ಪೋಸ್ಟರ್ ಬಿಡುಗಡೆ ಮಾಡಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸದ ಡಿ.ವಿ.ಸದಾನಂದಗೌಡ, ಶಾಸಕ ರವಿಸುಬ್ರಹ್ಮಣ್ಯ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ಅವರು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ರಾಜ್ಯ ಬಿಜೆಪಿ ಟ್ವೀಟ್ ನಲ್ಲಿ ಹೇಳಿದ್ದೇನು?
ರಾಜ್ಯಕ್ಕೆ ಹೈಕಮಾಂಡ್ನ ಕಲೆಕ್ಷನ್ ಏಜೆಂಟ್ಗಳಾದ ಸುರ್ಜೇವಾಲ, ವೇಣುಗೋಪಾಲ್ ಬಂದಿದ್ದರು. ಅವರು ನಿಗಮ ಮಂಡಳಿ ನೇಮಕಕ್ಕೆ ರೇಟ್ ಕಾರ್ಡ್ ಫಿಕ್ಸ್ ಮಾಡಿದ್ದಾರೆ.ಕಾಂಗ್ರೆಸ್ ಸ್ನೇಹಿತರು ಕೊಟ್ಟ ನಿಗಮ ಮಂಡಳಿಗಳ ರೇಟ್ ಕಾರ್ಡ್ ಇಂತಿದೆ ಎಂದು ಟ್ವೀಟ್ನಲ್ಲಿ ಬಿಜೆಪಿ ಪಟ್ಟಿ ನೀಡಿದೆ. ಬಿಡಿಎಗೆ 50 ಕೋಟಿ ರೂಪಾಯಿ, BWSSBಗೆ 45 ಕೋಟಿ ರೂಪಾಯಿ, ಕೆಆರ್ಐಡಿಎಲ್ಗೆ 20 ಕೋಟಿ ರೂಪಾಯಿ, ಕಿಯೋನಿಕ್ಸ್-₹15 ಕೋಟಿ, ಕರ್ನಾಟಕ ಉಗ್ರಾಣ ನಿಗಮ-₹12 ಕೋಟಿ, ಬಿಎಂಟಿಸಿಗೆ 10 ಕೋಟಿ ರೂ. ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.
ಸೋಲಿನ ಹತಾಶೆ, ಶೂನ್ಯ ನಾಯಕತ್ವದಿಂದಾಗಿ ಬಿಜೆಪಿಗರಿಗೆ ದೃಷ್ಟಿ ದೋಷದ ಸಮಸ್ಯೆ ಉಂಟಾಗಿದೆ!@BJP4Karnataka ಕಣ್ಣು ಕುರುಡಾದ ಕಾರಣ ಬೇರೆಯವರನ್ನು ಕಾಣೆಯಾಗಿದ್ದಾರೆ ಎನ್ನುತ್ತಿದ್ದಾರೆ! ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮ ಕುರುಡುತನವನ್ನು ಸರಿಪಡಿಸಿಕೊಳ್ಳಲಿ.
— Karnataka Congress (@INCKarnataka) October 19, 2023
ಶೀಘ್ರವೇ ಅಧಿಕಾರ ಕಳೆದುಕೊಂಡ ಹತಾಶೆಯಿಂದ ಹೊರಬರಲಿ, ದೃಷ್ಟಿ ದೋಷ… pic.twitter.com/FvMpHZBs3e
ಹತ್ತು ಹಲವು ನಿಗಮಗಳಿಗೆ ಕಲೆಕ್ಷನ್ ಮಾಸ್ಟರ್ಸ್‌ಗಳಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಸಿ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚು ಮೊತ್ತದ ಕಲೆಕ್ಷನ್ ಸಾಧ್ಯತೆ ಇದೆಯಂತೆ. ಜನರ ಶ್ರಮದ ದುಡಿಮೆಯ ಹಣವನ್ನು ವಲಯವಾರು ಲೂಟಿ ಮಾಡಿ ಹೈಕಮಾಂಡ್‌ಗೆ ತಲುಪಿಸುತ್ತಿರುವ ಕಲೆಕ್ಷನ್ ಮಾಸ್ಟರ್ಗಳು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಬಿಜೆಪಿಗೆ ತಿರುಗೇಟು ಕೊಟ್ಟ ಕಾಂಗ್ರೆಸ್!
ಇನ್ನೂ ಬಿಜೆಪಿ ಟ್ವೀಟ್ಗೆ ತಿರುಗೇಟು ಕೊಟ್ಟ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಬಿಜೆಪಿ ಸೋಲಿನ ಹತಾಶೆ, ಶೂನ್ಯ ನಾಯಕತ್ವದಿಂದಾಗಿ ಬಿಜೆಪಿಗೆ ದೃಷ್ಟಿ ದೋಷ ಉಂಟಾಗಿದೆ. ಕಣ್ಣು ಕುರುಡಾದ ಕಾರಣ ಬೇರೆಯವರನ್ನ ಕಾಣೆಯಾಗಿದ್ದಾರೆ ಎನ್ನುತ್ತಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕುರುಡುತನ ಸರಿಪಡಿಸಿಕೊಳ್ಳಲಿ. ಶೀಘ್ರವೇ ಅಧಿಕಾರ ಕಳೆದುಕೊಂಡ ಹತಾಶೆಯಿಂದ ಹೊರಬರಲಿ. ದೃಷ್ಟಿ ದೋಷ ಸರಿಹೋಗಲಿ ಎಂದು ಹಾರೈಸುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಹೇಳಿದೆ.
ನಿಮ್ಮ ಅಧ್ಯಕ್ಷರಿಗೆ ಅಹಂಕಾರದ ಮದ ಏರಿ ಕಣ್ಣು ಕಾಣಿಸದಿರಬಹುದು. ಡಿಕೆಯನ್ನು ಜೈಲಿಗೆ ಕಳಿಸಲು ನಿಮ್ಮಲ್ಲೇ ಪ್ಲಾನ್ ಬಿ ರೆಡಿ ಇದೆಯಂತೆ? ಕಣ್ಣು ಬಿಟ್ಟು ನೋಡಿ, ಕಾಣದಿದ್ರೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ. ಮಿಂಟೋ ಆಸ್ಪತ್ರೆಯಲ್ಲಿ ಗುಣವಾಗಲಿಲ್ಲ ಅಂದರೆ ನನ್ನ ಕಚೇರಿಗೆ ಬನ್ನಿ. ನಿಮ್ಮ ಕಣ್ಣಿಗೆ ಉಚಿತ ಖಚಿತ ಹಾಗೂ ನಿಶ್ಚಿತವಾಗಿ ಚಿಕಿತ್ಸೆ ಕೊಡಿಸುತ್ತೇನೆ ಎಂದಿದೆ.
ಕಾಂಗ್ರೆಸ್ ತಿರುಗೇಟು ಕೊಟ್ಟ ಯತ್ನಾಳ್!
ಇನ್ನೂ ರಾಜ್ಯ ಕಾಂಗ್ರೆಸ್ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ. ನಿಮ್ಮ ಅಧ್ಯಕ್ಷರಿಗೆ ಅಹಂಕಾರದ ಮದ ಏರಿ ಕಣ್ಣು ಕಾಣಿಸುತ್ತಿಲ್ಲವಿರಬಹುದು. ಡಿಕೆಶಿಯನ್ನು ಜೈಲಿಗೆ ಕಳುಹಿಸೋಕ್ಕೆ ನಿಮ್ಮಲ್ಲೇ ಪ್ಲಾನ್ ಬಿ ರೆಡಿ ಇದೆಯಂತೆ? ಕಣ್ಣು ಬಿಟ್ಟು ನೋಡಿಕೊಳ್ಳಿ, ಕಾಣಲಿಲ್ಲ ಅಂದರೆ "ಮಿಂಟೋ ಆಸ್ಪತ್ರೆಯಲ್ಲಿ" ಚಿಕಿತ್ಸೆ ಪಡೆಯಿರಿ. ಮಿಂಟೋ ಆಸ್ಪತ್ರೆಯಲ್ಲಿ ಗುಣವಾಗಲಿಲ್ಲ ಅಂದರೆ ನನ್ನ ಕಚೇರಿಗೆ ಬನ್ನಿ ನಿಮ್ಮ ಕಣ್ಣಿಗೆ ಚಿಕಿತ್ಸೆ ಉಚಿತ ಖಚಿತ ಹಾಗು ನಿಶ್ಚಿತವಾಗಿ ಕೊಡಿಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications