ಸಿದ್ದರಾಮಯ್ಯ ರಾಜೀನಾಮೆ ಕುರಿತ ಜ್ಯೋತಿಷ್ಯ ಭವಿಷ್ಯ ಮುನ್ನೆಲೆಗೆ: ರಾಜ್ಯ, ಕಾಂಗ್ರೆಸ್ ಇಬ್ಬಾಗದ ಮುನ್ಸೂಚನೆ ನಿಜವಾಗುತ್ತಾ?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅನೇಕ ಬದಲಾವಣೆಗಳು ಘಟಿಸಿವೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿಎಂ ಸಿದ್ದರಾಮಯ್ಯ ಅವರು ವರಿಷ್ಠರ ಸೂಚನೆಯಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರದಿಂದ ಇಳಿದಿದ್ದಾರೆ. ಕರ್ನಾಟಕದ ನಾಯಕತ್ವ ಬದಲಾವಣೆ ಕುರಿತು 2025ರಲ್ಲೇ ನುಡಿದಿದ್ದ ಜ್ಯೋತಿಷ್ಯ ಭವಿಷ್ಯ ನಿಜವಾಗಿದೆ. ಅಲ್ಲದೇ 'ಮುಂದೆ ಕಾಂಗ್ರೆಸ್ ಅರ್ಧ ಭಾಗವಾಗುತ್ತದೆ'. 'ಕರ್ನಾಟಕದ ಬಗ್ಗೆ, ರಾಜ್ಯದ ಜನರು, ಮೈಸೂರು ನಗರ' ಕುರಿತು ಒಂದಷ್ಟು ಮುನ್ಸೂಚನೆ ಸಹ ಅವರು ನೀಡಿದ್ದಾರೆ. ಬೆಲೆ ಏರಿಕೆ ಸಂಕಷ್ಟದಲ್ಲಿರುವ ರಾಜ್ಯ ಜನರು ಮುಂದಿನ ದಿನಗಳಲ್ಲಿ ಮಹಾ ಬದಲಾವಣೆಗಳಿಗೆ ಸಾಕ್ಷಿ ಆಗಲಿದ್ದಾರೆಯೇ?

ಹೌದು, ಹೀಗೊಂದು ಪ್ರಶ್ನೆ ಇಂದಿನ ಸನ್ನಿವೇಶದಲ್ಲಿ ಕಾಡಲು ಅರಂಭಿಸಿದೆ. ಗುರುವಾರ (ಮೇ 28) ಮಧ್ಯಾಹ್ನ 3 ಗಂಟೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ್ದಾರೆ. ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂಬುದು ರಾಜ್ಯಕ್ಕೆ ಗೊತ್ತಾಗಿದೆ. ಈ ಎಲ್ಲ ಬೆಳವಣಿಗೆ ನಡುವೆ ಕಾಂಗ್ರೆಸ್‌ಗೆ, ರಾಜ್ಯಕ್ಕೆ ಮತ್ತೊಂದು ಆಘಾತ ಎದುರಾಗುವ ಸಂಭವವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಕಾರಣ ವರ್ಷದ ಹಿಂದೆ ಖ್ಯಾತ ಜ್ಯೋತಿಷಿ ಪ್ರಶಾಂತ ಕಿಣಿ (Prashanth Kini) ಅವರು ರಾಜ್ಯ ರಾಜಕಾರಣ ಮತ್ತು ಕಾಂಗ್ರೆಸ್ ಕುರಿತು ನುಡಿದಿದ್ದ ಭವಿಷ್ಯ. ಇದೇ ಜ್ಯೂತಿಷಿ ಈ ಹಿಂದೆ ಎಲ್‌ಪಿಜಿ ಬಿಕ್ಕಟ್ಟಿನ ಕುರಿತು ಭವಿಷ್ಯು ನುಡಿದಿದ್ದರು. ಇಂದಿನ ಸನ್ನಿವೇಶ ನೋಡಿದರೆ ಅವರ ಮಾತು ನಿಜ ಅನ್ನಿಸದೇ ಇರದು.

Astrologer

ನಿಜವಾಯ್ತು ಸಿಎಂ ಸಿದ್ದರಾಮಯ್ಯ ಅಧಿಕಾರ ಭವಿಷ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅವರ ಅಧಿಕಾರ ಕಳೆದುಕೊಳ್ಳಿದ್ದಾರೆ ಎಂದು ಹೇಳಿದ್ದ ಪ್ರಶಾಂತ ಕಿಣಿ ಅವರ ಭವಿಷ್ಯ ಇದೀಗ ನಿಜವಾಗಿದೆ. ಕಳೆದ ಆರು ತಿಂಗಳಿನಿಂದ ಕಾಂಗ್ರೆಸ್ ಪಕ್ಷದಲ್ಲಿ ನಡೆಸಿದ್ದ ಕಸರತ್ತಿಗೆ ತೆರೆ ಬಿದ್ದಿದ್ದು, ವರಿಷ್ಠರ ಸೂಚನೆ ಮೇರೆಗೆ ಸರ್ಕಾರ ರಚನೆ ವೇಳೆ ನೀಡಿದ ಒಪ್ಪಂದದ ಮಾತಿನಂತೆ ಡಿಕೆ ಶಿವಕುಮಾರ್ ಅವರು ಸಿಎಂ ಆಗಲಿದ್ದಾರೆ. ಇನ್ನಿತರ ವಿಷಯ ಕುರಿತು ನುಡಿದ ಜ್ಯೂತಿಷಿಗಳ ಮಾತು ನಿಜವಾಗುತ್ತಾ? ಎಂಬ ಪ್ರಶ್ನೆ ಇದೀಗ ಎದುರಾಗಿದೆ. ನಾಯಕತ್ವ ಬದಲಾವಣೆ ಬಗ್ಗೆ ಭವಿಷ್ಯ ನಿಜವಾಗುತ್ತಿದ್ದಂತೆ ಅವರ ಇತರ ಮುನ್ಸೂಚನೆಗಳಿಗೂ ಪುಷ್ಠಿ ಸಿಕ್ಕಂತಾಗಿದೆ. ಜ್ಯೂತಿಷ್ಯ ನಂಬುವವರು ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದೇನಾಗುತ್ತೋ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಅನೇಕರಿಗೆ ತಲೆಯಲ್ಲಿ ಹುಳ ಬಿಟ್ಟಂತಾಗಿದೆ.

ಹೈಕಮಾಂಡ್ ಆಫರ್‌ಗೆ ನೋ ಎಂದ್ರಾ ಸಿದ್ದರಾಮಯ್ಯ? ಡಿಕೆಶಿಗೆ ಮತ್ತೆ ನಿರಾಸೆ, ದೆಹಲಿಯಲ್ಲಿ ಚರ್ಚೆ ಆಗಿದ್ದೇನು?
ಹೈಕಮಾಂಡ್ ಆಫರ್‌ಗೆ ನೋ ಎಂದ್ರಾ ಸಿದ್ದರಾಮಯ್ಯ? ಡಿಕೆಶಿಗೆ ಮತ್ತೆ ನಿರಾಸೆ, ದೆಹಲಿಯಲ್ಲಿ ಚರ್ಚೆ ಆಗಿದ್ದೇನು?

ಎರಡು ಭಾರಿ ಭವಿಷ್ಯ, ರಾಜ್ಯಕ್ಕೆ ಕಾದಿದೆಯಾ ಸಂಕಷ್ಟ?

ಪ್ರಶಾಂತ ಕಿಣಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ, 2025ರ ಸೆಪ್ಟಂಬರ್ 24 ರಂದು 'ಕರ್ನಾಟಕ ಕಾಂಗ್ರೆಸ್ ಅರ್ಧ ಭಾಗವಾಗಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ. ಕರ್ನಾಟಕದ ಜನರು ಬೆಲೆ ತೆರಲಿದ್ದಾರೆ. ಮೈಸೂರು ತೊಂದರೆಗಳನ್ನು ಎದುರಿಸಲಿದೆ. ಭವಿಷ್ಯದಲ್ಲಿ ಕರ್ನಾಟಕ ಅರ್ಧ ಭಾಗವಾಗಲಿದೆ' ಅಂತಲೂ ಅವರು ಭವಿಷ್ಯ ನುಡಿದಿದ್ದರು.

ಇತ್ತೀಚೆಗೆ ಇನ್ನೂ ದಾವಣಗೆರೆ ಹಾಗೂ ಬಾಗಲಕೋಟೆಗೆ ಉಪಚುನಾವಣೆ ನಡೆದು ಎರಡರಲ್ಲೂ ಕಾಂಗ್ರೆಸ್ ಗೆದ್ದು ಬೀಗಿದೆ. ಚುನಾವಣೆ ವೇಳೆ ಏಪ್ರಿಲ್ 12ರಂದು ಮತ್ತೆ ರಾಜ್ಯ ರಾಜಕಾರಣ ಕುರಿತು ಮಾತನಾಡಿದ್ದ ಇದೇ ಜ್ಯೋತಿಷಿ ಪ್ರಶಾಂತ ಕಿಣಿ ಅವರು, 'ಉಪಚುನಾವಣೆ ಫಲಿತಾಂಶ ಬಿಡುಗಡೆ ಬಳಿಕ ಕಾಂಗ್ರೆಸ್ ಒಡೆಯುತ್ತದೆ. ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳಲಿದ್ದಾರೆ' ಎಂದು ಮತ್ತೆ ಹೇಳಿದ್ದರು. ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೆ ಇವರ ಮುನ್ಸೂಚನೆಗಳು ನಿಜವಾಗುತ್ತವೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅವರ ಎಕ್ಸ್ ಪೋಸ್ಟ್‌ ಮತ್ತೆ ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ.

Astrologer

ನೆಟ್ಟಿಗರು ಮುಂದಿಟ್ಟ ಪ್ರಶ್ನೆಗಳೇನು?

ಈ ಪೋಸ್ಟ್ ನೋಡಿದ್ದ ನೆಟ್ಟಿಗರಲ್ಲಿ ಕೆಲವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ, ಹುಬ್ಬಳ್ಳಿ ಧಾರವಾಡ ಉತ್ತರ ಕರ್ನಾಟಕದ ರಾಜಧಾನಿ ಆಗುತ್ತಾ? ಎಂದು ಕೇಳಿದ್ದಾರೆ. ತಮಿಳುನಾಡಿನಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದ ಟಿವಿಕೆ ಎಷ್ಟು ಸ್ಥಾನ ಗಳಿಸುತ್ತದೆ? ಎಂದು ಕಾಮೆಂಟ್ ಮಾಡಿ ಕೇಳಿದ್ದರು. ಕೆಲವರು ನಿಮ್ಮ ಭವಿಷ್ಯ ಆಸಕ್ತಿದಾಯಕವಾಗಿದೆ ಅಂತಲೂ ಪ್ರತಿಕ್ರಿಯಿಸಿದ್ದಾರೆ. ಎಲ್‌ಪಿಜಿ ಬಿಕ್ಕಟ್ಟಿನ ಹೇಳಿದ್ದರು, ನಾನು ಈಗಲೇ ಗ್ಯಾಸ್ ಬುಕ್ ಮಾಡುವೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+