ಬೆಂಗಳೂರಿನಲ್ಲಿ 3BHKಗೆ ₹1.1 ಲಕ್ಷ ಬಾಡಿಗೆ! ನೆಟ್ಟಿಗರ ಕಣ್ಣು ತೆರೆಸಿದ ವೈರಲ್ ಪೋಸ್ಟ್

ಬೆಂಗಳೂರು ನಗರದಲ್ಲಿ ಮನೆ ಬಾಡಿಗೆ ದರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಉದ್ಯೋಗಿಗಳಿಗೆ ವಾಸಕ್ಕೆ ಮನೆ ಹುಡುಕುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಐಟಿ ಕಂಪನಿಗಳು ಮತ್ತು ಬಿಸಿನೆಸ್ ಪಾರ್ಕ್‌ಗಳ ಸುತ್ತಮುತ್ತ ಇರುವ ಪ್ರದೇಶಗಳಲ್ಲಿ ಬಾಡಿಗೆ ದರಗಳು ಸಾಮಾನ್ಯ ಜನರನ್ನು ಬೆಚ್ಚಿಬೀಳಿಸುತ್ತಿವೆ.

ಇದೀಗ ಬೆಂಗಳೂರಿನ 3BHK ಫ್ಲಾಟ್‌ವೊಂದರ ಬಾಡಿಗೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಆರಂಭವಾಗಿದೆ. ತಿಂಗಳಿಗೆ ₹1.1 ಲಕ್ಷ ಬಾಡಿಗೆ ಕೇಳಲಾಗಿರುವ ಈ ಫ್ಲಾಟ್‌ನ ಮಾಹಿತಿ ವೈರಲ್ ಆಗಿದ್ದು, "ಇದು ಯಾರಾದರೂ ಒಬ್ಬರ ಮಾಸಿಕ ಸಂಬಳವೇ ಆಗಿರಬಹುದು" ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

Bengaluru

ಈ ಚರ್ಚೆಗೆ ಕಾರಣವಾದದ್ದು ಸೋಶಿಯಲ್ ಮೀಡಿಯಾ X ನಲ್ಲಿ ಹಂಚಿಕೊಳ್ಳಲಾದ ಒಂದು ಪೋಸ್ಟ್‌. ಅದರಲ್ಲಿ ಬೆಂಗಳೂರಿನಲ್ಲಿ 3 ಬಿಎಚ್‌ಕೆಗೆ ₹1.1 ಲಕ್ಷ ಬಾಡಿಗೆನಾ? ಇದು ಯಾರಾದರೂ ಒಬ್ಬರ ತಿಂಗಳ ಸಂಬಳ" ಎಂದು ಬರೆದು ಫ್ಲಾಟ್‌ ಲಿಸ್ಟಿಂಗ್‌ನ ಸ್ಕ್ರೀನ್‌ಶಾಟ್‌ ಹಂಚಿಕೊಳ್ಳಲಾಗಿತ್ತು.

ಈ ಫ್ಲಾಟ್‌ ದೊಮ್ಮಲೂರು ಮತ್ತು ಇಂದಿರಾನಗರದ ಸಮೀಪದ ಎಂಬಸಿ ಗಾಲ್ಫ್ ಲಿಂಕ್ಸ್ ಬಿಸಿನೆಸ್ ಪಾರ್ಕ್ ಹತ್ತಿರ ಇರುವ ಸೆಮಿ-ಫರ್ನಿಚರ್ಡ್‌ ಕಾರ್ನರ್ 3 ಬಿಎಚ್‌ಕೆ ಎಂದು ಹೇಳಲಾಗಿದೆ. ಸುಮಾರು 1,800 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಖಾಸಗಿ ಟೆರೇಸ್‌, ಬಾಲ್ಕನಿ, ಪೂಜಾ ಕೊಠಡಿ, ಮಾಡ್ಯುಲರ್ ಕಿಚನ್ ಹಾಗೂ ಮರದ ಫ್ಲೋರಿಂಗ್ ಸೌಲಭ್ಯಗಳಿವೆ.

Bengaluru Rent: ಬೆಂಗಳೂರಲ್ಲಿ ತಿಂಗಳ ಬಾಡಿಗೆ 35,000 ಕೊಟ್ಟರೂ
Bengaluru Rent: ಬೆಂಗಳೂರಲ್ಲಿ ತಿಂಗಳ ಬಾಡಿಗೆ 35,000 ಕೊಟ್ಟರೂ "ಮೂರ್ಖ" ಎಂದ ಮನೆ ಮಾಲೀಕ, ಕಾರಣವೇನು

ತಿಂಗಳಿಗೆ 1.1 ಲಕ್ಷ ರೂ. ಬಾಡಿಗೆಯ ಜೊತೆಗೆ ಸುಮಾರು ₹6,000 ಮೆಂಟಿನೆನ್ಸ್ ಶುಲ್ಕ ಮತ್ತು ₹4 ಲಕ್ಷ ಸೆಕ್ಯುರಿಟಿ ಡೆಪಾಸಿಟ್‌ ಕೂಡ ಕೇಳಲಾಗಿದೆ. ಈ ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ನಲ್ಲಿ ಸ್ವಿಮ್ಮಿಂಗ್ ಪೂಲ್‌, ಜಿಮ್‌, ಟೆನಿಸ್ ಕೋರ್ಟ್‌, ಸ್ಕ್ವಾಶ್ ಕೋರ್ಟ್‌, ಸ್ಕೇಟಿಂಗ್ ರಿಂಕ್‌, ಉದ್ಯಾನವನ ಹಾಗೂ ಸಮುದಾಯ ಭವನದಂತಹ ಸೌಲಭ್ಯಗಳೂ ಇದ್ದವು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕೆಲವರು ಈ ಸೌಲಭ್ಯಗಳನ್ನು ಗಮನಿಸಿದರೆ ಬಾಡಿಗೆ ದರ ಸಮಂಜಸವಾಗಿದೆ ಎಂದರೆ, ಇನ್ನೂ ಹಲವರು ಇಲ್ಲ ಇದು ತುಂಬಾ ಜಾಸ್ತಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಹಗಲು ದರೋಡೆ. ಇಷ್ಟು ಹಣ ಕೊಡುವವರು ಮೂರ್ಖರು ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.

Bengaluru Rent: ಬೆಂಗಳೂರಿನಲ್ಲಿ ಬಾಡಿಗೆ-ಲೀಸ್ ಮನೆ ಹುಡುಕುವವರೇ ಎಚ್ಚರ, ಸದ್ದಿಲ್ಲದೆ ನಡೆದಿದೆ ₹100 ಕೋಟಿ ಹಗರಣ
Bengaluru Rent: ಬೆಂಗಳೂರಿನಲ್ಲಿ ಬಾಡಿಗೆ-ಲೀಸ್ ಮನೆ ಹುಡುಕುವವರೇ ಎಚ್ಚರ, ಸದ್ದಿಲ್ಲದೆ ನಡೆದಿದೆ ₹100 ಕೋಟಿ ಹಗರಣ

ಮತ್ತೊಬ್ಬರು ಇದು ತುಂಬಾ ಹಳೆಯ ಕಟ್ಟಡ. ಕಟ್ಟಡಗಳು ತುಂಬ ಹತ್ತಿರದಲ್ಲಿವೆ, ಚಾಳ್ ಮಾದರಿಯಲ್ಲಿ ಇದೆ ಎಂದು ಬರೆದಿದ್ದಾರೆ. ಇನ್ನೊಬ್ಬರು ಮುಂಬೈನೊಂದಿಗೆ ಹೋಲಿಕೆ ಮಾಡಿ, ಮುಂಬೈನಲ್ಲಿ ಇದೇ ರೀತಿಯ ಫ್ಲಾಟ್‌ಗೆ ತಿಂಗಳಿಗೆ ₹4 ಲಕ್ಷ ಬಾಡಿಗೆ ಕೇಳುತ್ತಾರೆ ಎಂದು ಹೇಳಿದ್ದಾರೆ.

ಕೆಲವರು ಆ ಅಪಾರ್ಟ್‌ಮೆಂಟ್‌ ಬಗ್ಗೆ ವೈಯಕ್ತಿಕ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. "ಈ ಅಪಾರ್ಟ್‌ಮೆಂಟ್‌ ನಮ್ಮ ಮನೆಯ ಪಕ್ಕದಲ್ಲೇ ಇದೆ. ಮನೆಯ ಮಾಲೀಕರು ತುಂಬಾ ಕಠಿಣ ಸ್ವಭಾವದವರು. 20 ವರ್ಷ ಹಳೆಯ ಕಟ್ಟಡ ಇದಾಗಿದ್ದು ಹೊರಗಡೆಯೇ ಬಿರುಕುಗಳು ಕಾಣಿಸುತ್ತವೆ" ಎಂದು ಒಬ್ಬರು ಬರೆದಿದ್ದಾರೆ.

ಬೆಂಗಳೂರಿನಲ್ಲಿ ಇಂತಹ ದುಬಾರಿ ಮನೆಗಳನ್ನೂ ಜನರು ತೆಗೆದುಕೊಳ್ಳುತ್ತಿರುವುದು ಫ್ಲಾಟ್‌ಮೇಟ್‌ಗಳ ಜೊತೆ ಬಾಡಿಗೆ ಹಂಚಿಕೊಳ್ಳುವುದರಿಂದ ಸಹಾಯವಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. 3 ರಿಂದ 4 ಜನ ಸೇರಿ ಬಾಡಿಗೆ ಹಂಚಿಕೊಳ್ಳುವುದರಿಂದ ಜನರು ಇಂತಹ ಮನೆಗಳನ್ನೂ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+