ನಿಜವಾದ ಬಿಗ್‌ಬಾಸ್‌ ವಿನ್ನರ್‌ ಗಿಲ್ಲಿ ಅಲ್ಲ, ನಿರ್ಮಲಾ ಸೀರಾರಾಮನ್;‌ ಸದನದಲ್ಲಿ ಪ್ರದೀಪ್ ಈಶ್ವರ್ ಚರ್ಚೆ

ಬೆಂಗಳೂರು: ಕರ್ನಾಟಕದಲ್ಲಿ ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ ಹೆಸರು ಇಂದಿಗೂ ಎಲ್ಲೆಡೆ ಚರ್ಚೆಯಲ್ಲಿದೆ. ರಾಜ್ಯಾದ್ಯಂತ ಗಿಲ್ಲಿ ಜನಪ್ರಿಯತೆ ಹೆಚ್ಚಿದ್ದು, ಬಿಗ್‌ ಬಾಸ್‌ ಕನ್ನಡ 12 ವಿನ್ನರ್ ಆಗಿರುವ ಗಿಲ್ಲಿಗೆ 50 ಲಕ್ಷ ರೂಪಾಯಿ ಸಿಕ್ಕಿದೆ. ಇನ್ನೂ ನಿಜವಾದ ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ಅಲ್ಲ, ನಿರ್ಮಲಾ ಸೀರಾರಾಮನ್‌ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಸದನದಲ್ಲಿ ಹೇಳಿದ್ದಾರೆ.

ರಾಜ್ಯ ಅಧಿವೇಶನದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತೆರಿಗೆ ವಿಚಾರದಲ್ಲಿ ಟೀಕಿಸುವಾಗ ಬಿಗ್ ಬಾಸ್ ನಟ ಗಿಲ್ಲಿಯ ಹೆಸರು ಪ್ರಸ್ತಾಪ ಮಾಡಿದ್ದಾರೆ. ಬಿಗ್‌ ಬಾಸ್‌ ವಿನ್ನರ್‌ ಲ್ಲಿಗೆ ಸಿಕ್ಕ 50 ಲಕ್ಷದಲ್ಲಿ ಅರ್ಧಕ್ಕಿಂತ ಹೆಚ್ಚು ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಇದರಿಂದ ನಿಜವಾದ ವಿನ್ನರ್ ನಿರ್ಮಲಾ ಸೀತಾರಾಮನ್ ಎಂದಿದ್ದಾರೆ.

Bigg Boss winner is not Gilli Nata it is Nirmala Sitharaman says MLA Pradeep Eshwar

ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಶೋ ಕಡೆಯಿಂದ 50 ಲಕ್ಷ ರೂಪಾಯಿ ಸಿಕ್ಕಿದೆ. ಆದರೆ, ಇದರಲ್ಲಿ ಸಂಪೂರ್ಣ ಹಣ ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ಅವರ ಕೈ ಸೇರುವದಿಲ್ಲ. ಈ ವಿಷಯವನ್ನು ಪ್ರದೀಪ್ ಈಶ್ವರ್ ಪ್ರಸ್ತಾಪಿಸಿದ್ದಾರೆ. ಎಲ್ಲರೂ ಬಿಗ್ ಬಾಸ್ ವಿನ್ನರ್ ಗಿಲ್ಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಆದರೆ, ಶೋನ ವಿನ್ನರ್ ಅವರಲ್ಲ, ನಿರ್ಮಲಾ ಸೀತಾರಾಮನ್. ಕೊಟ್ಟಿರೋ 50 ಲಕ್ಷ ರೂಪಾಯಿಗೆ 18 ಪರ್ಸೆಂಟ್ ಜಿಎಸ್​ಟಿ, 13 ಇನ್​​ಕಮ್​ ಟ್ಯಾಕ್ಸ್, 4 ಪರ್ಸೆಂಟ್ ಸೆಸ್. ಎಲ್ಲಾ ಸೇರಿ 52 ಪರ್ಸೆಂಟ್ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಹೋಗುತ್ತದೆ. ನಿಜವಾದ ಬಿಗ್ ಬಾಸ್ ವಿನ್ನರ್ ನಿರ್ಮಲಾ ಎಂದು ಪ್ರದೀಪ್‌ ಈಶ್ವರ್‌ ಅವರು ಸದನದಲ್ಲಿ ಪ್ರಸ್ತಾಪಿಸಿದ್ದಾರೆ.

50 ಲಕ್ಷಕ್ಕೆ 18% ಜಿಎಸ್‌ಟಿ, 13% ಇನ್‌ಕಮ್ ಟ್ಯಾಕ್ಸ್, 4% ಸೆಸ್ ಸೇರಿ ಸುಮಾರು 52% ತೆರಿಗೆ ಹೋಗುತ್ತದೆ. ಗಿಲ್ಲಿಗೆ 35 ಲಕ್ಷ ಮಾತ್ರ ಸಿಗುತ್ತದೆ ಎಂದು ಪ್ರದೀಪ್‌ ಈಶ್ವರ್‌ ಹೇಳಿ, ಇದರಿಂದ ಕೇಂದ್ರದ ತೆರಿಗೆ ನೀತಿಯನ್ನು ಟೀಕಿಸಿದ್ದಾರೆ. ಇನ್ನೂ ಗಿಲ್ಲಿ ನಟ ಅವರಿಗೆ 50 ಲಕ್ಷದಲ್ಲಿ 35 ಲಕ್ಷ ರೂಪಾಯಿ ಸಿಗುತ್ತಿದೆ ಎಂಬುದು ನಿಜವಾದ ಲೆಕ್ಕ. ಪ್ರದೀಪ್ ಅವರು ಇದನ್ನು ಸ್ವಲ್ಪ ಎಗ್ಸಾಗರೇಷನ್ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ. 50 ಲಕ್ಷದ ಜೊತೆ ಗಿಲ್ಲಿ ನಟನಿಗೆ ಸುದೀಪ್ ಕಡೆಯಿಂದ 10 ಲಕ್ಷ ರೂಪಾಯಿ, ಮಾರುತು ಸುಜುಕಿ ಕಡೆಯಿಂದ ವಿಕ್ಟೋರಿಸ್ ಕಾರು ಸಿಕ್ಕಿದೆ.

ಸಿದ್ದರಾಮಯ್ಯ ಶ್ರೀರಾಮಚಂದ್ರ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಬಡ ಜನರ ಹೊಟ್ಟೆ ತುಂಬಿಸುತ್ತಿದ್ದಾರೆ. ನನ್ನ ಪಾಲಿನ ಶ್ರೀರಾಮಚಂದಿರ ಅವರು.ರಾಮಮಂದಿರ ನಿರ್ಮಾಣ ಮಾಡಿದರೆ ದೇಶಪ್ರೇಮ ಎನಿಸಿಕೊಳ್ಳುವುದಿಲ್ಲ. ಬಡವರ ಹೊಟ್ಟೆ ತುಂಬಿಸುವುದು ಕೂಡ ದೇಶಪ್ರೇಮ. ಆ ಕೆಲಸವನ್ನು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+