ಸಂಪುಟ ರಚನೆ: ಹತ್ತೇ 10ನಿಮಿಷದಲ್ಲಿ ಪಟ್ಟಿಯಿಂದ ಎಗರಿಹೋದ ಪ್ರಭಾವಿ ಮುಖಂಡನ ಹೆಸರು
ಬೆಂಗಳೂರು, ಆ 20: ಸಂಪುಟ ರಚನೆ ಮತ್ತು ವಿಸ್ತರಣೆಯ ವೇಳೆ ಎಲ್ಲರನ್ನೂ ಸಮಾಧಾನ ಪಡಿಸಲು ಸಾಧ್ಯವಿಲ್ಲ. ಬಹಿರಂಗ ಕೋಪತಾಪಗಳು ಇದ್ದಿದ್ದೇ. ಆದರೆ, ನಿಷ್ಟಾವಂತ, ಹಿರಿಯ ಮುಖಂಡನ ಹೆಸರು ಹತ್ತೇ ಹತ್ತು ನಿಮಿಷದಲ್ಲಿ ಎಗರಿ ಹೋಗಬೇಕೆಂದರೆ, ಏನಿರಬಹುದು ಕಾರಣ?
ಹೌದು, ಉತ್ತರ ಕರ್ನಾಟಕ ಭಾಗದ ಪ್ರಭಾವಿ ಮುಖಂಡ, ಯಡಿಯೂರಪ್ಪನವರ ಆಪ್ತವಲಯದಲ್ಲಿ ಕಾಣಿಸುವ ಹಿರಿಯ ಮುಖಂಡರೊಬ್ಬರ ಹೆಸರು, ಸಂಪುಟ ರಚನೆಯ ವೇಳೆ, ಹತ್ತು ನಿಮಿಷದ ಹಿಂದೆ ಇದ್ದದ್ದು 'ಗಾಯಬ್' ಆಗಿ ಹೋಗಿದೆ. ಓವರ್ ಟು ಉಮೇಶ್ ಕತ್ತಿ...
" ನಾನು 35ವರ್ಷದಿಂದ ಶಾಸಕನಾಗಿದ್ದವನು. ಪಕ್ಷಕ್ಕೆ ನಿಷ್ಟನಾಗಿದ್ದೇನೆ. ಹಲವು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. 2008-2013ರ ಬಿಜೆಪಿ ಆಡಳಿತದ ವೇಳೆಯೂ ಕೆಲಸ ಮಾಡಿದ್ದೇನೆ" ಎಂದು ಉಮೇಶ್ ಕತ್ತಿ ಹೇಳಿದರು.

"ಬೆಳಗ್ಗೆ ಆರು ಗಂಟೆಗೆ ನನ್ನ ಹೆಸರಿತ್ತು, ಆರು ಹತ್ತಕ್ಕೆ ಅಥವಾ ಎಂಟಕ್ಕೆ ನನ್ನ ಹೆಸರಿಲ್ಲ ಎನ್ನುವ ವಿಚಾರ ಗೊತ್ತಾಯಿತು" ಎಂದು ಉಮೇಶ್ ಕತ್ತಿ ಬೇಸರ ವ್ಯಕ್ತಪಡಿಸಿದರು.
" ಸಂಪುಟ ರಚನೆಯ ವೇಳೆ ನನ್ನ ಹೆಸರನ್ನು ಪರಿಗಣಿಸುತ್ತಾರೆ ಎನ್ನುವ ಆಸೆಯಿತ್ತು. ಅರ್ಧ ಸಂಪುಟ ವಿಸ್ತರಣೆ ಮಾಡಿದ್ದಾರೆ. ಇನ್ನೂ ಸಂಪುಟ ವಿಸ್ತರಣೆಯಾಗಬೇಕು, ಕಾದು ನೋಡುತ್ತೇನೆ" ಎನ್ನುವ ವಿಶ್ವಾಸದ ಮಾತನ್ನು ಕತ್ತಿ ಹೇಳಿದರು.
"ನನಗಿನ್ನೂ ವಯಸ್ಸಿದೆ, ಸಚಿವನಾಗಬೇಕೆನ್ನುವ ಹಂಬಲವಿದೆ. ಪ್ರಮುಖವಾಗಿ, ಉತ್ತರ ಕರ್ನಾಟದ ಭಾಗ ಪ್ರವಾಹ ಪೀಡಿತವಾಗಿದೆ. ಪರಿಹಾರ ಕೆಲಸ ಇನ್ನೂ ಜೋರಾಗಿ ನಡೆಯಬೇಕಾಗಿದೆ" ಎಂದು ಉಮೇಶ್ ಕತ್ತಿ ನುಡಿದರು.












Click it and Unblock the Notifications