ಏಪ್ರಿಲ್ 1ರಿಂದ ಯಾವ್ಯಾವುದರ ಬೆಲೆಯಲ್ಲಿ ಹೆಚ್ಚಳ?

Posted By:
Subscribe to Oneindia Kannada

ಜನಸಾಮಾನ್ಯರ ಆದಾಯ ಹೆಚ್ಚಾಗುತ್ತೋ, ಬಿಡುತ್ತೋ.. ಸರಕಾರ ವರ್ಷದಿಂದ ವರ್ಷಕ್ಕೆ ತೆರಿಗೆ ಏರಿಸುವುದನ್ನು ಮಾತ್ರ ಬಿಡುವುದಿಲ್ಲ. ತೆರಿಗೆ ಏರಿಸಿದ ಮೇಲೆ ಆಡಳಿತ ಯಂತ್ರ ಚುರುಕಾಗುತ್ತೋ, ಮೂಲಭೂತ ಸೌಕರ್ಯದಲ್ಲಿ ಬದಲಾವಣೆಯಾಗುತ್ತೋ ಅದೂ ಇಲ್ಲಾ...

2016-17ನೇ ಸಾಲಿನ ಕರ್ನಾಟಕ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಜನಸಾಮಾನ್ಯರ ಜೇಬಿಗೆ ಸಖತ್ ಕತ್ತರಿ ಬೀಳುವ ಕೆಲವೊಂದು ಘೋಷಣೆಗಳನ್ನು ಮಾಡಿದ್ದರು. ಯಾಕೆ ತೆರಿಗೆ ಏರಿಸುತ್ತಿದ್ದೇವೆ ಎನ್ನುವುದಕ್ಕೆ ಮುಖ್ಯಮಂತ್ರಿಗಳು ಕಾರಣವನ್ನೂ ನೀಡಿದ್ದರು. (ಕರ್ನಾಟಕದಲ್ಲಿ ವಿದ್ಯುತ್ ದರಗಳು ಏರಿಕೆ)

ಗುರುವಾರ (ಮಾ31) ಮುಕ್ತಾಯಗೊಂಡ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು, ವಿರೋಧ ಪಕ್ಷಗಳ ವಿರೋಧದ ನಡುವೆಯೂ ಬಜೆಟ್ ಗೆ ಸದನದಲ್ಲಿ ಅನುಮೋದನೆ ಪಡೆದುಕೊಂಡಿದ್ದಾರೆ.

ಇಂದಿನಿಂದ ಅರ್ಥಾತ್ ಮೂರ್ಖರ ದಿನವೆಂದೇ ಹೆಸರಾಗಿರುವ ಏಪ್ರಿಲ್ ಒಂದರಂದು ಹೊಸ ತೆರಿಗೆ ಪದ್ದತಿ ಜಾರಿಗೆ ಬರಲಿದೆ. ಹಾಗಾಗಿ, ಕೆಲವೊಂದು ದೈನಂದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಲಿದೆ.

ದಿನನಿತ್ಯಕ್ಕೆ ಅಗತ್ಯವಿರುವ ವಸ್ತುಗಳ ಬೆಲೆ ಏರಿಕೆಯಾಗುವುದರಿಂದ ಇದರ ಪರಿಣಾಮ ನೇರವಾಗಿ ಜನರಿಗೆ ಬೀಳುವುದು ಒಂದೆಡೆಯಾದರೆ, ಹೊಸ ತೆರಿಗೆಯ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹರಿದುಬರಲಿದೆ. (ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆ)

ಇಂದಿನಿಂದ ಯಾವುದು ತುಟ್ಟಿಯಾಗಲಿದೆ ಎನ್ನುವುದನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ವಿದ್ಯುತ್ ದರ

ವಿದ್ಯುತ್ ದರ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಪ್ರಕಟಿಸಿದ ವಿದ್ಯುತ್‌ ದರ ಏರಿಕೆ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ. ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 48 ಪೈಸೆ ಹೆಚ್ಚಳ ಮಾಡಿದ್ದು, ಶೇ 9ರಷ್ಟು ಒಟ್ಟಾರೆ ದರ ಹೆಚ್ಚಳದ ಬಿಸಿ ಇಂದಿನಿಂದ (ಏಪ್ರಿಲ್ 1) ಜನಸಾಮನ್ಯರು ಅನುಭವಿಸದೇ ಬೇರೆ ದಾರಿಯಿಲ್ಲ.

ತೈಲೋತ್ಪನ್ನಗಳ ಬೆಲೆ ಏರಿಕೆ

ತೈಲೋತ್ಪನ್ನಗಳ ಬೆಲೆ ಏರಿಕೆ

ಬಜೆಟ್ ನಲ್ಲಿ ತೈಲೋತ್ಪನ್ನಗಳಾದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಮತ್ತಷ್ಟು ಹೆಚ್ಚಿಸಲಾಗಿತ್ತು. ಪೆಟ್ರೋಲ್‌ ಮೇಲೆ ಶೇ. 26ರಿಂದ ಶೇ. 30, ಡೀಸೆಲ್‌ ಮೇಲೆ ಶೇ. 16.65 ರಿಂದ ಶೇ. 19ಕ್ಕೆ ಏರಿಕೆಯಾಗಿದೆ. ಇದರಿಂದ ಪೆಟ್ರೋಲ್ ಬೆಲೆ 2.48 ರೂಪಾಯಿ ಮತ್ತು ಡೀಸೆಲ್ ಬೆಲೆ 1.03 ರೂಪಾಯಿ ಏರಿಕೆಯಾಗಿದೆ.

ಅಬಕಾರಿ

ಅಬಕಾರಿ

ಬಿರುಬೇಸಿಗೆಯಲ್ಲಿ ಕೋಲ್ಡ್ ಬಿಯರ್ ಹೀರಿದರೆ ಅದರ ಮಜಾವೇ ಬೇರೆ ಎನ್ನುವುದು ಮದ್ಯಪ್ರಿಯರ ಒಕ್ಕೂರಿಲಿನ ಅಭಿಪ್ರಾಯ. ಮದ್ಯದ ಮೇಲೆ ಅಬಕಾರಿ ಶುಂಕವನ್ನು 45ರಿಂದ 50 ರೂಪಾಯಿಗೆ, ಬಿಯರ್‌ ಮೇಲಿನ ಶುಂಕವನ್ನು 5ರಿಂದ 10 ರೂಪಾಯಿಗೆ ಬಜೆಟ್ ನಲ್ಲಿ ಹೆಚ್ಚಿಸಲಾಗಿತ್ತು. ಹೀಗಾಗಿ, ಇಂದಿನಿಂದ ಬಿಯರ್ ಏಳರಿಂದ ಒಂಬತ್ತು ರೂಪಾಯಿಯಷ್ಟು ತುಟ್ಟಿಯಾಗಿದೆ.

ಡಿಟಿಎಚ್, ಖಾಸಗಿ ಬಸ್ಸುಗಳ ತೆರಿಗೆ

ಡಿಟಿಎಚ್, ಖಾಸಗಿ ಬಸ್ಸುಗಳ ತೆರಿಗೆ

ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ಖಾಸಗಿ ಬಸ್ಸುಗಳ ಮೇಲಿನ ತೆರಿಗೆಯನ್ನು ಶೇ. 29ರಷ್ಟು ಏರಿಕೆ ಮಾಡಿತ್ತು. ಇದರಿಂದ ಖಾಸಗಿ ಬಸ್ಸುಗಳು ಪಾವತಿಸ ಬೇಕಾಗಿರುವ ಮೊತ್ತ, ಮೂರು ತಿಂಗಳಿಗೊಮ್ಮೆ 2,700ರಿಂದ 3,500ಕ್ಕೆ ಏರಿಕೆಯಾಗಿದೆ. ಇನ್ನು ಡಿಟಿಎಚ್‌ ಮತ್ತು ಎಂಎಸ್‌ಒ ಸೇವೆಗಳ ಮೇಲೆ ತೆರಿಗೆ ಶೇ. 4ರಿಂದ ಶೇ. 10ಕ್ಕೆ ಹೆಚ್ಚಳ ಆಗಿರುವುದರಿಂದ ಇದೂ ಕೂಡಾ ದುಬಾರಿಯಾಗಲಿದೆ.

ಮಾರ್ಗಸೂಚಿ ದರ, ಬಿಬಿಎಂಪಿ ತೆರಿಗೆ

ಮಾರ್ಗಸೂಚಿ ದರ, ಬಿಬಿಎಂಪಿ ತೆರಿಗೆ

ಆಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ (guidance value) ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ. ಒಟ್ಟಾರೆಯಾಗಿ ಶೇ. 10ರಿಂದ ಗರಿಷ್ಠ ಶೇ. 30ರವರೆಗೆ ದರ ಏರಿಕೆ ಆಗಲಿದೆ. ಇದರಿಂದ ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳ ತೆರಿಗೆ ಶೇ. 20 ರಿಂದ ಶೇ. 25ರಷ್ಟು ಹೆಚ್ಚಳವಾಗಲಿದೆ.

ಪರಿಷ್ಕೃತವಾಗಲಿರುವ ಇತರ ಶುಲ್ಕಗಳು

ಪರಿಷ್ಕೃತವಾಗಲಿರುವ ಇತರ ಶುಲ್ಕಗಳು

ಇದಲ್ಲದೇ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಟಿವಿ, ಭೂದಾನ, ಭೂಗುತ್ತಿಗೆ, ಕೃಷಿ ಆಸ್ತಿಗಳ ಮೇಲಿನ ಮಾರ್ಗಸೂಚಿ ದರದಲ್ಲಿ ಏರಿಕೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As announced by Chief Minister Siddaramaiah in Karnataka Budget 2016, some of the commodities prices will go up from April 1, 2016
Please Wait while comments are loading...