ಕಾಂಗ್ರೆಸ್‌ ನಲ್ಲಿ ಲಿಂಗಾಯತರ ಕಡಗಣನೆ ಆರೋಪ; ಅರವಿಂದ ಬೆಲ್ಲದ್‌ ಹೇಳಿದಿಷ್ಟು!

ಧಾರವಾಡ, ಅಕ್ಟೋಬರ್‌ 02: ಲಿಂಗಾಯತ ಕಡೆಗಣನೆ ಬಗ್ಗೆ ಶಾಮನೂರ ಹೇಳಿಕೆ ವಿಚಾರ ಅತ್ಯಂತ ಗಂಭೀರ ಆಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ ಹೇಳಿದರು.

ಈ ಕುರಿತು ಧಾರವಾಡದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು, ಇದೊಂದು ಬಹಳ ಗಂಭೀರ ವಿಷಯ ಆಗಿದ್ದು. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ನ ಅತ್ಯಂತ ಹಿರಿಯ ಮುಖಂಡರು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು. ಅವರ ಮಗ ಮಂತ್ರಿ ಸಹ ಇದ್ದಾರೆಇವರು ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಎಲ್ಲಾ ಸಮಾಜಕ್ಕೂ ಸರಿಯಾದ ಜವಾಬ್ದಾರಿ ಕೆಲಸ ಕೊಡುತ್ತಿಲ್ಲ. ಕೆಲವೇ ಕೆಲವು ಆಫೀಸರ್ ಗಳಿಗೆ ಉತ್ತಮವಾದ ಪೋಸ್ಟಿಂಗ್ ಕೊಡುತ್ತಿದ್ದಾರೆ ಡಿಸಿಷನ್ ಮಾಡುವ ಪೋಸ್ಟಿಂಗ್ ಗಳನ್ನ ಕೆಲವೇ ಸಮಾಜಕ್ಕೆ ಕೊಡುತ್ತಿದ್ದಾರೆ.

Arvind Bellad Fierce Attack Against Cm Siddaramaiah

ವೀರಶೈವ ಲಿಂಗಾಯತ ಸಮಾಜ ದವರಿಗೆ ಕಡೆಗಣನೆ ಮಾಡುತ್ತಿದ್ದಾರೆ. ತಾತ್ಸಾರ ಮಾಡುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಶಾಮನೂರು ಶಿವಶಂಕರಪ್ಪ ಮಾಡುತ್ತಿದ್ದಾರೆ, ಸಿಎಂ ಆದವರು ಕೇವಲ ಒಂದು ಸಮಾಜಕ್ಕೆ ಮಾತ್ರ ಅಲ್ಲ ಇಡೀ ರಾಜ್ಯದ ನಾಯಕರು. ಹಾಗಿದ್ದಾಗ ಎಲ್ಲಾ ಸಮಾಜದ ವರ್ಗದವರನ್ನು ಕರೆದುಕೊಂಡು ಹೋಗುವ ಅವಶ್ಯಕತೆ ಇರುತ್ತದೆ. ಆ ಜಾಗ ಅರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯ ನಿರ್ವಹಿಸಬೇಕು. ಈ ರೀತಿ ಜಾತಿ ರಾಜಕಾರಣ, ಕಲುಷಿತ ರಾಜಕಾರಣ ಮಾಡಬಾರದು ಎಂದರು.

ಶಿವಮೊಗ್ಗದ ಗಲಾಟೆ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ್ರೆ ದೇಶದ್ರೋಹಿ ಶಕ್ತಿಗಳಿಗೆ ಬಲ ಬಂದಂತೆ ಆಗುತ್ತದೆ ಎಂದು ಆರೋಪ ಮಾಡಿದ ಅವರು
ಈಗ ಕಾಂಗ್ರೆಸ್ ಸರ್ಕಾರ ಬಂದಿದೆ.ಈಗ ಅಂಥವರು ಫ್ರೀಡಂ ಸಿಕ್ಕಂತೆ ಮಾಡುತ್ತಿದ್ದಾರೆ ಈ ರೀತಿ ಶಕ್ತಿಗಳ ಮೇಲೆ ಕೂಡಲೇ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ರೀತಿಯ ಶಕ್ತಿಗಳನ್ನು ಸಹಿಸುವುದಿಲ್ಲವೆಂಬ ಸಂದೇಶ ಕೊಡಬೇಕು. ಆದರೆ, ಅವರಿವರನ್ನು ಬಿಡುಗಡೆ ಮಾಡುತ್ತೇವೆ ಅಂತಾ ನಿರ್ಣಯ ಮಾಡುತ್ತಾರೆ. ಇದರಿಂದ ಇಂತಹ ಶಕ್ತಿಗಳಿಗೆ ಕುಮ್ಮಕ್ಕು ಕೊಟ್ಟಂತೆ ಆಗುತ್ತದೆ. ಶಿವಮೊಗ್ಗದಲ್ಲಿ ಆಗಿದ್ದು ಒಂದೇ ಘಟನೆ. ಆದರೆ, ರಾಜ್ಯದಲ್ಲಿ ಬೇರೆ ಕಡೆಯೂ ಆಗಬಹುದು ಹೀಗಾಗಿ ಕಟ್ಟುನಿಟ್ಟಿನ ಕ್ರಮ ಆಗಬೇಕು ಇಂತಹ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸ ಆಗಬೇಕು. ಕರ್ನಾಟಕ ಶಾಂತ ರೀತಿಯಾಗಿ ಇರುವಂತೆ ಮಾಡಬೇಕು ಎಂದು ಹೇಳಿದರು.

I.N.D.IA. ಬ್ಯಾನ್ ಮಾಡಬೇಕೆಂದು ಪೇಜಾವರ ಶ್ರೀ ಹೇಳಿಕೆ ವಿಚಾರವಾಗಿ ಮಾತನಾಡಿ, ಪೇಜಾವರ ಶ್ರೀಗಳು ಹೇಳಿದ್ದು ಸರಿಯಾಗಿದ್ದು, I.N.D.I.A ಒಕ್ಕೂಟದಲ್ಲಿ ಇರೊರೆಲ್ಲ ಸನಾತನ ಧರ್ಮದ ವಿರೋಧಿ ಗಳ ಸನಾತನ ಧರ್ಮದ ಗಂಧ ಕೂಡ ಅವರಿಗಿಲ್ಲ. ಸನಾತನ Blast ಧ್ಯೇಯ ಅವರಿಗೆ ಗೊತ್ತಿಲ್ಲ, ಸನಾತನ ಧರ್ಮ ನಾಶ ಮಾಡುವುದೇ ಅವರ ಉದ್ದೇಶ ಆಗಿದೆ. ಇವರೆಲ್ಲ ಕ್ರಿಶ್ಚಿಯನ್ ಸಂಸ್ಥೆಗಳ ಪರವಾದ ಜನರಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+