ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇಟ್ಲಿ ಬಜೆಟ್ ಹೇಗಿದೆ? ಕನ್ನಡ ದಿನಪತ್ರಿಕೆ ಶೀರ್ಷಿಕೆ ನೋಡಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 2017-18ನೇ ಸಾಲಿನ ಬಜೆಟ್ ಅವಧಿಗೆ ಮುನ್ನ ಮಂಡನೆಯಾಗಿದೆ. ಕನ್ನಡ ದಿನ ಪತ್ರಿಕೆಗಳಲ್ಲಿ ಬಜೆಟ್ ಸುದ್ದಿಗಳ ಶೀರ್ಷಿಕೆಗಳ ಸಂಗ್ರಹ ಇಲ್ಲಿದೆ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 01 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 2017-18ನೇ ಸಾಲಿನ ಬಜೆಟ್ ಅವಧಿಗೆ ಮುನ್ನ ಮಂಡನೆಯಾಗಿದೆ. ಕನ್ನಡ ದಿನ ಪತ್ರಿಕೆಗಳಲ್ಲಿ ಬಜೆಟ್ ಸುದ್ದಿಗಳ ಶೀರ್ಷಿಕೆಗಳ ಸಂಗ್ರಹ ಇಲ್ಲಿದೆ.

ಸಂಸತ್ತಿನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬುಧವಾರ (ಫೆಬ್ರವರಿ 01) ಬಜೆಟ್ ಮಂಡನೆ ಮಾಡಿದ್ದಾರೆ. ನಾಲ್ಕನೇ ಬಾರಿಗೆ ಅರುಣ್ ಜೇಟ್ಲಿ ಅವರು ಮಂಡಿಸಿದ ಬಜೆಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.[ಬಜೆಟ್ 2017: ಯಾವ್ದು ಏರಿಕೆ? ಯಾವ್ದು ಇಳಿಕೆ?]

ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದ ಜೇಟ್ಲಿ ಅವರು, ಸಿಗರೇಟು, ಗೋಡಂಬಿ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ್ದಾರೆ. ಅಪನಗದೀಕರಣ ನಂತರ ಡಿಜಿಟಲ್ ಇಂಡಿಯಾದತ್ತ ಹೆಚ್ಚಿನ ಒತ್ತು ನೀಡಿದ್ದಾರೆ.

ಕನ್ನಡ ದಿನ ಪತ್ರಿಕೆಗಳಲ್ಲಿ ಬಜೆಟ್ ಸುದ್ದಿಗಳನ್ನು ವಿಶ್ಲೇಷಣಾತ್ಮಕವಾಗಿ, ಸುಂದರ ಚಿತ್ರಗಳ ಸಮೇತ ಅಂಕಿ-ಅಂಶಗಳನ್ನು ನೀಡಲಾಗಿದೆ. ಒಂದೊಂದು ಪತ್ರಿಕೆಯು ವಿಭಿನ್ನ ನಿರೂಪಣೆ ಮತ್ತು ಆಕರ್ಷಕ ಹೆಡ್ ಲೈನ್‌ಗಳ ಮೂಲಕ ಓದುಗರನ್ನು ಸೆಳೆಯುವ ಪ್ರಯತ್ನ ಮಾಡಿವೆ. ಜತೆಗೆ ಈ ಬಾರಿ ಹೆಚ್ಚು ಹೆಚ್ಚು ಅಂಕಿ ಅಂಶಗಳನ್ನು ತುಂಬಲಾಗಿದೆ.

ವಿಜಯಕರ್ನಾಟಕ

ವಿಜಯಕರ್ನಾಟಕ

'ಸಮಾಧಾನಕರ ಬಹುಮಾನ'- ಒಂದು ಸಣ್ಣ ಕಾರ್ಟೂನು ಜತೆಗೆ 'ಕರ' ಎಂದು ಪದವನ್ನು ಕೆಂಪು ಬಣ್ಣದಲ್ಲಿ ಮೂಡಿಸಿದ್ದಾರೆ. ಮೊದಲ ನೋಟಕ್ಕೆ ಜನ ಸಾಮಾನ್ಯರಿಗೆ ಬೇಕಾದ ಅಂಶಗಳು ಗೋಚರಿಸುತ್ತದೆ.
* ಸಣ್ಣ ತೆರಿಗೆದಾರರಿಗೆ ಸಂಭ್ರಮದ ಕ್ಷಣ
* ರಾಜಕೀಯ ದೇಣಿಗೆಗೆ ಕಡಿವಾಣ
* ಡಿಜಿಟಲೀಕರಣಕ್ಕೆ ಪ್ರಮಾಣ
* ಕೃಷಿ, ಗ್ರಾಮೀಣರತ್ತ ಮಮಕಾರ
* ಶಿಕ್ಷಣ, ಉದ್ಯೋಗಕ್ಕೆ ಸಹಕಾರ
* ರಿಯಾಲ್ಟಿ, ಕಾರ್ಪೊರೇಟ್ ಗೆ ಜೈಕಾರ ಹೀಗೆ ಪ್ರಮುಖ ಅಂಶಗಳನ್ನು ಹೈಲೇಟ್ ಮಾಡಿ ಆಕರ್ಷಕವಾಗಿಸಿದ್ದಾರೆ.

ಕನ್ನಡ ಪ್ರಭ

ಕನ್ನಡ ಪ್ರಭ

ಕ್ಯಾಶ್ ಲೆಸ್ ಬಜೆಟ್ -ಸರಳ ಹೆಡ್ ಲೈನ್ ಜತೆ ಇಡೀ ಪುಟ ಆವರಿಸುವ ವ್ಯಂಗ್ಯಚಿತ್ರ ಆಕರ್ಷಕವಾಗಿದೆ. ಅಂಕಿ ಅಂಶಗಳನ್ನು ಇನ್ನಷ್ಟು ತುಂಬಿಸಿ ಬಾಕ್ಸ್ ಮಾದರಿ ಮಾಡಿದ್ದರೆ ಪುಟಕ್ಕೆ ಇನ್ನಷ್ಟು ಮೆರಗು ಸಿಗುತ್ತಿತ್ತು. ಏರಿಕೆ ಹಾಗೂ ಇಳಿಕೆ , ಕರ್ನಾಟಕಕ್ಕೆ ಸಿಕ್ಕಿದ್ದೇನು ಎಲ್ಲವನ್ನು ಪುಟದಲ್ಲಿ ಸೇರಿಸುವ ಯತ್ನ ಮಾಡಲಾಗಿದೆ.

ಪ್ರಜಾವಾಣಿ

ಪ್ರಜಾವಾಣಿ

ಆಯವ್ಯಯಕ್ಕೆ ಚುನಾವಣೆ ಭಯ-ಹೆಚ್ಚಿನ ಅಂಕಿ ಅಂಶಗಳತ್ತ ಗಮನ ಹರಿಸದೆ, ವಿಶ್ಲೇಷಣೆಯನ್ನು ಮುಖಪುಟದಲ್ಲಿ ತುಂಬಿಸಲಾಗಿದೆ. ಮೇಲ್ಪದರದಲ್ಲಿ ಬಳಸಲಾದ ಹಸಿರು ಶಾಯಿ ಕೂಡಾ ತಕ್ಷಣಕ್ಕೆ ಸೆಳೆಯುವುದಿಲ್ಲ. ಮಹಿಶಿ ವರದಿ : ಕಾನೂನು ವ್ಯಾಪ್ತಿಗೆ ಎಂಬುದು ಇನ್ನೂ ಹೆಚ್ಚು ಸ್ಪಷ್ಟವಾಗಿದೆ. ಜನಪ್ರಿಯ ಘೋಷಣೆ ಇಲ್ಲದ ಕಾರಣಕ್ಕೋ ಏನೋ ಹೆಚ್ಚಿನ ಶ್ರಮ ಪುಟ ವಿನ್ಯಾಸಕ್ಕೆ ನೀಡಿದ್ದಂತ್ತಿಲ್ಲ.

ಉದಯವಾಣಿ

ಉದಯವಾಣಿ

e- ಕಲ್ಯಾಣ- ವಿಕಾಸಕ್ಕೆ ಡಿಜಿಟಲೀಕರಣ ಮಂತ್ರ ಎಂಬ ಶೀರ್ಷಿಕೆಯೊಂದಿಗೆ ತಕ್ಕಮಟ್ಟಿಗೆ ಎಲ್ಲವನ್ನು ಹೇಳುವ ಯತ್ನ ಮಾಡಲಾಗಿದೆ. ಮುಖಪುಟದ ಮೇಲ್ಭಾಗದಲ್ಲಿ ವ್ಯಂಗ್ಯಚಿತ್ರಕ್ಕೆ ಮೀಸಲಿಡಲಾಗಿದೆ. ತಕ್ಷಣಕ್ಕೆ ಕೊನೆ ಭಾಗದಲ್ಲಿ ಕಾಣಿಸುವ ಸೆಲೆಬ್ರಿಟಿಗಳ ಪ್ರತಿಕ್ರಿಯೆ ಗಮನ ಸೆಳೆಯುತ್ತದೆ.

ವಿಜಯವಾಣಿ

ವಿಜಯವಾಣಿ

ಶ್ರೀಸಾಮಾನ್ಯನಿಗೆ ನಮೋಸ್ಕಾರ- ಎಂಬ ಹೆಡ್ ಲೈನ್ ಮೂಲಕ ಮೋದಿಗೆ ಜೈಕಾರ ಹಾಕಲಾಗಿದೆ. ಹೆಡ್ ಲೈನ್ ಮೇಲೆ ಇರುವ ವಿಶ್ಲೇಷಣೆ ತುಂಬಾ ದೊಡ್ಡದಾಯಿತು ಎಂಬುದು ಶ್ರೀಸಾಮಾನ್ಯರ ಅಭಿಪ್ರಾಯ. ಮಿಕ್ಕಂತೆ ಅಂಕಿ ಅಂಶಗಳನ್ನು ಸೂಕ್ತವಾಗಿ ಬಳಸಿಕೊಂಡು ಬಾಕ್ಸ್ ಗಳನ್ನು ಮಾಡಿ ಅರ್ಥಪೂರ್ಣವಾಗಿ ಬಜೆಟ್ ಬಗ್ಗೆ ವಿಶ್ಲೇಷಿಸಲಾಗಿದೆ.

ಹೊಸದಿಂಗತ

ಹೊಸದಿಂಗತ

ಶ್ರೇಯಸ್ ಕರ ಬಜೆಟ್- ಹೆಡ್ ಲೈನ್ ಗಿಂತ ಮುಖಪುಟದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಚಿತ್ರವೇ ಎದ್ದು ಕಾಣುತ್ತದೆ. ಎರಡು ವಿತ್ತ ಸಚಿವರ ಫೋಟೊ ಬಳಕೆ ಯಾಕೋ ಗೊತ್ತಿಲ್ಲ. ಆದರೆ, ಮಾಹಿತಿ ಎಲ್ಲವೂ ಕಾಲಂ ಮಾದರಿಯಲ್ಲಿರುವುದರಿಂದ ತಕ್ಷಣಕ್ಕೆ ಓದಲು ಸುಲಭವಾಗಿದೆ.

ವಾರ್ತಾಭಾರತಿ

ವಾರ್ತಾಭಾರತಿ

ಜನಪ್ರಿಯ ಸೋಗು- ಎಂಬ ಹೆಡ್ ಲೈನ್ ತಕ್ಷಣಕ್ಕೆ ಸೆಳೆಯುತ್ತದೆಯಾದರೂ ಅದಕ್ಕಿಂತ ಶ್ರೀಸಾಮಾನ್ಯನ ಮೂಗಿಗೆ ತುಪ್ಪ ಎಂಬ ಅಂಶ ಗಮನಾರ್ಹ. ಆದಾಯ ತೆರಿಗೆ ಬಗ್ಗೆ ಮಾಹಿತಿ, ಇವು ದುಬಾರಿ ಎಂಬುದು ತಕ್ಷಣಕ್ಕೆ ಓದುವಂತೆ ಮಾಡುತ್ತದೆ. ಹೆಚ್ಚಿನ ಅಂಕಿ ಅಂಶ, ಕಾರ್ಟೂನ್, ಬಾಕ್ಸ್ ಕಾಲಂ ಬಳಕೆ ಮಾಡಿಲ್ಲ.

ವಿಶ್ವವಾಣಿ

ವಿಶ್ವವಾಣಿ

ಜೇಟ್ಲಿ ಬಜೆಟಲಿ ಎಲ್ಲವೂ ಡಿಜಿಟಲಿ -ಸರ್ವಾಂಗ ಸುಂದರ ಬಜೇಟ್ಲಿ ಎನ್ನುವ ಮೂಲಕ ಪದಗಳ ಜತೆ ಆಟವಾಡಿದ್ದಾರೆ. ಆದರೆ, ನೀಲಿ ಶಾಯಿ ಕಣ್ಣಿಗೆ ರಾಚುವಂತೆ ಮಾಡುತ್ತದೆ. ಮುಖಪುಟದ ತುಂಬಾ ಅಂಕಿ ಸಂಖ್ಯೆಗಳೇ ಕಾಣುತ್ತಿದ್ದು, ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಗಳು ತಕ್ಷಣಕ್ಕೆ ಯಾವುದನ್ನು ಓದುವುದು ಎಂಬ ಗೊಂದಲ ಮೂಡಿಸುತ್ತದೆ.

English summary
Finance Minister Arun Jaitley presented the Union Budget 2017-18 in parliament on February 01, 2017. Kannada news papers carried the news as their banner headlines. See Kannada titles for 8 news papers for edition 2nd February
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X