ರಾಯಚೂರಿನಲ್ಲಿ ಏಳು ದಿನ ಸೇನಾ ನೇಮಕಾತಿ

ರಾಯಚೂರು, ಡಿ. 10 : ಬೆಂಗಳೂರು ಹಾಗೂ ಬೆಳಗಾವಿಯ ಸೇನಾ ನೇಮಕಾತಿ ವಲಯದ ಆಶ್ರಯದಲ್ಲಿ ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಡಿ. 11 ರಿಂದ 17 ರವರೆಗೆ ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ನಡೆಯಲಿದೆ.

ಭಾರತೀಯ ಸೇನೆಯಲ್ಲಿನ ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್, ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳ ಪಾಲ್ಗೊಳ್ಳಬಹುದಾಗಿದೆ. [ಉದ್ಯೋಗದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಡಿ.11 ಮತ್ತು 12 ರಂದು ರಾಯಚೂರು ಜಿಲ್ಲೆಯ ಎಲ್ಲ ತಾಲೂಕುಗಳು ಹಾಗೂ ಗೋಕಾಕ, ರಾಮದುರ್ಗ, ಸೌದತ್ತಿ, ಅಥಣಿ, ಚಿಕ್ಕೋಡಿ, ಹುಕ್ಕೇರಿ ಮುಂತಾದ ತಾಲೂಕುಗಳ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

Army

ಡಿ.13, 14, 15 ಮತ್ತು 16ರಂದು ರಾಯಚೂರು ಜಿಲ್ಲೆಯ ಹಾಗೂ ಖಾನಾಪುರ, ಬೆಳಗಾವಿ, ರಾಯಬಾಗ, ಹುಕ್ಕೇರಿ, ಸೌದತ್ತಿ, ಚಿಕ್ಕೋಡಿ, ಗೋಕಾಕ, ರಾಮದುರ್ಗ ತಾಲೂಕುಗಳ ಅಭ್ಯರ್ಥಿಗಳಿಗೆ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ನೇಮಕಾತಿ ನಡೆಯಲಿದೆ.

ಡಿ.17 ರಂದು ರಾಯಚೂರು ಹಾಗೂ ಬೆಳಗಾವಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮತ್ತು ಸೋಲ್ಜರ್ ಟೆಕ್ನಿಕಲ್ ಮತ್ತು ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟೆ ಹುದ್ದೆಗಳಿಗೆ ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಡಿಎಸ್‍ಸಿ ಹುದ್ದೆಯ ನೇಮಕಾತಿ ಇದೆ.

ಅರ್ಹ ಅಭ್ಯರ್ಥಿಗಳು ತಮ್ಮ 10ನೇ ತರಗತಿ, ಪಿಯುಸಿ, ಐಟಿಐ, ಎನ್‍ಐಸಿ ಇವುಗಳ ಮೂಲ ಹಾಗೂ 2 ದೃಢೀಕೃತ ನಕಲು ಪ್ರತಿಗಳನ್ನು ಹೊಂದಿರಬೇಕು. ಜೊತೆಗೆ 12 ಪಾಸಪೊರ್ಟ್ ಅಳತೆಯ ಕಲರ್ ಭಾವಚಿತ್ರಗಳನ್ನು ಹೊಂದಿರಬೇಕು.

ಈ ಹುದ್ದೆಗಳಿಗೆ ಯಾವುದೇ ಅರ್ಜಿ ನಮೂನೆ ಅವಶ್ಯಕತೆ ಇರುವುದಿಲ್ಲ. ಅಭ್ಯರ್ಥಿಗಳು ವಾಸವಾಗಿರುವ ಸ್ಥಳದ ಪ್ರಮಾಣಪತ್ರ ಹಾಗೂ ನಡತೆಯ ಪ್ರಮಾಣಪತ್ರ ಕಡ್ಡಾಯವಾಗಿ ಆಂಗ್ಲ ಭಾಷೆಯಲ್ಲಿ ತರಬೇಕು. ಹೆಚ್ಚಿನ ವಿವರಗಳಿಗೆ ಸೇನಾ ನೇಮಕಾತಿ ಕಚೇರಿ ಬೆಳಗಾವಿ-0831-2465550, ಬೆಂಗಳೂರು-080-25599290 ಅಥವಾ www.zrobangalore.gov.in ವೆಬ್‍ಸೈಟ್ ಮೂಲಕ ಮಾಹಿತಿ ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+