ಹಾವೇರಿ : ಕಂದಾಯ ಇಲಾಖೆಯಲ್ಲಿ 43 ಹುದ್ದೆಗಳು ಖಾಲಿ ಇವೆ
ಹಾವೇರಿ, ಮಾ. 16 : ಹಾವೇರಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 43 ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 14.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವ CBSE ನಡೆಸುವ 12ನೇ ತರಗತಿ ಅಥವ ICSEಯ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಹೊಂದಿರಬೇಕು.[ಕನ್ನಡದಲ್ಲಿ ನೇಮಕಾತಿ ಆದೇಶ ಓದಿ]
ಕರ್ನಾಟಕ ನಾಗರೀಕ ಸೇವೆ (ಕಂಪ್ಯೂಟರ್ ಲಿಟ್ರಸಿ ಟೆಸ್ಟ್) ನಿಯಮಗಳು 2012ರ ನಿಯಮ 2ರಲ್ಲಿ ನಿಗದಿಪಡಿಸಿರುವಂತೆ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳು ಸರ್ಕಾರವೂ ನಡೆಸುವ ಅಥವ ಸರ್ಕಾರದ ಅನುಮೋದಿತ ಏಜೆನ್ಸಿಯವರು ತೆಗೆದುಕೊಳ್ಳುವ ಕಂಪ್ಯೂಟರ್ ಲಿಟ್ರಸಿ ಟೆಸ್ಟ್ ನಲ್ಲಿ ಕನಿಷ್ಠ 60 ಅಂಕಗಳನ್ನು ಪಡೆದು ಆಯ್ಕೆಯಾದ 3 ತಿಂಗಳಿನಲ್ಲಿ ಪಾಸು ಮಾಡತಕ್ಕದ್ದು.

ವಯೋಮಿತಿ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಕೆಳಗಿನಂತೆ ವಯೋಮಿತಿ ಹೊಂದಿರ ತಕ್ಕದ್ದು. ಪ.ಜಾ/ಪ.ಪಂ/ಪ್ರವರ್ಗ 1 ಕನಿಷ್ಟ 18 ವರ್ಷದ ಗರಿಷ್ಟ 40 ವರ್ಷ. ಹಿಂದುಳಿದ ವರ್ಗ ಕನಿಷ್ಟ 18 ಗರಿಷ್ಟ 38, ಸಾಮಾನ್ಯ ವರ್ಗ ಕನಿಷ್ಟ 18 ಗರಿಷ್ಟ 35.
ಅರ್ಜಿ ಶುಲ್ಕ : ಪ.ಜಾ/ಪಂಗಡ/ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ 100 ರೂ., ಸಾಮಾನ್ಯ /ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕವನ್ನು http:/haveri-va.kar.nic.in ಲಭ್ಯವಾಗುವ ಚಲನ್ ಮೂಲಕ ಪಡೆದು ಖಾತೆ ನಂ 64167508382 ಕ್ಕೆ ಯಾವುದಾದರೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಪಾವತಿ ಮಾಡಿ ಸ್ವೀಕೃತಿ ಪಡೆಯಬೇಕು.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳಲ್ಲಿ ಏ.13ರೊಳಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಅಂಚೆ ಮೂಲಕ ಅಥವ ಖುದ್ದಾಗಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. [ಅರ್ಜಿ ಸಲ್ಲಿಸಲು ವಿಳಾಸ]












Click it and Unblock the Notifications