ಹಾಸನ ಕಂದಾಯ ಇಲಾಖೆಯಲ್ಲಿ 81 ಹುದ್ದೆಗಳು ಖಾಲಿ ಇವೆ
ಹಾಸನ, ಡಿ.6 : ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಹಾಸನ ಜಿಲ್ಲಾ ಘಟಕದಲ್ಲಿ ಬರುವ ತಾಲೂಕುಗಳಲ್ಲಿ ವಯೋನಿವೃತ್ತಿ, ಮುಂಬಡ್ತಿ, ವರ್ಗಾವಣೆ, ರಾಜೀನಾಮೆಯಿಂದ ತೆರವಾದ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 81 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಡಿ.26 ಕೊನೆಯ ದಿನಾಂಕ.
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಡಿ.26ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿ ಪಡಿಸಿದ ಬ್ಯಾಂಕಿನಲ್ಲಿ ಅರ್ಜಿ ಶುಲ್ಕವನ್ನ ಪಾವತಿ ಮಾಡಲು ಡಿ.29 ಆಗಿರುತ್ತದೆ. ನಂತರ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಮಹಿಳಾ ಅಭ್ಯರ್ಥಿಗಳಿಗೆ 150 ರೂ. ಮತ್ತು ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ವರ್ಗಕ್ಕೆ 300 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. [ನೇಮಕಾತಿ ಆದೇಶ ಇಲ್ಲಿದೆ]
ವಯೋಮಿತಿ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ -1 ರ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿ 40 ವರ್ಷಗಳು. ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದವರಿಗೆ 38 ವರ್ಷ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ. ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. [ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ]
ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಥವ ಸಿಬಿಎಸ್‌ಸಿ, ಐಸಿಎಸ್‌ಇ ನಡೆಸುವ 12ನೇ ಪರೀಕ್ಷೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. [ಉದ್ಯೋಗದ ಮಾಹಿತಿ ಇಲ್ಲಿದೆ ನೋಡಿ]
ಆಯ್ಕೆ ವಿಧಾನ : ಕರ್ನಾಟಕ ಜನರಲ್ ಸರ್ವೀಸಸ್ (ರೆವಿನ್ಯೂ ಸರ್ಬೊಡಿನೇಟ್ ಬ್ರಾಂಚ್), (ಕೇಡರ್ ಅಂಡ್ ರೆಕ್ಯೂಟ್‌ಮೆಂಟ್) (ತಿದ್ದುಪಡಿ) ನಿಯಮಗಳು 2008 ಮತ್ತು ಕರ್ನಾಟಕ ನಾಗರೀಕ ಸೇವಾ ( ಸಾಮಾನ್ಯ ನೇಮಕಾತಿ) ನಿಮಯಗಳು 1977 ರ ಪ್ರಕಾರ ಅಭ್ಯರ್ಥಿಯು ಅವರ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯಾಯ ಪ್ರವರ್ಗಕ್ಕೆ ಸಂಬಂಧಿದಂತೆ ಆಯ್ಕೆ ಮಾಡಲಾಗುತ್ತದೆ.












Click it and Unblock the Notifications