ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಫೋನ್ ಕಾರ್ಖಾನೆಯಲ್ಲಿ ದಾಳಿ, 437 ಕೋಟಿ ರೂ. ನಷ್ಟ: ಆ್ಯಪಲ್ ಕಂಪನಿ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ಬೆಂಗಳೂರು ಸಮೀಪದ, ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಕಳೆದ ಶನಿವಾರ ಬೆಳಿಗ್ಗೆ ನಡೆದ ಕಾರ್ಮಿಕರ ದಾಳಿ ಕುರಿತಾಗಿ ಆ್ಯಪಲ್ ಕಂಪನಿ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಘಟನೆ ಕುರಿತು ಸ್ವಯಂ ತನಿಖೆಗೆ ಆದೇಶಿಸಿದೆ.

Recommended Video

ಬೆಂಗಳೂರು ಬಳಿಯ ಐಫೋನ್ ಉತ್ಪಾದನಾ ಘಟಕದಲ್ಲಿ ನೌಕರರಿಂದಲೇ ದಾಂಧಲೆ | Iphone Plant Vandalised in Kolar

ನಾಲ್ಕು ತಿಂಗಳಿನಿಂದ ವೇತನ ನೀಡಿಲ್ಲ ಎಂಬ ಆರೋಪ ಮಾಡಿರುವ ಸಾವಿರಾರು ಕಾರ್ಮಿಕರು ಏಕಾಏಕಿ ದಾಳಿ ನಡೆಸಿ ಕಂಪನಿಯ ಪೀಠೋಪಕರಣಗಳು ಸೇರಿದಂತೆ ಐಫೋನ್‌ಗಳ ನುಚ್ಚು ನೂರು ಮಾಡಿದರು. ಈ ವೇಳೆ ಸಾವಿರಾರು ಐಫೋನ್ ಕೂಡ ಕಳುವಾಗಿದ್ದು ಮೊಬೈಲ್ ತಯಾರಕ ವಿಸ್ಟ್ರಾನ್ 437 ಕೋಟಿ ರೂ. ನಷ್ಟವಾಗಿರುವುದಾಗಿ ಕೇಸ್ ದಾಖಲಿಸಿದೆ.

ಐಫೋನ್ ಕಾರ್ಖಾನೆ ಮೇಲೆ ದಾಳಿ: ಉಂಟಾದ ನಷ್ಟವೆಷ್ಟು ಗೊತ್ತೇ?ಐಫೋನ್ ಕಾರ್ಖಾನೆ ಮೇಲೆ ದಾಳಿ: ಉಂಟಾದ ನಷ್ಟವೆಷ್ಟು ಗೊತ್ತೇ?

ಘಟನೆ ಕುರಿತಾಗಿ ತೀವ್ರ ತನಿಖೆ ನಡೆಯುತ್ತಿದ್ದು, ನೂರಾರು ಜನರನ್ನು ಬಂಧಿಸಲಾಗಿದೆ. ಇದರ ಜೊತೆಗೆ ಆ್ಯಪಲ್ ಕಂಪನಿಯು ಕೂಡ ದಾಳಿ ಕುರಿತಾಗಿ ಸ್ಥಳೀಯ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದು ತನಿಖೆಗೆ ಆದೇಶಿಸಿದೆ.

ಅಂದಾಜು 437 ಕೋಟಿ ರೂ. ನಷ್ಟ ಆಗಿದೆ!

ಅಂದಾಜು 437 ಕೋಟಿ ರೂ. ನಷ್ಟ ಆಗಿದೆ!

ವಿಸ್ಟ್ರಾನ್‌ನ ಆಡಳಿತಾಧಿಕಾರಿ ಟಿಡಿ ಪ್ರಶಾಂತ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಕಂಪನಿಯ ಹಾನಿಯನ್ನು 437 ಕೋಟಿ ರೂ ಎಂದು ಅಂದಾಜಿಸಿದೆ. ನಾಲ್ಕು ಕಾರುಗಳು, ಎರಡು ಗಾಲ್ಫ್ ಕಾರುಗಳು, ಕ್ಯಾಂಟೀನ್ ಪ್ರದೇಶ, ಟಿವಿಗಳು, ಲ್ಯಾಪ್‌ಟಾಪ್‌ಗಳು, ಮುದ್ರಕಗಳು, ಫೋನ್‌ಗಳು, ಉತ್ಪಾದನಾ ಯಂತ್ರಗಳು, ನಿರ್ಮಾಣ ಸೈಟ್ ಕಂಟೇನರ್‌ಗಳು, ವಾಟರ್ ಪ್ಯೂರಿಫೈಯರ್‌ಗಳು, ಎಟಿಎಂ ಯಂತ್ರ, ವೈಯಕ್ತಿಕ ದಾಖಲೆಗಳು, ನಗದು ಮತ್ತು ಹೆಚ್ಚಿನವುಗಳನ್ನು ನಾಶಪಡಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಯಾವೆಲ್ಲಾ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ?

ಯಾವೆಲ್ಲಾ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ?

ಭಾರತೀಯ ದಂಡ ಸಂಹಿತೆಯ ಈ ಮುಂದಿನ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ: 143, 147, 148, 323, 448, 435, 395, 427, 504, 506 ,149 ಅಡಿ ದೋಷಾರೋಪ ಹೊರಿಸಿದ್ದಾರೆ.

ಆ್ಯಪಲ್ ಸಹ ತನಿಖೆ ನಡೆಸುತ್ತಿದೆ!

ಆ್ಯಪಲ್ ಸಹ ತನಿಖೆ ನಡೆಸುತ್ತಿದೆ!

ಎಕನಾಮಿಕ್ ಟೈಮ್ಸ್ ಪ್ರಕಾರ, ವಿಸ್ಟ್ರಾನ್ ತನ್ನ ಸರಬರಾಜುದಾರರ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆಯೇ ಎಂದು ಆ್ಯಪಲ್ ಸಹ ತನಿಖೆ ನಡೆಸುತ್ತಿದೆ. ಆಪಲ್‌ನ ಸರಬರಾಜುದಾರರ ಮಾರ್ಗಸೂಚಿಗಳು ತೃತೀಯ ಸಿಬ್ಬಂದಿ ಏಜೆನ್ಸಿಗಳು(ವಿಸ್ಟ್ರಾನ್ ಸೇರಿದಂತೆ ಇತರೆ) ಕಾರ್ಮಿಕರಿಗೆ ಸಮಯಕ್ಕೆ ಮತ್ತು ನಿಯಮಗಳ ಪ್ರಕಾರ ವೇತನ ಪಾವತಿಸಿ ಇತರ ಪ್ರಯೋಜನಗಳನ್ನು ಒದಗಿಸಬೇಕು ಎಂದು ಆದೇಶಿಸಿವೆ.

"ನಮ್ಮ ಪೂರೈಕೆ ಸರಪಳಿಯಲ್ಲಿರುವ ಪ್ರತಿಯೊಬ್ಬರನ್ನು ಗೌರವದಿಂದ ನೋಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಆ್ಯಪಲ್ ಸಮರ್ಪಿತವಾಗಿದೆ. ನಾವು ತಂಡಗಳನ್ನು ಹೊಂದಿದ್ದೇವೆ ಮತ್ತು ತಕ್ಷಣವೇ ಭಾರತದ ವಿಸ್ಟ್ರಾನ್‌ನ ನರಸಾಪುರ ಘಟಕದಲ್ಲಿ ಆದ ಘಟನೆ ಕುರಿತು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದೇವೆ. ನಾವು ಹೆಚ್ಚುವರಿ ಆ್ಯಪಲ್ ತಂಡದ ಸದಸ್ಯರು ಮತ್ತು ಲೆಕ್ಕ ಪರಿಶೋಧಕರನ್ನು ಸ್ಥಳಕ್ಕೆ ರವಾನಿಸುತ್ತಿದ್ದೇವೆ. ನಮ್ಮ ತಂಡಗಳು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ ಮತ್ತು ಅವರ ತನಿಖೆಗೆ ನಾವು ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇವೆ" ಎಂದು ಆ್ಯಪಲ್ ವಕ್ತಾರರು ತಿಳಿಸಿದ್ದಾರೆ.

ಈ ಘಟನೆಯು ರಾಜ್ಯದಲ್ಲಿ ಹೂಡಿಕೆ ದೃಷ್ಟಿಯಿಂದ ಒಳಿತಲ್ಲ!

ಈ ಘಟನೆಯು ರಾಜ್ಯದಲ್ಲಿ ಹೂಡಿಕೆ ದೃಷ್ಟಿಯಿಂದ ಒಳಿತಲ್ಲ!

ನರಸಾಪುರದಲ್ಲಿ ವಿಸ್ಟ್ರಾನ್ ಐಫೋನ್ ಉತ್ಪದನಾ ಘಟಕದಲ್ಲಿ ಆದ ಘಟನೆಗೆ ಸಂಬಂಧಿಸಿದಂತೆ ರಾಜ್ಯದ ಸಚಿವರು ಮತ್ತು ವಿರೋಧ ಪಕ್ಷದ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದು, ಹಿಂಸಾಚಾರದ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿವೆ. ಈಗಾಗಲೇ ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.


ಈ ಘಟನೆಯನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿರುವುದನ್ನು ಗಮನಿಸಿದ ಕಾಂಗ್ರೆಸ್ ಹಿರಿಯ ಮುಖಂಡ ವಿ.ಆರ್ ಸುದರ್ಶನ್, ರಾಜ್ಯದಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯನ್ನು ಆಕರ್ಷಿಸಲು ಇದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು.


''ವಿಸ್ಟ್ರಾನ್ ಕಾರ್ಖಾನೆಯ ವಿಧ್ವಂಸಕ ಕೃತ್ಯವು ರಾಜ್ಯದ ಭವಿಷ್ಯಕ್ಕೆ ಒಳ್ಳೆಯದಲ್ಲ'' ಎಂದು ಕಾಂಗ್ರೆಸ್ ಶಾಸಕ ಮತ್ತು ಮಾಜಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

English summary
After violence at wistron corp in bengaluru apple to is probing if wistron violated its supplier guidelines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X