ಹಿರಿಯ ಅಧಿಕಾರಿಗಳ ವಿರುದ್ಧ ದೂರು ನೀಡಿದ ಅನುಪಮಾ ಶೆಣೈ

Posted By:
Subscribe to Oneindia Kannada

ಉಡುಪಿ, ಜೂನ್ 21 : ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ ಪಿಯಾಗಿದ್ದ ಅನುಪಮಾ ಶೆಣೈ ಅವರು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆ ಮಂಜುಳಾ ಮಾನಸ ಅವರಿಗೆ ವಾರದ ಹಿಂದೆಯೇ ಈ ಬಗ್ಗೆ ಅಧಿಕೃತ ದೂರು ನೀಡಲಾಗಿದ್ದು, ದೂರಿನ ಪ್ರತಿ ಇದೀಗ ಮಾಧ್ಯಮಗಳಿಗೆ ಲಭ್ಯವಾಗಿದೆ. ಹಿರಿಯ ಅಧಿಕಾರಿಗಳಿಂದ ಮಾನಸಿಕ ಯಾತನೆ ಅನುಭವಿಸಿದ ಬಗ್ಗೆ ವಿಸ್ತಾರವಾಗಿ ದೂರಿನಲ್ಲಿ ಬರೆದಿದ್ದಾರೆ.[ರಾಜೀನಾಮೆ ನೀಡಿದ್ದೇಕೆ? ಅನುಪಮಾ ಶೆಣೈ ಪತ್ರದಿಂದ ಬಹಿರಂಗ]

Anupama Shenoy Letter

Anupama Shenoy letter

ಡಿಜಿಪಿ, ಎಸ್ಪಿ ಶ್ರೇಣಿಯ ಅಧಿಕಾರಿಗಳು, ಠಾಣೆಯಲ್ಲಿರುವ ಹಿರಿಯ ಅಧಿಕಾರಿಗಳಿಂದ ಕೆಲಸದಲ್ಲಿ ಒತ್ತಡ, ಮಾನಸಿಕ ಹಿಂಸೆ ಅನುಭವಿಸಿರುವುದಾಗಿ ನೋವು ತೊಡಿಕೊಂಡಿದ್ದಾರೆ.[ನನಗೆ ಜೀವ ಬೆದರಿಕೆ ಇದೆ: ಅನುಪಮಾ ಶೆಣೈ]

ನಾನು ಜೂನ್ 03 ರಂದು ಎರಡು ರಾಜೀನಾಮೆ ಪತ್ರ ನೀಡಿದ್ದು ನಿಜ. ಮೊದಲ ರಾಜೀನಾಮೆ ಪತ್ರದಲ್ಲಿ ಇಲಾಖೆಯ ಅಧಿಕಾರಿಗಳಿಂದ ಆದ ನೋವಿನ ಬಗ್ಗೆ ಬರೆದಿದ್ದೆ. ಅದನ್ನು ಬದಲಾಯಿಸಿ ಮತ್ತೊಂದು ರಾಜೀನಾಮೆ ಪತ್ರ ಬರೆಸಿಕೊಂಡರು.

Anupama Shenoy letter
Anupama Shenoy letter

ಕಳೆದ ಬಾರಿ ಚುನಾವಣೆ ಡ್ಯೂಟಿಗೆ ನಿಯುಕ್ತಿಗೊಂಡಿದ್ದ ನನ್ನನ್ನು ಬಲವಂತವಾಗಿ ರಜೆ ಮೇಲೆ ಕಳಿಸಲಾಯಿತು. ಡಿಜಿಪಿ ಅವರು ಈ ಬಗ್ಗೆ ನನಗೆ ವಿವರಣೆ ನೀಡಲೇ ಇಲ್ಲ. ನಾನು ಫೇಸ್ ಬುಕ್ ಖಾತೆ ಬಳಸುತ್ತಿಲ್ಲ. ವಿವಾದಿತ ಫೇಸ್ ಬುಕ್ ಖಾತೆಯಲ್ಲಿ ಬರುತ್ತಿರುವುದು ಸತ್ಯ ಎನಿಸುತ್ತದೆ. ಈ ಬಗ್ಗೆ ದೂರು ಕೊಡುವ ಬಗ್ಗೆ ಆಲೋಚಿಸುವೆ ಎಂದಿದ್ದಾರೆ.

ಕೆಲ ದುಷ್ಟಶಕ್ತಿಗಳ ಷಡ್ಯಂತ್ರದ ಫಲವಾಗಿ ನಾನು ಹುದ್ದೆಯನ್ನು ತೊರೆಯಬೇಕಾಗಿ ಬಂತು.ದುಷ್ಟಶಕ್ತಿಗಳ ಪ್ರೇರಣೆಯಿಂದ ಕಚೇರಿ ಮುಂದೆ ಪ್ರತಿಭಟನೆಗಳು ನಡೆಯಿತು. ಮಹಾಂತೇಶ್ ಅವರ ಮೇಲೆ ಲೋಕಾಯುಕ್ತ ಪ್ರಕರಣ ದಾಖಲಾದಾಗ ಪ್ರತಿಭಟನೆ ಕೂತ ದುಷ್ಟಶಕ್ತಿಗಳೇ ಇಂದು ಕೂಡಾ ನನ್ನ ಕಚೇರಿ ಮುಂದೆ ಕುಳಿತು ಧಿಕ್ಕಾರ ಕೂಗುತ್ತಿವೆ ಎಂದು ಸುಮಾರು ನಾಲ್ಕು ಪುಟಗಳಷ್ಟು ದೂರಿನ ಪತ್ರ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Anupama Shenoy, former deputy SP, Kudligi subdivision, Ballari district, forwarded a complaint to Manjula Manasa, president of the Karnataka State Commission for Women, a week ago about mental harassment by senior officials in the department.
Please Wait while comments are loading...