Anganwadi: ಅಂಗನವಾಡಿ ಸಹಾಯಕಿಯರ 5 ತಿಂಗಳ ವೇತನ ಪಾವತಿ ಅಪ್ಡೇಟ್ ಕೊಟ್ಟ ಆರ್.ವಿ.ದೇಶಪಾಂಡೆ
ಧಾರವಾಡ, ಸೆಪ್ಟಂಬರ್ 04: ಕರ್ನಾಟಕ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 11,000 ರೂ. ಹಾಗೂ ಸಹಾಯಕಿಯರಿಗೆ 6000 ರೂ. ಗೌರವ ಧನ ನೀಡಲಾಗುತ್ತಿದೆ. ಈ ಸಹಾಯಕಿಯರಿಗೆ ಕಳೆದ 05 ತಿಂಗಳಿನಿಂದ ಗೌರವ ವೇತನ ನೀಡದೇ ಬಾಕಿ ಉಳಿಸಿಕೊಳ್ಳಲಾಗಿದ್ದು, ಅದನ್ನು ಶೀಘ್ರವೇ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಹೇಳಿದರು.
ಬುಧವಾರ ಧಾರವಾಡದಲ್ಲಿ ಆಡಳಿತ ಸುಧಾರಣೆ ಆಯೋಗದ ಅದ್ಯಕ್ಷ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ಆಡಳಿತದಲ್ಲಿ ಸುಧಾರಣೆ ಆಗಬೇಕು. ಅದಕ್ಕಾಗಿಯೇ ನಿರಂತರ ಸಭೆ ನಡೆಸಿದ್ದೇನೆ. ಇಂದಿನ ಸಭೆಗೆ ಬರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜನರು ಮತ್ತು ಅಧಿಕಾರಿಗಳ ಅಭಿಪ್ರಾಯ ಪಡೆದು ಸುಧಾರಣೆ ಮಾಡಲಾಗುವುದು. ಜನರಿಗೆ ತೊಂದರೆ ಆಗಬಾರದು ಎಂದರು.

ಆಡಳಿತ ಸುಧಾರಣೆ ನಿಟ್ಟಿನಲ್ಲಿ ಐದು ತಿಂಗಳಿಂದ ಅಂಗಮವಾಡಿ ಸಹಾಯಕಿಯರ ಗೌರವ ವೇತನ ಸಹಿತ ಆಗಿಲ್ಲ. ಸಹಾಯಕಿಯರಿಗೆ ಪ್ರತಿ ತಿಂಗಳು ವೇತನ ಆಗಬೇಕು. ಅವರೆಲ್ಲ ಬಡವರು ಸಮರ್ಪಕ ವೇತನ ಪಾವತಿಯಾದರೆ ಅವರಿಗೆ ಅನುಕೂಲವಾಗುತ್ತದೆ. ಅವರೆಲ್ಲ ಕಷ್ಟ ಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಸಮರ್ಥಿಸಿಕೊಂಡ ಅಧ್ಯಕ್ಷರು
ಆದಷ್ಟು ಬೇಗ ವೇತನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ವಿಚಾರವನ್ನು ಇತ್ತೀಚೆಗೆ ಅಂಗನವಾಡಿ ಸಹಾಯಕಿಯರ ವೇತನ ಬಿಡುಗಡೆ ವಿಚಾರ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ತಿಳಿಸಿದ್ದರು. ಇದನ್ನೆ ಆರ್.ವಿ.ದೇಶಪಾಂಡೆ ಅವರು ಸಮರ್ಥನೆ ಮಾಡಿಕೊಂಡರು.
ರಾಜ್ಯ ಸರ್ಕಾರ ವೇತನ ಬಿಡುಗಡೆ ಮಾಡುತ್ತದೆ. ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿದೆ. ಹೀಗಿದ್ದಾಗ ಸಚಿವೆ ಹೆಬ್ಬಾಳ್ಕರ್ ಅವರ ಏನು ಮಾಡಬೇಕು ಎಂದು ಆರ್.ವಿ.ದೇಶಪಾಂಡೆಯವರು ಪ್ರಶ್ನಿಸಿದರು.

ಅನುದಾನ ವಿಚಾರವಾಗಿ ಅವರು, ರಾಜಕೀಯವಾಗಿ ಏನೂ ಪ್ರತಿಕ್ರಿಯೇ ನೀಡದೆ ಇಷ್ಟು ಹೇಳಿ ಸುಮ್ಮನಾದರು. ಜನರು ಹಾಗೂ ಅಧಿಕಾರಿಗಳಿಂದ ಅಭಿಪ್ರಾಯ ಪಡೆದು, ಸಾರ್ವಜನಿಕರು ಅನುಕೂಲವಾಗುವಂತೆ ಆಡಳಿತದಲ್ಲಿ ಸುಧಾರಣೆ ತರಲಾಗುವುದು ಎಂದು ಅವರು ಭರವಸೆ ನೀಡಿದರು.
ಸಿಎಂ ಒಪ್ಪಿದರೆ ಸಿಎಂ ಆಗುವೆ: ಆರ್‌ವಿ ದೇಶಪಾಂಡೆ
ಹಿರಿಯ ನಾಯಕ ಹಾಗೂ ಮಾಜಿ ಸಚಿವರು ಆಗಿರುವ ಆರ್.ದೇಶಪಾಂಡೆ ಅವರು ಕೆಲವು ಬಾರಿ ಶಾಸಕರಾಗಿ ಆಯ್ಕೆ ಆದವರು. ಮುಖ್ಯಮಂತ್ರಿ ಕುರ್ಚಿ ವಿಚಾರ, ಸಿಎಂ ಬದಲಾವಣೆ ವಿಚಾರ ಆಗಾಗ ಪ್ರಸ್ತಾಪವಾಗುತ್ತಿದ್ದು, ಈ ಮಧ್ಯೆ ನನಗೆ ಸಿಎಂ ಆಗುವ ಆಸೆ ಇದೆ ಎಂದು ಆರ್‌ವಿ ದೇಶಪಾಂಡೆ ಅವರು ಇಂಗಿತ ವ್ಯಕ್ತಪಡಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರು ನಾನು ಆತ್ಮಿಯರು. ಅವರು ನನಗಿಂತ ಎರಡು ವರ್ಷ ದೊಡ್ಡವರು. ಅವರು ಒಪ್ಪಿದರೆ ನಾನು ರಾಜ್ಯದ ಸಿಎಂ ಆಗುವೆ ಎಂದು ತಿಳಿಸಿದ್ದರು.
ಆರ್.ವಿ.ದೇಶಪಾಂಡೆ ಅವರ ಹೇಳಿಕೆ ರಾಜಕೀಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕುವಂತೆ ಮಾಡಿತು. ಇದಕ್ಕೆ ಸಚಿವ ಎಂಬಿ ಪಾಟೀಲ್ ತಿರುಗೇಟು ಕೊಟ್ಟರೆ, ಸಚಿವ ಜಮೀರ್ ಅಹ್ಮದ್ ಅವರು, ಸಿಎಂ ಆಗುವ ಆಸೆ ಯಾರಿಗೆ ಇರಲ್ಲ ಹೇಳಿ. ಎಲ್ಲರಿಗೂ ಇರುತ್ತದೆ. ಆದರೆ ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ತಿಳಿಸಿದ್ದರು.












Click it and Unblock the Notifications