5 ವರ್ಷದಲ್ಲಿ ಕರ್ನಾಟಕದಲ್ಲಿ ಜನರು ಕಟ್ಟಿದ ಟೋಲ್ ಒಟ್ಟು ಮೊತ್ತ 10,000 ಕೋಟಿ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ದತ್ತಾಂಶದ ಪ್ರಕಾರ ರಾಷ್ಟ್ರೀಯವಾಗಿ ಟೋಲ್ ಮೊತ್ತವು ಸುಮಾರು 1.5 ಲಕ್ಷ ಕೋಟಿ ರೂಪಾಯಿ ಎಂದು ಹೇಳಿದೆ.
ಬೆಂಗಳೂರು, ಫೆಬ್ರವರಿ 8: ಕರ್ನಾಟಕದ ವಾಹನ ಸವಾರರು ಕಳೆದ ಐದು ವರ್ಷಗಳಲ್ಲಿ ಅಂದರೆ ಏಪ್ರಿಲ್ 2018 ಮತ್ತು ಡಿಸೆಂಬರ್ 2022ರ ನಡುವೆ ಸುಮಾರು 10,000 ಕೋಟಿ ರೂಪಾಯಿಗಳನ್ನು ಟೋಲ್ ಶುಲ್ಕವಾಗಿ ಕಟ್ಟಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ದತ್ತಾಂಶದ ಪ್ರಕಾರ ರಾಷ್ಟ್ರೀಯವಾಗಿ ಈ ಮೊತ್ತವು ಸುಮಾರು 1.5 ಲಕ್ಷ ಕೋಟಿ ರೂಪಾಯಿ ಎಂದು ಹೇಳಿದೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳು ಅಗ್ರಸ್ಥಾನದಲ್ಲಿದೆ ಎಂದು ಟೈಮ್ಸ್ ವರದಿ ಮಾಡಿದೆ.
ದತ್ತಾಂಶದ ಪ್ರಕಾರ ಕಳೆದ 5 ವರ್ಷಗಳ ಅವಧಿಯಲ್ಲಿ ಕರ್ನಾಟಕದಾದ್ಯಂತ ಇರುವ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರು ಪಾವತಿಸಿದ 9,982.6 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ. ಇದು 2021-22ರಲ್ಲಿ ಅತಿ ಹೆಚ್ಚು 2,269.2 ಕೋಟಿ ರೂಪಾಯಿ ಟೋಲ್ ಸಂಗ್ರಹಿಸಲಾಗಿದೆ, ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಂಗ್ರಹಣೆಯಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ.
ಡಿಸೆಂಬರ್ 31, 2022 ರಂತೆ ರಾಜ್ಯದ ಟೋಲ್ ಪ್ಲಾಜಾಗಳು ಈಗಾಗಲೇ 2,268.9 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿವೆ. ತ್ರೈಮಾಸಿಕ ಅವಧಿ ಸಂಪೂರ್ಣವಾಗಲು ಇನ್ನೂ ಅವಧಿಯಿದೆ. ರಾಷ್ಟ್ರೀಯವಾಗಿಯೂ ಇದೇ ಬೆಳವಣಿಗೆ ಇದೆ. 5 ವರ್ಷದ ಅವಧಿಯಲ್ಲಿ ಸಂಗ್ರಹಿಸಿದ ಸುಮಾರು 1.5 ಲಕ್ಷ ಕೋಟಿ ರೂ.ಗಳಲ್ಲಿ 2021-22ರಲ್ಲಿ 33,881.2 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಈ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಈಗಾಗಲೇ ದೇಶಾದ್ಯಂತ ಪ್ಲಾಜಾಗಳಿಂದ 33,489.1 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ.
ರಾಜ್ಯವಾರು ನೋಡುವುದಾದರೆ ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶವು ಅತಿ ಹೆಚ್ಚು ಮೊತ್ತವನ್ನು (ರೂ. 17,242.9 ಕೋಟಿ) ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ. ನಂತರದ ಸ್ಥಾನದಲ್ಲಿ ರಾಜಸ್ಥಾನ ಇದ್ದು ಇಲ್ಲಿ 16,565.9 ಕೋಟಿ ರೂಪಾಯಿ ಸಂಗ್ರಹವಾಗಿದೆ. ಭೂವಿಸ್ತೀರ್ಣದ ದೃಷ್ಟಿಯಿಂದ ಇದು ದೇಶದ ಅತಿ ದೊಡ್ಡ ರಾಜ್ಯವಾಗಿದೆ.

ಕರ್ನಾಟಕಕ್ಕೆ ಎಂಟನೇ ಸ್ಥಾನ
ಇವುಗಳ ನಂತರ ಗುಜರಾತ್, ಮಹಾರಾಷ್ಟ್ರ ಮತ್ತು ತಮಿಳುನಾಡು ಇವೆ. ಒಟ್ಟಾರೆಯಾಗಿ ಈ ಐದು ರಾಜ್ಯಗಳು ದೇಶದ ಒಟ್ಟು ಟೋಲ್‌ನ 50% ರಷ್ಟನ್ನುಪಾಲನ್ನು ಸಂಗ್ರಹಿಸುತ್ತವೆ. ಇವುಗಳಲ್ಲಿ ಕರ್ನಾಟಕವು ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದೆರಡು ವರ್ಷಗಳಲ್ಲಿ ಟೋಲ್ ಸಂಗ್ರಹಣೆಯಲ್ಲಿನ ಹೆಚ್ಚಳವು ಫಾಸ್ಟ್ಯಾಗ್‌ನ ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಕಾರಣವಾಗಿದೆ.

2014ರ ಹಿಂದೆಯೇ ಫಾಸ್ಟ್‌ಟ್ಯಾಗ್ ಚಿಂತನೆ
ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದಿಂದ ನಿರ್ವಹಿಸಲ್ಪಡುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ ಇದಾಗಿದ್ದು, ಇದು ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ತಜ್ಞರು ಹೇಳುತ್ತಾರೆ. ಫಾಸ್ಟ್‌ಟ್ಯಾಗ್‌ನ ಮೊದಲ ಪೈಲಟ್ ಯೋಜನೆಯನ್ನು 2014ರ ಹಿಂದೆಯೇ ಮಾಡಲಾಯಿತು. ಇದನ್ನು 2015 ರಲ್ಲಿ ಬೆಂಗಳೂರು- ಚೆನ್ನೈ ಸೇರಿದಂತೆ ಗೋಲ್ಡನ್ ಕ್ವಾಡ್ರಿಲ್ಯಾಟರಲ್ ನೆಟ್‌ವರ್ಕ್‌ನ ಕೆಲವು ಭಾಗಗಳಲ್ಲಿ ಪರಿಚಯಿಸಲಾಯಿತು. ನಂತರ 2019 ರ ಕೊನೆಯಲ್ಲಿ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಡ್ಡಾಯಗೊಳಿಸಲಾಯಿತು. ಆದರೆ ಅದರ ಪೂರ್ಣ ಪ್ರಮಾಣದ ಅನುಷ್ಠಾನವು 2021-22 ರಲ್ಲಿ ಆಯಿತು.

ಶುಲ್ಕ ನಿಯಮಗಳ ಪ್ರಕಾರ ಪರಿಷ್ಕರಣೆ
ಆದಾಗ್ಯೂ, ತಮ್ಮ ವಾಹನಗಳು ಟೋಲ್ ಬೂತ್ ಮೂಲಕ ಹಾದುಹೋಗದಿದ್ದರೂ ಸಹ ಡಬಲ್-ಚಾರ್ಜ್ ಮಾಡುವುದರಿಂದ ಹಿಡಿದು ಟಿಕೆಟ್‌ಗಳನ್ನು ಹೆಚ್ಚಿಸುವವರೆಗೆ ಹಲವಾರು ಗ್ರಾಹಕರ ದೂರುಗಳು ಇದ್ದೇ ಇವೆ. ಸಚಿವಾಲಯದ ಪ್ರಕಾರ, ಬಳಕೆದಾರರ ಶುಲ್ಕ ದರಗಳನ್ನು ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮಗಳು, 2008 ರ ಪ್ರಕಾರ ಸಾರ್ವಜನಿಕ- ನಿಧಿಯ ಶುಲ್ಕ ಪ್ಲಾಜಾಗಳಿಗೆ ಮತ್ತು ರಿಯಾಯಿತಿ ಒಪ್ಪಂದದ ಸಮಯದಲ್ಲಿ ಅನ್ವಯವಾಗುವ ಶುಲ್ಕ ನಿಯಮಗಳಿಗೆ ಅನುಗುಣವಾಗಿ ವಾರ್ಷಿಕವಾಗಿ ಪರಿಷ್ಕರಿಸಲಾಗುತ್ತದೆ.

ಏಪ್ರಿಲ್ 1 ರಿಂದ ದರ ಪರಿಷ್ಕರಣೆ
ಹೆದ್ದಾರಿ ನಿಯಮಗಳ ನಿಯಮ 4ರ ಪ್ರಕಾರ, ದರಗಳನ್ನು ಪ್ರತಿ ವರ್ಷ 3% ರಷ್ಟು ಕಡಿಮೆ ಇಲ್ಲದಂತೆ ಹೆಚ್ಚಿಸಬೇಕು. ಅಂತಹ ಹೆಚ್ಚಿದ ದರವನ್ನು ನಂತರದ ವರ್ಷಗಳ ಮೂಲ ದರವೆಂದು ಪರಿಗಣಿಸಲಾಗುತ್ತದೆ. ಸಚಿವಾಲಯದ ಪ್ರಕಾರ ಜನವರಿ 6, 200 ರಂದು ಕೊನೆಗೊಳ್ಳುವ ವಾರ ಮತ್ತು ವರ್ಷದ ಜನವರಿ 1ರ ನಂತರ ಕೊನೆಗೊಳ್ಳುವ ವಾರದ ನಡುವಿನ ಸಗಟು ಬೆಲೆ ಸೂಚ್ಯಂಕದಲ್ಲಿನ ಹೆಚ್ಚಳವನ್ನು ಪ್ರತಿಬಿಂಬಿಸಲು ಏಪ್ರಿಲ್ 1 ರಿಂದ ಅನ್ವಯವಾಗುವ ಮೂಲ ದರಗಳನ್ನು ವಾರ್ಷಿಕವಾಗಿ ಪರಿಷ್ಕರಿಸಲಾಗುತ್ತದೆ.

ವಾರ್ಷಿಕವಾಗಿ ಪರಿಷ್ಕರಣೆ
ಅಂತಹ ಪರಿಷ್ಕರಣೆಯನ್ನು ಕೈಗೊಳ್ಳಲಾಗುತ್ತದೆ. ಆದರೆ ಅಂತಹ ಪರಿಷ್ಕರಣೆಯು ಸಗಟು ಬೆಲೆ ಸೂಚ್ಯಂಕದಲ್ಲಿನ ಏರಿಕೆಯ 40% ಗೆ ಒಳಡುತ್ತದೆ. ಆದಾಗ್ಯೂ, ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು 1997 ರ ಪ್ರಕಾರ ಕಾರ್ಯನಿರ್ವಹಿಸುವ ರಿಯಾಯಿತಿದಾರರ ಟೋಲ್ ಪ್ಲಾಜಾಗಳಿಗೆ ಬಳಕೆದಾರರ ಶುಲ್ಕ ದರಗಳನ್ನು ಅವರ ರಿಯಾಯಿತಿ ಒಪ್ಪಂದದ ಪ್ರಕಾರ ಜುಲೈ 1 ಅಥವಾ ಸೆಪ್ಟೆಂಬರ್ 1ರಿಂದ ವಾರ್ಷಿಕವಾಗಿ ಪರಿಷ್ಕರಿಸಲಾಗುತ್ತದೆ.












Click it and Unblock the Notifications