Get Updates
Get notified of breaking news, exclusive insights, and must-see stories!

ಪಾದಕ್ಕೆ ಎರಗಿದ ಡಿಕೆ ಶಿವಕುಮಾರ್, ಕಾಲ ಮೇಲೆ ಕಾಲ್ ಹಾಕಿ ಕೂತ ಅಮಿತ್ ಶಾ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮೂರು ದಿನದ ಕರ್ನಾಟಕ ಪ್ರವಾಸ ಮುಗಿದು, ಶಾ ದೆಹಲಿಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಿದೆ. ಈ ಮೂರು ದಿನಗಳಲ್ಲಿ ಅಮಿತ್ ಶಾ ಬಿಟ್ಟುಹೋದ ಘಟನೆಗಳ ಸುತ್ತ ಸಾಮಾಜಿಕ ತಾಣದಲ್ಲಿ ಚರ್ಚೆಯೋ ಚರ್ಚೆ.

ಆದಿಚುಂಚನಗಿರಿ ಶ್ರೀಗಳಿಗೆ ಡಿ ಕೆ ಶಿವಕುಮಾರ್ ಪಾದಕ್ಕೆ ಎರಗಿ ನಮಸ್ಕರಿಸಿದರೆ, ಅಮಿತ್ ಶಾ ಕಾಲ ಮೇಲೆ ಕಾಲು ಹಾಕಿಕೊಂಡು ಕೂತಿದ್ದಾರೆ. ಇದೇನಾ ನಿಮ್ಮ ಸಂಸ್ಕೃತಿ ಎಂದು ' ಡಿ ಕೆ ಶಿವಕುಮಾರ್' ಫೇಸ್ ಬುಕ್ ಅಕೌಂಟ್ ನಲ್ಲಿ ಹಾಕಿದ ಪ್ರಶ್ನೆಗೆ ಪರವಿರೋಧ ಚರ್ಚೆಗಳು ನಡೆಯುತ್ತಿವೆ.

ಇನ್ನು ಕಂಚಿಶ್ರೀಗಳಿಗೆ ಅಮಿತ್ ಶಾ ನಮಸ್ಕರಿಸುತ್ತಿರುವುದು, ಆದಿಚುಂಚನಗಿರಿ ಶ್ರೀಗಳ ಮುಂದೆ ಅಮಿತ್ ಶಾ ಕೂತಿರುವ ಭಂಗಿಯನ್ನು ಹಾಕಿ ಘಟನೆಗೆ ಬ್ರಾಹ್ಮಣ, ಒಕ್ಕಲಿಗ ಜಾತಿ ಲೇಪನ ಹಚ್ಚುವ ಅನಾವಶ್ಯಕ ಪೋಸ್ಟುಗಳು ಸಾಮಾಜಿಕ ತಾಣದಲ್ಲಿ ವಿಜೃಂಭಿಸುತ್ತಿವೆ.

ಮೂರು ದಿನಗಳ ಕರ್ನಾಟಕ ಪ್ರವಾಸದ ವೇಳೆ ಭಾನುವಾರ (ಆ 13) ಅಮಿತ್ ಶಾ, ನಾಗಮಂಗಲ ತಾಲೂಕು ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದರು. ಆ ನಂತರ ಶ್ರೀಗಳ ಜೊತೆ ಕಾಲಿನ ಮೇಲೆ ಕಾಲು ಹಾಕಿ ಕೂತು ಮಾತುಕತೆಯಲ್ಲಿ ತೊಡಗಿದ್ದರು.

ಶಾ, ಶ್ರೀಗಳ ಮುಂದೆ ಕೂತಿರುವ ಭಂಗಿ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿತ್ತು. ಖುದ್ದು ಆದಿಚುಂಚನಗಿರಿ ಶ್ರೀಗಳೇ ಅಮಿತ್ ಶಾಗೆ ಮಠದ ಮೇಲೆ ಬಹಳ ಗೌರವವಿದೆ ಎಂದು ಹೇಳಿದರೂ, ಬಿಜೆಪಿಯನ್ನು ಟೀಕಿಸುವ ಉದ್ದೇಶವನ್ನೇ ಇಟ್ಟುಕೊಂಡಿರುವ ಹಸಿದ ಮನಸ್ಸುಗಳಿಗೆ ಈ ಘಟನೆ ಮತ್ತೊಂದು ಆಹಾರ ಸಿಕ್ಕಂತಾಗಿದ್ದಂತೂ ಹೌದು.

ಡಿಕೆಶಿ ಫೇಸ್ ಬುಕ್ ಪೋಸ್ಟ್ ಮತ್ತು ಅದಕ್ಕೆ ಕೆಲವೊಂದು ಪ್ರಮುಖ ಕಮೆಂಟುಗಳು, ಮುಂದೆ ಓದಿ..

ಡಿ ಕೆ ಶಿವಕುಮಾರ್ ಫೇಸ್ ಬುಕ್ ಪೋಸ್ಟ್ ಹೀಗಿದೆ

ಡಿ ಕೆ ಶಿವಕುಮಾರ್ ಫೇಸ್ ಬುಕ್ ಪೋಸ್ಟ್ ಹೀಗಿದೆ

ದೇವರು ಮತ್ತು ನಿರ್ಮಲಾನಂದ ಶ್ರೀಗಳ ಮುಂದೆ ದರ್ಪದಿಂದ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡು ಅಪಮಾನ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ. ಶ್ರೀಗಳ ಮುಂದೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವುದು ನಿಮ್ಮ ಸಂಸ್ಕೃತಿಯೇ ಅಮಿತ್ ಶಾ? ಎಂದು ' D K Shivakumar - Serving Karnataka' ಎನ್ನುವ ಪೋಸ್ಟ್.

ಡಿಕೆಶಿ ಪೋಸ್ಟಿಗೆ ಹದಿನಾಲ್ಕು ಸಾವಿರ ಲೈಕ್

ಡಿಕೆಶಿ ಪೋಸ್ಟಿಗೆ ಹದಿನಾಲ್ಕು ಸಾವಿರ ಲೈಕ್

ಡಿಕೆಶಿ ಸ್ವಾಮೀಜಿಗಳ ಪಾದಕ್ಕೆ ಎರಗುವ ಮತ್ತು ಅಮಿತ್ ಶಾ ಕಾಲ ಮೇಲೆ ಕಾಲು ಹಾಕಿ ಕೂತ ಫೋಟೋವನ್ನು ಸೇರಿಸಿ ಹಾಕಿದ ಫೇಸ್ ಬುಕ್ ಪೋಸ್ಟಿಗೆ ಸುಮಾರು ಹದಿನಾಲ್ಕು ಸಾವಿರ ಲೈಕ್, 1751 ಶೇರ್ ಮತ್ತು 961 ಕಮೆಂಟ್ ಬಂದಿದೆ. ಕಾಮೆಂಟುಗಳಿಗೆ ಡಿ ಕೆ ಶಿವಕುಮಾರ್ ಪರ, ವಿರೋಧ ಕಾಮೆಂಟ್ ವ್ಯಕ್ತವಾಗಿದೆ.

ಕಳ್ಳರಿಂದ ಕಳ್ಳರಿಗೆ ಬೋಧನೆ... ನಿಮ್ಮ ಸಿಮ್ ಎನ್ ಮಹಾ ಕಮ್ಮಿ ಬಿಡ್ರಿ

ಕಳ್ಳರಿಂದ ಕಳ್ಳರಿಗೆ ಬೋಧನೆ... ನಿಮ್ಮ ಸಿಮ್ ಎನ್ ಮಹಾ ಕಮ್ಮಿ ಬಿಡ್ರಿ

ಕಳ್ಳರಿಂದ ಕಳ್ಳರಿಗೆ ಬೋಧನೆ... ನಿಮ್ಮ ಸಿಮ್ ಎನ್ ಮಹಾ ಕಮ್ಮಿ ಬಿಡ್ರಿ ಕಾಲಿನಲ್ಲಿ ಶೂ, ಚಪ್ಲಿ ಹಾಕೊಂಡ ದೇವರಿಗೆ ಹೂವು ಹಾಕುವುದನ್ನ ಇಡೀ ಕರ್ನಾಟಕ ಜನತೆ ನೋಡಿದೆ..... #ಯಾರು_ತಪ್ಪು_ಮಾಡಿದ್ರೆ_ಅದು_ತಪ್ಪೇ.. adu bjp sanskruti ede sir.....amit shah criminal mind manushyanige yen gurut ri devaru , shrigalu.....avanu yavagalu criminal - ಈರೀತಿಯ ಕಾಮೆಂಟುಗಳು ಪೋಸ್ಟಿಗೆ ಬಂದಿದೆ.

ನಾಯಿಯನ್ನ ಸಿಂಹಾಸನಕ್ಕೇರಿಸಿದರೂ ಹೇಸಿಗೆ ತಿನ್ನುವ ಬುದ್ದಿ ಬಿಡಲ್ಲ

ನಾಯಿಯನ್ನ ಸಿಂಹಾಸನಕ್ಕೇರಿಸಿದರೂ ಹೇಸಿಗೆ ತಿನ್ನುವ ಬುದ್ದಿ ಬಿಡಲ್ಲ

ಅದೇನೋ ಹೇಳ್ತಾರಲ್ಲ, ನಾಯಿಯನ್ನ ಸಿಂಹಾಸನಕ್ಕೇರಿಸಿದರೂ ಹೇಸಿಗೆ ತಿನ್ನುವ ಬುದ್ದಿ ಬಿಡಲ್ಲ ಅಂತ.. ಹಾಗೇ ಈ ಹಿಂದೂ ಧರ್ಮವನ್ನ ಲೈಸನ್ಸ್ ಗೆ ತಗೊಂಡಿರೋ ತರ ಆಡೋ ಇಂತಾ ಶಾ ಗಳಿಗೆ ಇಲ್ಲಿರೋ ಬಿಜೆಪಿ ನಾ(ಲಾ)ಯಕರೆಲ್ಲ ದೊಡ್ಡ ದೊಡ್ಡ ಬಕೀಟು, ಅಂಡೆಗಳನ್ನು ಹಿಡಿಯೋದಲ್ಲದೆ ಅವರು ಅಂದಿದ್ದನ್ನ ಅನ್ನಿಸಿಕೊಂಡು ಉಗಿದರೆ ಮುಖ ಒರೆಸಿಕೊಳ್ಳಲು ಒಂದೆರಡು ಕರ್ಚೀಪ್ ಎಕ್ಸ್ಟ್ರಾ ಇಟ್ಕೊಂಡಿದ್ರಂತೆ ಬಿಜೆಪಿ ಕಾರ್ಯಕರ್ತರು..ಇಂತಹ ಕಿತ್ತೋದ ರಾಜಕಾರಣಿಗಳನ್ನ ಮಠಕ್ಕೆ ಇನ್ಮುಂದೆ ಕರೆಸುವ ಮೊದಲು ಮಠದ ಆಡಳಿತ ಮಂಡಳಿ ಯೋಚಿಸುವುದು ಒಳಿತು.. ಎನ್ನುವ ಕಮೆಂಟ್.

ಕಲ್ಲಡ್ಕದಲ್ಲಿ 3800 ಮಕ್ಕಳ ಅನ್ನವನ್ನು ಕಸಿದವನಿಗೆ ಏನ್ಮಾಡ್ಬೇಕು

ಕಲ್ಲಡ್ಕದಲ್ಲಿ 3800 ಮಕ್ಕಳ ಅನ್ನವನ್ನು ಕಸಿದವನಿಗೆ ಏನ್ಮಾಡ್ಬೇಕು

ಹೀಗೆ ಕುಳಿತ ತಕ್ಷಣ ಬಹಿಷ್ಕರ ಹಾಕಬೇಕು ಅನೋದದ್ರೆ, ಕಲ್ಲಡ್ಕದಲ್ಲಿ ಓದುತ್ತಿರುವ 3800 ಮಕ್ಕಳ ಅನ್ನವನ್ನು ಕಸಿದವನಿಗೆ ಏನ್ಮಾಡ್ಬೇಕು..??????, ಇವರು ಒಬ್ಬ ದೇಶ ಭಕ್ತ.... ಕಟ್ಟಾ ಅರ್.ಎಸ್.ಎಸ್. ಹಾಗು ಕಟ್ಟಾ ಹಿಂದು..... ಸ್ವಾಮೀಜಿಯವರಿಗೆ ಕೊಡುವ ಗೌರವ ನೋಡಿ.... ಎನ್ನುವ ಮತ್ತೊಂದು ಕಾಮೆಂಟ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+