ಧರ್ಮಾಧಾರಿತ ಮೀಸಲಾತಿ ನೀಡಲು ಅವಕಾಶ ಇಲ್ಲ: ಬಿಜೆಪಿ ನಿರ್ಧಾರ ಸಮರ್ಥಿಸಿಕೊಂಡ ಅಮಿತ್ ಶಾ
ಬೀದರ್, ಮಾರ್ಚ್ 26: ಕರ್ನಾಟಕದಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) 2ಬಿ ವರ್ಗದಡಿ ವರ್ಗದಡಿಯಲ್ಲಿ ಮುಸ್ಲಿಮರಿಗೆ ನೀಡಿದ್ದ ಶೇಕಡಾ ನಾಲ್ಕು ಮೀಸಲಾತಿಯನ್ನು ರಾಜ್ಯ ಬಿಜೆಪಿ ರದ್ದು ಪಡಿಸಿದ ನಿರ್ಧಾರವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಶ್ಲಾಘಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆಯಾದ ಬೀದರ್‌ನ ಗೊರಟಾ ಗ್ರಾಮ ಮತ್ತು ರಾಯಚೂರು ಜಿಲ್ಲೆಯ ಗಬ್ಬೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿರೋಧ ಪಕ್ಷ ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಮ್ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿತ್ತು ಎಂದು ಅವರು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೂ ಹೊಸ ಒಳಮೀಸಲಾತಿ ಜಾರಿಗೆ ತಂದಿದೆ. ಈ ಮೂಲಕ ಪರಿಶಿಷ್ಟ ಜಾತಿಗೆ ಆಗಿರುವ ಅನ್ಯಾಯವನ್ನು ದೂರ ಮಾಡಲು ಪ್ರಯತ್ನಿಸಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ಕಾರ್ಯವನ್ನು ಅವರು ಬಣ್ಣಿಸಿದರು.
ಮುಸ್ಲಿಮರಿಗೆ ಮಾತ್ರ ಸಂಪೂರ್ಣ 2ಬಿ ವರ್ಗದ ಮೀಸಲಾತಿ ಸಂವಿಧಾನಾತ್ಮಕವಾಗಿ ಸಮರ್ಥನಿಯವಲ್ಲ ಎಂಬುದನ್ನು ಅರಿತು ಬಿಜೆಪಿ ಅದನ್ನು ರದ್ದುಗೊಳಿಸಿದೆ. ಮುಖ್ಯವಗಿ ಕರ್ನಾಟಕ ರಾಜ್ಯದ ಎರಡು ಪ್ರಬಲ ಸಮುದಾಯಗಳಿಗೆ ಸಮಾನವಾಗಿ ಶೇಕಡಾ 4ರಷ್ಟು ಮೀಸಾಳತಿ ಕೋಟಾ ನಿಡಲಾಗಿತ್ತು. ಇನ್ನೂ ಒಕ್ಕಲಿಗರಿಗೆ 2C ವರ್ಗದಡಿ ಮತ್ತು 2D ವರ್ಗದಲ್ಲಿ ವೀರಶೈವ ಲಿಂಗಾಯತರಗೆ ನೀಡಲಾಗಿತ್ತು.

ಒಕ್ಕಲಿಗರ ಮೀಸಲಾತಿಯು 4 ಪ್ರತಿಶತದಿಂದ 6 ರಷ್ಟಕ್ಕೆ ಏರಿಕೆ ಆಗಿತ್ತು. ಲಿಂಗಾಯತರಿಗೆ ಐದರಿಂದ ಪ್ರತಿಶತದಿಂದ ಏಳಕ್ಕೆ ಹೆಚ್ಚಳವಾಯಿತು.ಆದರೆ ಮುಸ್ಲಿಮರಿಗೆ ಇದ್ದ 2B ಯಡಿ ಕೇವಲ ನಾಲ್ಕು ಮೀಸಲಾತಿ ಅನಗತ್ಯ ಎಂದು ಭಾವಿಸಿದ ಬಿಜೆಪಿ ಅದನ್ನು ರದ್ದುಗೊಳಿಸಿದೆ ಎಂದು ಅವರು ರಾಜ್ಯ ಬಿಜೆಪಿ ನಿರ್ಧಾರಕ್ಕೆ ಸಮರ್ಥನೆ ನೀಡಿದರು.
ಬಿಜೆಪಿ ಅಲ್ಪಸಂಖ್ಯಾತರಿಗೆ ನೀಡಲಾಗಿದ್ದ ಶೇಕಡ ನಾಲ್ಕು ಮೀಸಲಾತಿಯನ್ನು ರದ್ದುಪಡಿಸಿದೆ. ಧರ್ಮದ ಆಧಾರದಲ್ಲಿ ಒಂದು ಸಮುದಾಯಕ್ಕೆ ಮೀಸಲಾತಿ ನೀಡಲು ಬರುವುದಿಲ್ಲ. ಅಲ್ಲದೆ ಬಿಜೆಪಿ ಒಕ್ಕಲಿಗರಿಗೆ ಎರಡು ಪ್ರತಿಶತ ಮತ್ತು ಲಿಂಗಾಯತರಿಗೆ ಎರಡು ಪ್ರತಿಶತ ಮೀಸಲಾತಿ ಕಲ್ಪಿಸಿದೆ ಎಂದು ಅಮಿತ್ ಶಾ ಹೇಳಿದರು.
ಮೀಸಲಾತಿಗೆ ನೀಡಲು ಸಂವಿಧಾನದಲ್ಲಿ ಅವಕಾಶ ಇಲ್ಲ
ಅಲ್ಪಸಂಖ್ಯಾತರಿಗೆ ಮೀಸಲಾತಿ ಸಾಂವಿಧಾನಿಕವಾಗಿ ಮಾನ್ಯವಾಗಿಲ್ಲ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವೇ ಇಲ್ಲದಾಗಿದೆ. ಆದರೆ ಕಾಂಗ್ರೆಸ್ ಸರ್ಕಾರದ ಅವರದಿಯಲ್ಲಿ ತನ್ನ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿತ್ತು ಎಂಬುದನ್ನು ಅವರು ವಿವರಿಸಿದರು.
ಮುಸಲ್ಮಾನರಿಗೆ ಮೀಸಲಾತಿ ರದ್ದು ಕುರಿತು ಬಿಜೆಪಿ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು, ಮುಸ್ಲಿಂ ಮುಖಂಡರು, ಮುಸ್ಲಿಂ ಪರ ಸಂಘಟನೆಗಳು ವಿರೋಧಿಸಿವೆ. ಜೆಡಿಎಸ್ ಸಹ ಪ್ರತಿಭಟನೆಗೆ ಸಜ್ಜಾಗಿದೆ, ಇತ್ತ ಆಮ್ ಆದ್ಮಿ ಪಕ್ಷವು ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದೆ. ಆದರೆ ಮುಖ್ಯಮಂತ್ರಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗಮಿಸಿರುವ ಅಮಿತ್ ಶಾ ಅವರು, ಇಲ್ಲಿನ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾರಂಭದಲ್ಲಿ ವಿವಿಧ ಇಲಾಖೆಗಳ ಒಟ್ಟು 4223.02 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿದರು.
ಈ ವೇಳೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ,, ಶಾಸಕರಾದ ಶಿವನಗೌಡ ನಾಯಕ್, ಶಿವರಾಜ ಪಾಟೀಲ್, ಸಂಸದ ಅಮರೇಶ್ವರ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications