ಸಲ್ಲದ ಗಾಳಿ ಸುದ್ದಿಗಳಿಗೆ ಸೂಜಿ ಚುಚ್ಚಿದ ಅಂಬರೀಶ್

Posted By: Gururaj
Subscribe to Oneindia Kannada
ಸಿದ್ದುನ ಭೇಟಿ ಮಾಡಿದ ಅಂಬಿ | ಕೊನೆಗೂ ಚುನಾವಣೆ ಬಗ್ಗೆ ಬಾಯ್ಬಿಟ್ಟರು | Oneindia Kannada

ಬೆಂಗಳೂರು, ನವೆಂಬರ್ 28 : 'ಮಾಜಿ ಸಂಸದೆರಮ್ಯಾ ಚುನಾವಣೆಗೆ ಸ್ಪರ್ಧಿಸಿದರೆ ಸ್ವಾಗತ. ಪಕ್ಷ ಟಿಕೆಟ್ ನೀಡಿದರೆ ನಾನು ಸ್ಪರ್ಧಿಸುತ್ತೇನೆ' ಎಂದು ಮಾಜಿ ವಸತಿ ಸಚಿವ, ಮಂಡ್ಯ ಶಾಸಕ ಅಂಬರೀಶ್ ಹೇಳಿದರು.

ಅಂಬರೀಶ್ ಜೆಡಿಎಸ್ ಸೇರುವ ಸುದ್ದಿಗೆ ತೆರೆ ಬಿತ್ತು!

ಮಂಗಳವಾರ ಅಂಬರೀಶ್ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಹಲವು ವಿಚಾರಗಳ ಕುರಿತು ಹಲವು ಹೊತ್ತು ಚರ್ಚೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.

ಮಂಡ್ಯದಲ್ಲಿ ಅಂಬರೀಶ್ ಗೆ ಶಾಕ್ ನೀಡಿದ ರಮ್ಯಾ ನಡೆ!

'ಮಾಜಿ ಸಂಸದೆ ರಮ್ಯಾ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರೆ ಸ್ವಾಗತಿಸುತ್ತೇನೆ. ಪಕ್ಷದ ಹೈಕಮಾಂಡ್ ಟಿಕೆಟ್ ಕೊಟ್ಟರೆ ನಾನು ಸ್ಪರ್ಧಿಸುತ್ತೇನೆ' ಎಂದು ಮುಖ್ಯಮಂತ್ರಿಗಳ ಭೇಟಿ ಬಳಿಕ ಹೇಳಿದರು.

ಅಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೆ, ಇಲ್ಲಿ ಅಂಬರೀಶ್...

ಮಂಡ್ಯ ಜಿಲ್ಲೆಯ ರಾಜಕಾರಣದ ಬಗ್ಗೆ ದಿನಕ್ಕೊಂದು ಸುದ್ದಿಗಳು ಹಬ್ಬುತ್ತಿವೆ. ಸ್ವತಃ ಅಂಬರೀಶ್ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ? ಎಂಬ ಬಗ್ಗೆಯೇ ಚರ್ಚೆಗಳು ನಡೆಯುತ್ತಿದ್ದವು. ಅಂಬರೀಶ್ ಕಾಂಗ್ರೆಸ್ ಪಕ್ಷ ತೊರೆಯಲಿದ್ದಾರೆ. ಮಂಡ್ಯದಲ್ಲಿ ರಮ್ಯಾ, ಅಂಬರೀಶ್ ಮುಖಾಮುಖಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು ಈ ಎಲ್ಲಾ ಸುದ್ದಿಗಳಿಗೆ ಅಂಬರೀಶ್ ಇಂದು ಸ್ಪಷ್ಟನೆ ನೀಡಿದರು...ಅದರ ವಿವರಗಳು ಇಲ್ಲಿವೆ

ಅಂಬರೀಶ್ ಜೆಡಿಎಸ್ ಸೇರ್ಪಡೆ

ಅಂಬರೀಶ್ ಜೆಡಿಎಸ್ ಸೇರ್ಪಡೆ

ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಜೆಡಿಎಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅಂಬರೀಶ್ ಅಭಿಮಾನಿಗಳು ಜೆಡಿಎಸ್ ಸೇರುವಂತೆ ಒತ್ತಾಯ ಮಾಡುತ್ತಿದ್ದಾರೆ. ಬೆಂಬಲಿಗರ ಜೊತೆ ಈ ಕುರಿತು ಸಭೆಯನ್ನು ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅಂಬರೀಶ್ ಈ ಸುದ್ದಿಗಳಿಗೆ ಇಂದು ಸ್ಪಷ್ಟನೆ ನೀಡಿದರು. 'ಕಾಂಗ್ರೆಸ್ ಬಿಡುವ ಉದ್ದೇಶವಿಲ್ಲ' ಎಂದು ಹೇಳಿದರು.

ಮಂಡ್ಯದಿಂದ ರಮ್ಯಾ ಸ್ಪರ್ಧೆ

ಮಂಡ್ಯದಿಂದ ರಮ್ಯಾ ಸ್ಪರ್ಧೆ

ಮಂಡ್ಯ ಕ್ಷೇತ್ರದಿಂದ 2018ರ ಚುನಾವಣೆಗೆ ರಮ್ಯಾ ಸ್ಪರ್ಧೆ ಮಾಡಲಿದ್ದಾರೆ. ಅಂಬರೀಶ್ ಅವರು ಪಕ್ಷ ಬದಲಾಣೆ ಮಾಡಿ ಜೆಡಿಎಸ್‌ನಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಇಂದು ಮಾತನಾಡಿದ ಅಂಬರೀಶ್, 'ರಮ್ಯಾ ಸ್ಪರ್ಧೆ ಮಾಡಿದರೆ ಸ್ವಾಗತಿಸುತ್ತೇನೆ' ಎಂದು ಹೇಳಿದರು.

ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ

ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ

ಅಂಬರೀಶ್‌ಗೆ ಟಿಕೆಟ್ ನೀಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಆದ್ದರಿಂದ, ಬೇರೆಯವರಿಗೆ ಟಿಕೆಟ್ ನೀಡುವ ಚಿಂತನೆ ನಡೆಸಿದ್ದಾರೆ. ಆದ್ದರಿಂದ, ಅಂಬರೀಶ್ ಜೆಡಿಎಸ್ ಸೇರುತ್ತಾರೆ ಎಂಬ ಮಾತು ಮಂಡ್ಯದಲ್ಲಿ ಕೇಳಿಬಂದಿತ್ತು. 'ಪಕ್ಷದ ಹೈಕಮಾಂಡ್ ಟಿಕೆಟ್ ಕೊಟ್ಟರೆ ನಾನು ಸ್ಪರ್ಧಿಸುತ್ತೇನೆ' ಎಂದು ಅಂಬರೀಶ್ ಹೇಳಿದ್ದಾರೆ.

ಸುಮಲತಾ ಅಂಬರೀಶ್ ಸ್ಪರ್ಧೆ

ಸುಮಲತಾ ಅಂಬರೀಶ್ ಸ್ಪರ್ಧೆ

ಸುಮಲತಾ ಅಂಬರೀಶ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ. 'ನನ್ನ ಪತ್ನಿ, ಪುತ್ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ' ಎಂದು ಇಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former minister and Mandya MLA Ambareesh broke his silence on contesting for 2018 Karnataka assembly election. Ambareesh met Chief Minister Siddaramaiah on November 28, 2017.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ