ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಆಸ್ತಿ ಹಂಚಿಕೆಯಲ್ಲಿ ಶಾಸಕರ ಹಸ್ತಕ್ಷೇಪ; ಹೈಕೋರ್ಟ್ ತರಾಟೆ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಡಿಸೆಂಬರ್ 02; ಸರ್ಕಾರಿ ಆಸ್ತಿಗಳ ಹಂಚಿಕೆ ಮಾಡುವ ವಿಚಾರದಲ್ಲಿ ಶಾಸಕರ ಹಸ್ತಕ್ಷೇಪವನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಅಲ್ಲದೇ, ಸಾರ್ವಜನಿಕ ಆಸ್ತಿ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಶಾಸಕರಿಬ್ಬರ ಶಿಫಾರಸು ಪತ್ರ ಆಧರಿಸಿ ಮಲ್ಪೆ ಬಂದರಿನ ಮೀನು ಸಂಸ್ಕರಣೆ ಘಟಕದಲ್ಲಿ 700 ಚದರ ಮೀಟರ್ ಜಾಗವನ್ನು ಸಂತೋಷ್ ವಿ. ಸಾಲ್ಯಾನ್‌ಗೆ ಗುತ್ತಿಗೆಗೆ ನೀಡಿ ಉಡುಪಿಯ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಹೊರಡಿಸಿದ್ದ ಆದೇಶ ರದ್ದುಪಡಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯಪೀಠ ಈ ಆದೇಶ ಮಾಡಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಹೈಕೋರ್ಟ್ ತಡೆ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಹೈಕೋರ್ಟ್ ತಡೆ

ಮನಸ್ಸಿಗೆ ಬಂದಂತೆ ಹಂಚಿಕೆ: ಸರ್ಕಾರಿ ಆಸ್ತಿಯನ್ನು ಸಾರ್ವಜನಿಕ ಹರಾಜು ಅಥವಾ ಟೆಂಡರ್ ಪ್ರಕ್ರಿಯೆ ಮೂಲಕವೇ ಗುತ್ತಿಗೆ ನೀಡಬೇಕು. ತಪ್ಪಿದರೆ ಅಧಿಕಾರವನ್ನು ನಿರಂಕುಶವಾಗಿ ಬಳಕೆ ಮಾಡಿದಂತಾಗುತ್ತದೆ. ಸಾರ್ವಜನಿಕರ ಗಮನಕ್ಕೆ ಬರದಂತೆ ಸರ್ಕಾರಿ ಆಸ್ತಿಯನ್ನು ಹಿತಾಸಕ್ತಿಯ ವ್ಯಕ್ತಿಗೆ ಮನಸ್ಸಿಗೆ ಬಂದಂತೆ ಹಂಚಿಕೆ ಮಾಡಲು ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.

PFI Ban: ಪಿಎಫ್‌ಐ ನಿಷೇಧ ಆದೇಶ ಎತ್ತಿಹಿಡಿದ ಹೈಕೋರ್ಟ್PFI Ban: ಪಿಎಫ್‌ಐ ನಿಷೇಧ ಆದೇಶ ಎತ್ತಿಹಿಡಿದ ಹೈಕೋರ್ಟ್

high court

ಈ ಪ್ರಕರಣದ ಮೂಲಕ ಸರ್ಕಾರಿ ಆಸ್ತಿಯನ್ನು ಬೇಕಾಬಿಟ್ಟಿ ಹಂಚಿಕೆ ಮಾಡುತ್ತಿರುವ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೂಡ ನೀಡಿದೆ. ಈ ಪ್ರವೃತ್ತಿ ಮರುಕಳಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಿದ್ದು, ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಸಿದೆ.

ಮಲ್ಪೆ ಬಂದರಿನಲ್ಲಿ ತುಂಬಿದ ಹೂಳು; ಮೀನುಗಾರರ ಜೀವಕ್ಕಿಲ್ವಾ ಬೆಲೆ?ಮಲ್ಪೆ ಬಂದರಿನಲ್ಲಿ ತುಂಬಿದ ಹೂಳು; ಮೀನುಗಾರರ ಜೀವಕ್ಕಿಲ್ವಾ ಬೆಲೆ?

ಈ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿರುವ ಹೈಕೋರ್ಟ್, ಬಂದರಿನ ಜಾಗವನ್ನು ಸಂತೋಷ್‌ಗೆ ಗುತ್ತಿಗೆ ನೀಡಿ 2022ರ ಸೆ.23ರಂದು ಉಡುಪಿ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಹೊರಡಿಸಿರುವ ಆದೇಶವನ್ನು ರದ್ದುಪಡಿಸಿತು. ಸರ್ಕಾರವು ವಿವಾದಿತ ಸರ್ಕಾರಿ ಜಾಗವನ್ನು ಸಾರ್ವಜನಿಕ ಹರಾಜು ಮೂಲಕವೇ ಗುತ್ತಿಗೆ ನೀಡಬೇಕು. ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಜಿದಾರ ಹಾಗೂ ಸಂತೋಷ್‌ಗೆ ಈ ಆದೇಶ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ ಎಂದು ನಿರ್ದೇಶಿಸಿ ಅರ್ಜಿ ಇರ್ತ್ಯಪಡಿಸಿದೆ.

ಪ್ರಕರಣದ ಹಿನ್ನಲೆ: ಶೀಥಲ ಘಟಕ ನಿರ್ಮಾಣಕ್ಕಾಗಿ ಮಲ್ಪೆ ಬಂದರಿನ ಮೀನು ಸಂಸ್ಕರಣಾ ಕೇಂದ್ರದಲ್ಲಿರುವ ಸರ್ವೇ ನಂ.262/ಸಿ ರಲ್ಲಿ ಖಾಲಿಯಿರುವ ಜಾಗ ಗುತ್ತಿಗೆ ನೀಡಲು ಉಡುಪಿ ಜಿಲ್ಲೆಯ ಕೊಡವೂರಿನ ಚಂದ್ರ ಸುವರ್ಣ ಮತ್ತು ಅನಂತ ಕೃಷ್ಣ ನಗರದ ಸಂತೋಷ್ ವಿ. ಸಾಲ್ಯಾನ್ ಅರ್ಜಿ ಸಲ್ಲಿಸಿದ್ದರು. ಕೇವಲ ಸಾರ್ವಜನಿಕ ಹರಾಜು ಮೂಲಕವಷ್ಟೇ ಸರ್ಕಾರಿ ಆಸ್ತಿಯನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿ ಅವರ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು.

ನಂತರ ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಉಡುಪಿ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಿಗೆ ಪತ್ರ ಬರೆದು, ಮಲ್ಪೆ ಬಂದರಿನಲ್ಲಿ 700 ಚದರ ಮೀಟರ್ ಭೂಮಿಯನ್ನು ಸಂತೋಷ್ ವಿ.ಸಾಲ್ಯಾನ್‌ಗೆ ಗುತ್ತಿಗೆ ನೀಡಬೇಕು ಎಂದು ತಿಳಿಸಿದ್ದರು.

beach

ನಂತರ ಮತ್ತೊರ್ವ ಶಾಸಕ ಕೆ. ರಘುಪತಿ ಭಟ್ ಸಹ ಪತ್ರ ಬರೆದು, ಆ ಜಾಗವನ್ನು 10 ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ಸಂತೋಷ್‌ಗೆ ಗುತ್ತಿಗೆ ನೀಡಬೇಕು ಎಂದು ಕೋರಿದ್ದರು. ಈ ಪತ್ರಗಳನ್ನು ಪರಿಗಣಿಸಿ ಸಂತೋಷ್‌ಗೆ ಜಾಗವನ್ನು ಗುತ್ತಿಗೆಗೆ ನೀಡಿ 2022ರ ಸೆ.23ರಂದು ಆದೇಶಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಚಂದ್ರ ಸುವರ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

English summary
Karnataka high court upset over MLA's in the interference of allotment of public property.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X