Lok Sabha Elections 2024: ಬಿಜೆಪಿ-ಜೆಡಿಎಸ್ ಮೈತ್ರಿ: ಯಾರಿಗೆ ಲಾಭ? ಯಾರಿಗೆ ನಷ್ಟ?: ಹೆಚ್. ವಿಶ್ವನಾಥ್ ಹೇಳಿದ್ದೇನು?
ವಿಜಯಪುರ, ಸೆಪ್ಟೆಂಬರ್ 11: 2024 ರ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕುರಿತು ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಯಾವ ಪಕ್ಷಕ್ಕೆ ಲಾಭ? ಯಾವ ಪಕ್ಷಕ್ಕೆ ನಷ್ಟವಾಗುತ್ತದೆ ಎಂಬ ಕುರಿತು ಪ್ರತಿಕ್ರಿಯಿಸಿದ್ದಾರೆ.
ಹೌದು, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ವಿಜಯಪುರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದೆ. ಜೆಡಿಎಸ್ ಜೊತೆಗಿನ ಮೈತ್ರಿ ಬಿಜೆಪಿಗೆ ನಷ್ಟವಾಗಲಿದೆ, ಕಾಂಗ್ರೆಸ್ಗೆ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.

ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್ ಸುಮ್ಮನೆ ಜಾತ್ಯತೀತ ಪಕ್ಷ ಅಂತ ಇಟ್ಟುಕೊಂಡಿದೆ. ಜೆಡಿಎಸ್ ಯಾರ ಜೊತೆಗೆ ಸೇರಿದರೂ ಅವರಿಗೆ ಲಾಸ್ ಆಗತ್ತದೆ. ಮೈತ್ರಿಯಿಂದ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ, ಬಿಜೆಪಿಗೆ ಲಾಸ್ ಆಗಲಿದೆ ಎಂದು ವಿಶ್ವನಾಥ್ ಹೇಳಿದ್ದಾರೆ.
ಈಗಲೂ ಮನೆಯವರಿಗಾಗಿಯೇ ಸೀಟ್ ಹಂಚಿಕೆ ಬಗ್ಗೆ ಜೆಡಿಎಸ್ ಚರ್ಚೆ ನಡೆಸುತ್ತಿದ್ದಾರೆ. ಈ ಹಿಂದೆ ದಲಿತ-ಮುಸ್ಲಿಂ ಎರಡು ಟಿಕೆಟ್ ಕೇಳಿದಾಗ ಕೊಡಲಿಲ್ಲ. ಆಗ ಗೆಜ್ಜೆ ಪೂಜೆ, ಈಗ ರಿಯಲ್ ನಾಟಕ ಶುರು ಮಾಡಿದ್ದಾರೆ. ಈಗಲೂ ಬಿಜೆಪಿ ಹೈಕಮಾಂಡ್ ಬಳಿ ತಮ್ಮ ಮನೆಯವರಿಗೆ ಸೀಟ್ ಕೇಳುತ್ತಿದ್ದಾರೆ ಎಂದು ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣದ ಬಗ್ಗೆ ಕಿಡಿಕಾರಿದರು.
ಚುನಾವಣೆ ಫಲಿತಾಂಶದ ನಂತರ ಮೈತ್ರಿಯ ಲಾಭ ಏನು ಎಂಬುದು ಗೊತ್ತಾಗಲಿದೆ. ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಾಗ ಬಿಜೆಪಿಗೆ ಲಾಭ ಆಗಿತ್ತು. ಈಗಲೂ ಅಷ್ಟೆ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಕಾಂಗ್ರೆಸ್ ಪಕ್ಷಕ್ಕೆ ಲಾಭ ಆಗುತ್ತದೆ. ನಾನು ಸದ್ಯ ಯಾವ ಪಕ್ಷದಲ್ಲೂ ಇಲ್ಲ. ರಾಜಕೀಯದಲ್ಲಿ ನಿವೃತ್ತಿಯಿಲ್ಲ. ಜೀವನ ಇರುವವರೆಗೆ ಉಸಿರು ಇರುವರೆಗೆ ರಾಜಕಾರಣದಲ್ಲಿ ಇದ್ದೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಒಬ್ಬರಿಗೊಬ್ಬರು ಹೊಂದಾಣಿಕೆ ಆಗುವುದು ಇದೇನು ಹೊಸದಲ್ಲ. ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡ ಮೈತ್ರಿ ಮಾಡಿಕೊಂಡಿದ್ದರು. ಈಗಾ ಬಿಜೆಪಿ ಜೆಡಿಎಸ್ ಆಗಿದೆ. ಹೀಗಾಗಿ ಕರ್ನಾಟಕಕ್ಕೆ ಇದೇನು ಹೊಸದಲ್ಲ. ಬಿಜೆಪಿ ಜೆಡಿಎಸ್ ಮೈತ್ರಿ ಯಾಕೆ ಆಗಿದೆಯಂತಾ ದೇವಗೌಡರು ಹೇಳುತ್ತಾರೆ. ಸೀಟ್ ಹಂಚಿಕೆ ಬಗ್ಗೆ ಮಾತುಕತೆ ನಡೆದಿದೆ. ಮೈತ್ರಿ ವಿಚಾರದಲ್ಲಿ ಜನ ಯಾವರೀತಿ ಸ್ವೀಕಾರ ಮಾಡುತ್ತಾರೆ ಅದನ್ನ ನೋಡಬೇಕು. ಇದು ಫಲಿತಾಂಶದ ನಂತರ ತಿಳಿಯುತ್ತದೆ ಎಂದು ವಿಶ್ವನಾಥ್ ಹೇಳಿದರು.
ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಾಸಾದ್ ಅಸಮಾಧಾನದ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿದ ಅವರು, ತಮ್ಮ ವೇದನೆಯನ್ನ ಹೇಳಿದ್ದಾರೆ. ವೇದನೆ ಇದೆ ಸುಳ್ಳಲ್ಲ, ಆದರೆ ಆ ವೇದನೆಯನ್ನ ಬಹಿರಂಗವಾಗಿ ಪ್ರದರ್ಶನ ಮಾಡಬಾರದಿತ್ತು. ಹರಿಪ್ರಸಾದ್ ಅವರು ತಮ್ಮ ಸಮುದಾಯಕ್ಕೆ ಸಿಗಲಿಲ್ಲ ಅಂತಾ ಹೇಳಿದ್ದಾರೆ. ಬಹುಶಃ ಈಡೀಗ ಸಮುದಾಯಕ್ಕೆ ಕಾಂಗ್ರೆಸ್ನಲ್ಲಿ ಸಿಕ್ಕ ಅವಕಾಶಗಳು ಬೇರೆಲ್ಲೂ ಸಿಕ್ಕಿಲ್ಲ ಎಂದು ಹೇಳಿದರು.












Click it and Unblock the Notifications