ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಿ ವಿರುದ್ಧ ದಿಗ್ವಿಜಯ್ ಬಳಿ ಫಿಟ್ಟಿಂಗ್ ಇಟ್ಟಿದ್ದು ರಮ್ಯಾ!

|
Google Oneindia Kannada News

ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾದ ಮಂಡ್ಯ ಪಾಲಿಟಿಕ್ಸ್ ನಲ್ಲಿ ಪಾರುಪತ್ಯ ಸ್ಥಾಪಿಸಲು ನಡೆಯುತ್ತಿರುವ ಮುಸುಕಿನ ಗುದ್ದಾಟ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಭೇಟಿ ವೇಳೆ ಮತ್ತೊಮ್ಮೆ ಜಗಜ್ಜಾಹೀರಾಗಿದೆ.

ಈ ನಡುವೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್, ಮಂಡ್ಯ ಜಿಲ್ಲಾ ಉಸ್ತುವಾರಿ ಕಮ್ ವಸತಿ ಸಚಿವ ಅಂಬರೀಶ್ ಅವರನ್ನು ತರಾಟೆಗೆ ತೆಗೆದುಕೊಳ್ಳಲು ಮಾಜಿ ಸಂಸದೆ ರಮ್ಯಾ ಅವರೇ ಕಾರಣ ಎಂದು ಮಂಡ್ಯ ಸಂಸದ ಸಿ ಎಸ್ ಪುಟ್ಟರಾಜು ಬಾಂಬ್ ಎಸೆದಿದ್ದಾರೆ.

ರಮ್ಯಾ ರಾಜಕೀಯದಲ್ಲಿ ಅನುಭವ ಪಡೆಯುವುದು ತುಂಬಾ ಇದೆ. ರಾಜಕೀಯ ಮಾಡೋದು ರೈತರ ಆತ್ಮಹತ್ಯೆಯ ವಿಚಾರದಲ್ಲಿ ಅಲ್ಲ. ಲಂಡನ್ ನಲ್ಲಿ ತರಬೇತಿ ಪಡೆದುಕೊಂಡು ಬಂದದ್ದು ಇದೇನಾ ಎಂದು ಪುಟ್ಟರಾಜು, ರಮ್ಯಾ ವಿರುದ್ದ ಕಿಡಿಕಾರಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಪುಟ್ಟರಾಜು ವಿರುದ್ದ ಸಣ್ಣ ಅಂತರದಿಂದ ರಮ್ಯಾ ಸೋತ ನಂತರ ಅಂಬರೀಶ್ ಮತ್ತು ರಮ್ಯಾ ನಡುವೆ ಅಷ್ಟಕಷ್ಟೇ ಎನ್ನುವ ಮಾತಿದೆ.[ವಾಜಪೇಯಿ ಅವರನ್ನು ಮತ್ತೆ ಪ್ರಧಾನಿ ಮಾಡಿದ ಸಿದ್ದರಾಮಯ್ಯ!]

ಘಟನೆಯ ಬಗ್ಗೆ: ರಾಹುಲ್ ಎರಡು ದಿನದ ಭೇಟಿಯ ಮಂಡ್ಯದ ಪ್ರವಾಸದಲ್ಲಿ ಕೊಂಚ ಬದಲಾವಣೆಯಾಗಿತ್ತು. ಪೂರ್ವ ನಿಗದಿ ಕಾರ್ಯಕ್ರಮದಂತೆ ರಾಹುಲ್ ಗಾಂಧಿ ಜಿಲ್ಲೆಯ ಕೊತ್ತತ್ತಿ ಗ್ರಾಮದ ಮೃತ ರೈತ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಬೇಕಾಗಿತ್ತು.

ಆದರೆ, ಒಂದು ದಿನದ ಹಿಂದೆ ಸಾವನ್ನಪ್ಪಿದ್ದ ಪಾಂಡವಪುರ ತಾಲೂಕಿನ ಸಣಬದಕೊಪ್ಪಲಿನ ರೈತನ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ, ಮೃತ ಕುಟುಂಬವನ್ನು ಭೇಟಿ ನೀಡಲು ರಾಹುಲ್ ಬಯಸಿದ್ದರು. ಹಾಗಾಗಿ ರಾಹುಲ್ ಕೊತ್ತತ್ತಿ ಭೇಟಿ ರದ್ದಾಗಿತ್ತು. ಮುಂದೆ ಓದಿ..

ಕೊತ್ತತ್ತಿಗೆ ಭೇಟಿ ನೀಡುವ ಜವಾಬ್ದಾರಿ ನಾಲ್ವರಿಗೆ

ಕೊತ್ತತ್ತಿಗೆ ಭೇಟಿ ನೀಡುವ ಜವಾಬ್ದಾರಿ ನಾಲ್ವರಿಗೆ

ಕೊತ್ತತ್ತಿಗೆ ಭೇಟಿ ನೀಡಿ ಅಲ್ಲಿನ ಕುಟುಂಬವನ್ನು ಮಾತಾನಾಡಿಸಿಕೊಂಡು ಬರುವ ಜವಾಬ್ದಾರಿಯನ್ನು ಅಂಬರೀಶ್, ಟಿ ಬಿ ಜಯಚಂದ್ರ, ಎಚ್ ಕೆ ಪಾಟೀಲ್ ಮತ್ತು ಎಚ್ ಸಿ ಮಹಾದೇವಪ್ಪ ಅವರಿಗೆ ವಹಿಸಲಾಗಿತ್ತು. ಮೂವರು ಸಚಿವರು ಅಂಬರೀಶ್ ಅವರಿಗಾಗಿ ಕಾಯುತ್ತಿದ್ದರೆ, ಅಂಬರೀಶ್ ರಾಹುಲ್ ಗಾಂಧಿ ಹಿಂದೆ ಹೋಗಿದ್ದರು.

ಜೆಡಿಎಸ್ ಸಂಸದರ ಜೊತೆ ಅಂಬಿ ಮಾತುಕತೆ

ಜೆಡಿಎಸ್ ಸಂಸದರ ಜೊತೆ ಅಂಬಿ ಮಾತುಕತೆ

ಇದಲ್ಲದೇ, ಸಣಬದಕೊಪ್ಪಲಿನಲ್ಲಿ ಸ್ಥಳೀಯ ಸಂಸದ ಜೆಡಿಎಸ್ಸಿನ ಪುಟ್ಟರಾಜು ಅವರ ಬಳಿ ಅಂಬರೀಶ್ ಸಲಹೆ ಪಡೆದಿದ್ದರು ಮತ್ತು ಕೆಪಿಸಿಸಿಯಿಂದ ನೀಡಿದ್ದ ಪರಿಹಾರದ ಚೆಕ್ಕನ್ನು ಪುಟ್ಟರಾಜು ಬಳಿ ಅಂಬರೀಶ್ ನೀಡಿದ್ದರು ಎನ್ನುವುದೇ ಅಂಬರೀಶ್ ಗೆ ಉಲ್ಟಾ ಹೊಡಿದಿದ್ದು.

ಆಗಿದ್ದೇನೆಂದರೆ ಚೆಕ್ ಕೆಳಗೆ ಬಿದ್ದಿತ್ತು

ಆಗಿದ್ದೇನೆಂದರೆ ಚೆಕ್ ಕೆಳಗೆ ಬಿದ್ದಿತ್ತು

ಸಣಬದಕೊಪ್ಪಲಿನ ರೈತನ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ, ಮೃತ ಕುಟುಂಬವನ್ನು ಭೇಟಿ ಮಾಡಿದ್ದ ರಾಹುಲ್ ಒಂದು ಲಕ್ಷ ರೂಪಾಯಿ ಚೆಕ್ಕನ್ನು ಕೊಟ್ಟಿದ್ದರು. ಆ ಚೆಕ್ ಕೆಳಗೆ ಬಿದ್ದಿತ್ತು, ಅದನ್ನು ಎತ್ತಿಕೊಂಡ ಅಂಬರೀಶ್, ಈ ಚೆಕ್ಕನ್ನು ಕುಟುಂಬಕ್ಕೆ ತಲುಪಿಸಿ ನಗದು ಮಾಡಿಸಿಕೊಡಿ ಎಂದು ಸಂಸದ ಪುಟ್ಟರಾಜು ಕೈಗೆ ಕೊಟ್ಟಿದ್ದರು.

ರಮ್ಯಾ ಫಿಟ್ಟಿಂಗ್?

ರಮ್ಯಾ ಫಿಟ್ಟಿಂಗ್?

ಇದನ್ನೆಲ್ಲಾ ಗಮನಿಸುತ್ತಿದ್ದ ರಮ್ಯಾ, ದಿಗ್ವಿಜಯ್ ಸಿಂಗ್ ಬಳಿ ಅಂಬರೀಶ್ ಬಗ್ಗೆ ಕಿವಿಯೂದಿದ್ದಾರೆ. ಇದರಿಂದ ಅಂಬರೀಶ್ ಅವರನ್ನು ದಿಗ್ವಿಜಯ್ ಸಿಂಗ್ ತರಾಟೆಗೆ ತೆಗೆದುಕೊಂಡರು. ನನ್ನ ಬಳಿ ನೀಡಿದ್ದ ಚೆಕ್ಕನ್ನು ಅಂಬರೀಶ್ ವಾಪಸ್ ತೆಗೆದುಕೊಂಡರು. ಒಂದು ಚೆಕ್ ಕೊಟ್ಟು ಇನ್ನೊಂದು ಚೆಕ್ ವಾಪಸ್ ಪಡೆದುಕೊಳ್ಳಲು ರಾಹುಲ್ ಗಾಂಧಿ ಇಲ್ಲಿಗಂಟ ಬರಬೇಕಿತ್ತೇ ಎಂದು ಪುಟ್ಟರಾಜು ಬೇಸರ ವ್ಯಕ್ತ ಪಡಿಸಿದ್ದಾರೆ.

ಲಂಡನ್ ನಲ್ಲಿ ಕಲಿತದ್ದು ಇದೇನಾ?

ಲಂಡನ್ ನಲ್ಲಿ ಕಲಿತದ್ದು ಇದೇನಾ?

ಮಂಡ್ಯದ ಜನ ದಡ್ಡರಲ್ಲ, ರಾಜಕೀಯ ಯಾವ ವಿಚಾರದಲ್ಲಿ ಮಾಡಬೇಕೋ ಅಲ್ಲಿ ಮಾಡಬೇಕು. ಲಂಡನ್ ಹೋಗಿ ಇದೇನಾ ಪಾಠ ಕಲಿತಿದ್ದು, ಎಸ್ ಎಂ ಕೃಷ್ಣ ಮುಂತಾದ ಮುಖಂಡರಿಂದ ರಮ್ಯಾ ಕಲಿತುಕೊಳ್ಳಲಿ ಎಂದು ಶನಿವಾರ ( ಅ10) ಪತ್ರಿಕಾಗೋಷ್ಠಿಯಲ್ಲಿ ಪುಟ್ಟರಾಜು ಎಚ್ಚರಿಕೆ ನೀಡಿದ್ದಾರೆ.

 ಡಿಗ್ಗಿ ಕೆಂಡಾಮಂಡಲ

ಡಿಗ್ಗಿ ಕೆಂಡಾಮಂಡಲ

ಕೊತ್ತತ್ತಿಗೆ ಭೇಟಿ ನೀಡದ ಕಾರಣಕ್ಕಾಗಿ ದಿಗ್ವಿಜಯ್, ಪಕ್ಷದ ಪದ್ದತಿ ಏನೂಂತ ಗೊತ್ತಿದೆ ತಾನೇ, ವಾಟ್ ನಾನ್ಸೆನ್ ಯು ಆರ್ ಡುಯಿಂಗ್, ಒಂದು ಜವಾಬ್ದಾರಿ ಅನ್ನೋದು ಇಲ್ವಾ, ಪಕ್ಷದ ಶಿಸ್ತು ಪಾಲಿಸದಿದ್ದರೆ 'ಇಟ್ ವಿಲ್ ಫಿನಿಷ್ ಯು' ಎಂದು ಅಂಬರೀಶ್ ಗೆ ಎಚ್ಚರಿಕೆ ನೀಡಿದ್ದರು.

 ಹಿಂದಕ್ಕುಳಿದ ಅಂಬರೀಶ್

ಹಿಂದಕ್ಕುಳಿದ ಅಂಬರೀಶ್


ಈ ಘಟನೆಯಿಂದ ಆವಕ್ಕಾದ ಅಂಬರೀಶ್, ರಾಹುಲ್ ಗಾಂಧಿ ಮಂಡ್ಯ ಪ್ರವಾಸದುದ್ದಕ್ಕೂ ಹಿಂದಕ್ಕೆ ಉಳಿದರು. ಇತ್ತ ರಾಹುಲ್ ಮಂಡ್ಯ ಪ್ರವಾಸದುದ್ದಕ್ಕೂ ರಮ್ಯಾ ಪಾದರಸದಂತೆ ಓಡಾಡಿ ಎಲ್ಲರ ಆಕರ್ಷಣೆ ಬಿಂದುವಾಗಿದಿದ್ದು ಸತ್ಯ.

 ರಮ್ಯಾ ಅವರಿಂದಲೇ ರಾಹುಲ್ ಇಲ್ಲಿಗೆ ಬಂದಿದ್ದು

ರಮ್ಯಾ ಅವರಿಂದಲೇ ರಾಹುಲ್ ಇಲ್ಲಿಗೆ ಬಂದಿದ್ದು

ರಾಹುಲ್ ಗಾಂಧಿ ಜಿಲ್ಲೆಗೆ ಬಂದು ವಾಪಸ್ಸಾಗುವ ತನಕೆ ಅವರ ಜೊತೆ ಪಾದರಸದಂತೆ ಓಡಾಡಿದ್ದು ರಮ್ಯಾ. ರಾಹುಲ್ ಗಾಂಧಿ ಮಂಡ್ಯಕ್ಕೆ ಬರಲು ರಮ್ಯಾ ಅವರೇ ಕಾರಣ. ರಮ್ಯಾ ಇನ್ಮುಂದೆ ಸಚಿವರೂ ಆಗ್ತಾರೆ, ಎಂಎಲ್ಸಿಯೂ ಆಗ್ತಾರೆ ಎನ್ನುವುದು ಮಂಡ್ಯ ಜನರ ಮಾತು.

English summary
All is not weel in Karnataka Congress, between Ambarish and Ramya. The incident which is happened in Mandya when AICC Vice president Rahul Gandhi visit on October 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X