ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಹಾಕಿಕೊಂಡ ನಂತರ ಆಲ್ಕೋಹಾಲ್ ಡೇಂಜರ್? ವೈದ್ಯರ ಉತ್ತರ ಇಲ್ಲಿದೆ

|
Google Oneindia Kannada News

ಕೊರೊನಾ ಎರಡನೇ ಅಲೆಯ ನಂತರ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬನ್ನಿಬನ್ನಿ ಎಂದು ಗೋಗರೆದರೂ ಹೋಗದಿದ್ದವರು ಈಗ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿರುವುದು ಗಮನಿಸಬೇಕಾದ ವಿಚಾರ.

ಈ ನಡುವೆ, ಲಸಿಕೆಯ ಮೊದಲ ಡೋಸ್ ಮತ್ತು ಎರಡನೇ ಡೋಸ್ ನಡುವೆ ಮತ್ತು ಎರಡನೇ ಡೋಸ್ ತೆಗೆದುಕೊಂಡ 20-25 ದಿನಗಳ ಕಾಲ ಮದ್ಯಪಾನ ಮಾಡಬಾರದು ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ಮಹಾರಾಷ್ಟ್ರದಲ್ಲಿ ಭಯ ಹುಟ್ಟಿಸಿದ ಕೊರೊನಾವೈರಸ್ ಸೋಂಕು!ಮಹಾರಾಷ್ಟ್ರದಲ್ಲಿ ಭಯ ಹುಟ್ಟಿಸಿದ ಕೊರೊನಾವೈರಸ್ ಸೋಂಕು!

ಈ ಸುದ್ದಿಗಳಿಂದಾಗಿ ಮದ್ಯ ಬಿಟ್ಟಿರಲಾಗದವರು ಲಸಿಕೆ ಹಾಸಿಕೊಳ್ಳಲಿಕ್ಕೆ ಹಿಂದೇಟು ಹಾಕುವ ಸಾಧ್ಯತೆಯೂ ಇಲ್ಲದಿಲ್ಲ. ನಿಜವಾಗಲೂ, ಲಸಿಕೆ ಹಾಕಿಸಿಕೊಂಡ ನಂತರ ಮದ್ಯಪಾನ ಮಾಡಬಾರದಾ ಎನ್ನುವ ಪ್ರಶ್ನೆಗೆ ವೈದ್ಯರೊಬ್ಬರು ಉತ್ತರ ನೀಡಿದ್ದಾರೆ.

 ಭಾರತದ ಭಾರತದ "ಕೋವ್ಯಾಕ್ಸಿನ್" ಲಸಿಕೆ ತಿರಸ್ಕರಿಸಿದ ಬ್ರೆಜಿಲ್; ಕಾರಣವೇನು?

ರಾಜೂಸ್ ಹೆಲ್ತಿ ಇಂಡಿಯಾದ ಮುಖ್ಯಸ್ಥ ಡಾ.ರಾಜು ಕೃಷ್ಣಮೂರ್ತಿಯವರು ವಿಡಿಯೋ ಮೂಲಕ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಲಸಿಕೆ ಹಾಕಿಸಿಕೊಂಡ ನಂತರ ಅಲ್ಕೋಹಾಲ್ ಸೇವಿಸಬಹುದಾ, ಹೌದು ಎಂದಾದರೆ ಎಷ್ಟು ದಿನದ ನಂತರ ಮತ್ತು ಕೊರೊನಾ ಎರಡನೇ ಅಲೆಯ ಬಗ್ಗೆ ವೈದ್ಯರು ಹೇಳುವುದು ಹೀಗೆ. ಮುಂದೆ ಓದಿ...

 ರಾಜೂಸ್ ಹೆಲ್ತಿ ಇಂಡಿಯಾದ ಮುಖ್ಯಸ್ಥ ಡಾ.ರಾಜು ಕೃಷ್ಣಮೂರ್ತಿ

ರಾಜೂಸ್ ಹೆಲ್ತಿ ಇಂಡಿಯಾದ ಮುಖ್ಯಸ್ಥ ಡಾ.ರಾಜು ಕೃಷ್ಣಮೂರ್ತಿ

"ಕೊರೊನಾ ಲಸಿಕೆ ಇರಲಿ ಅಥವಾ ಇನ್ಯಾವುದೋ ವ್ಯಾಕ್ಸಿನ್ ಇರಲಿ, ಇದನ್ನು ಹಾಕಿಸಿಕೊಂಡ ನಂತರ ಮದ್ಯಪಾನ ಮಾಡಬಾರದು ಎಂದೇನಿಲ್ಲ. ಆದರೆ, ರಷ್ಯಾದಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡ ನಂತರ 42 ದಿನಗಳ ಕಾಲ ಆಲ್ಕೋಹಾಲ್ ತೆಗೆದುಕೊಳ್ಳಬಾರದು ಎಂದು ಅಲ್ಲಿನ ವೈದ್ಯರೊಬ್ಬರು ಹೇಳಿದ್ದರು. ಇದಕ್ಕೆ ಅವರು ಕೊಟ್ಟ ಕಾರಣ, ಒಂದು ರಿಯಾಕ್ಷನ್ ಜಾಸ್ತಿ ಇರುತ್ತದೆ ಮತ್ತು ಲಸಿಕೆಯ ಪ್ರಭಾವ ಕಮ್ಮಿಯಾಗುತ್ತದೆ ಎಂದು ರಷ್ಯಾದ ವೈದ್ಯರು ಅಭಿಪ್ರಾಯ ಪಟ್ಟಿದ್ದರು"ಎಂದು ಡಾ.ರಾಜು ಹೇಳಿದ್ದಾರೆ.

 ಕ್ಲಿನಿಕಲ್ ಟ್ರಯಲ್ ಕೂಡಾ ನಡೆದಿಲ್ಲ

ಕ್ಲಿನಿಕಲ್ ಟ್ರಯಲ್ ಕೂಡಾ ನಡೆದಿಲ್ಲ

"ಆಲ್ಕೋಹಾಲ್ ಸೇವಿಸಬಹುದೇ ಎನ್ನುವ ವಿಚಾರದಲ್ಲಿ ಖ್ಯಾತ ವೈದ್ಯರು ಮತ್ತು ಲಸಿಕೆ ತಯಾರಿಸಿದ ಕಂಪೆನಿಯ ಬಳಿ ಸ್ಪಷ್ಟನೆಯನ್ನು ಕೇಳಿದ್ದೆ. ಆಲ್ಕೋಹಾಲ್‌ನಿಂದ ವೈರಸ್ ಕೂಡಾ ಸಾಯುವುದಿಲ್ಲ, ಲಸಿಕೆಯ ಪ್ರಭಾವವೂ ಕಮ್ಮಿಯಾಗುವುದಿಲ್ಲ ಎಂದು ಹೇಳಿದ್ದರು. ಡೋಸೇಜ್ ಅವಧಿಯಲ್ಲಿ ಆಲ್ಕೋಹಾಲ್ ಕುಡಿದರೆ ಯಾವುದೇ ರಿಯಾಕ್ಷನ್ ಆಗುವುದಿಲ್ಲ. ಲಸಿಕೆ ಕೊಟ್ಟ ನಂತರ ಆಲ್ಕೋಹಾಲ್ ಕುಡಿದರೆ ಏನು ಪರಿಣಾಮ ಬೀರಬಹುದು ಎನ್ನುವ ಕ್ಲಿನಿಕಲ್ ಟ್ರಯಲ್ ಕೂಡಾ ನಡೆದಿಲ್ಲ ಎನ್ನುವ ಸ್ಪಷ್ಟನೆ ಖ್ಯಾತ ವೈದ್ಯರು ಮತ್ತು ಸಂಸ್ಥೆಯಿಂದ ಬಂದಿದೆ" ಎಂದು ಡಾ.ರಾಜು ಹೇಳಿದ್ದಾರೆ.

 ಆಲ್ಕೋಹಾಲ್ ತೆಗೆದುಕೊಳ್ಳಬಾರದು ಎನ್ನುವುದು ಸುಳ್ಳು

ಆಲ್ಕೋಹಾಲ್ ತೆಗೆದುಕೊಳ್ಳಬಾರದು ಎನ್ನುವುದು ಸುಳ್ಳು

"ಅಮೆರಿಕಾದ ಡ್ರಗ್ಸ್ ಸರ್ಟಿಫಿಕೇಶನ್ ನೀಡುವ ಎರಡು ಸಂಸ್ಥೆಗಳು ಕೂಡಾ ಎಲ್ಲೂ ಆಲ್ಕೋಹಾಲ್ ತೆಗೆದುಕೊಳ್ಳಬಾರದು ಎಂದು ಹೇಳಿಲ್ಲ. ಭಾರತದ ಲಸಿಕೆ ತಯಾರಿಸಿದ ಕಂಪೆನಿ ಮತ್ತು ನಮ್ಮ ವೈದ್ಯರು ಕೂಡಾ ಮದ್ಯಪಾನ ಮಾಡಬಾರದೆಂದು ಹೇಳಿಲ್ಲ. ಹಾಗಾಗಿ, ಲಸಿಕೆ ತೆಗೆದುಕೊಂಡ ನಂತರ ಆಲ್ಕೋಹಾಲ್ ತೆಗೆದುಕೊಳ್ಳಬಾರದು ಎನ್ನುವುದು ಸುಳ್ಳು"ಎಂದು ಡಾ.ರಾಜು ಹೇಳಿದ್ದಾರೆ.

 ಮರುದಿನ ಹ್ಯಾಂಗೋವರ್ ಇರುತ್ತದೆ

ಮರುದಿನ ಹ್ಯಾಂಗೋವರ್ ಇರುತ್ತದೆ

"ಆಲ್ಕೋಹಾಲ್ ಜಾಸ್ತಿ ತೆಗೆದುಕೊಂಡರೆ ಮರುದಿನ ಹ್ಯಾಂಗೋವರ್ ಇರುತ್ತದೆ. ಜನರಿಗೆ ಲಸಿಕೆ ತೆಗೆದುಕೊಂಡ ನಂತರ ಹೀಗಾಗಿರಬಹುದು ಎನ್ನುವ ಕಲ್ಪನೆಯಲ್ಲಿ ಇರುವ ಸಾಧ್ಯತೆಯಿದೆ. ಹಾಗಾಗಿ, ಕೆಲವೊಂದು ವೈದ್ಯರು ಆಲ್ಕೋಹಾಲ್ ಕುಡಿಯಬೇಡಿ ಎಂದು ಹೇಳಿರಬಹುದು. ಹಾಗಾಗಿ, ಮದ್ಯಪಾನ ಈ ಅವಧಿಯಲ್ಲಿ ಮಾಡಬಾರದು ಎನ್ನುವುದು ಸತ್ಯಕ್ಕೆ ದೂರವಾದ ಸುದ್ದಿ"ಎಂದು ಡಾ.ರಾಜು ಹೇಳಿದ್ದಾರೆ.

.

Recommended Video

ಕರ್ನಾಟಕ: ಇಂದಿನಿಂದ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ವಿತರಣೆ | Oneindia Kannada

ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

English summary
Is Consuming Alcohol is Harm After Taking Corona Vaccine: Clarification From Dr. Raju Krishnamurthy. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X