ಹವ್ಯಕ ಮಹಾಸಭೆ ಚುನಾವಣೆ: ಆದಿಶಂಕರ ಬಳಗಕ್ಕೆ ಜಯ

ಬೆಂಗಳೂರು, ಡಿ 18: ಸಮಸ್ತ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀ ಅಖಿಲ ಹವ್ಯಕ ಮಹಾಸಭೆಯ 16 ಸ್ಥಾನಗಳಿಗೆ ಭಾನುವಾರ (ಡಿ 17) ನಡೆದ ಚುನಾವಣೆಯಲ್ಲಿ, ಎಲ್ಲಾ ಸ್ಥಾನಗಳಲ್ಲಿ ಸಮಾಜ ನಿಷ್ಠವಾದ ಶ್ರೀ ಆದಿಶಂಕರ ಬಳಗಕ್ಕೆ ಸೇರಿದ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ವಿಜೇತರಾಗಿದ್ದಾರೆ.

ಚುನಾವಣೆ ನಡೆದ 16 ಸ್ಥಾನಗಳಲ್ಲಿ 12ಸ್ಥಾನಗಳಿಗೆ ಆದಿಶಂಕರ ಬಳಗದವರು ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನುಳಿದ 4ಸ್ಥಾನಗಳಿಗೆ ಮತದಾನದ ಮೂಲಕ ಆಯ್ಕೆ ನಡೆಯಿತು.

Akhila Havyaka Mahasabha election: Aadi Shankara team members won the election

ಆದಿಶಂಕರ ಬಳಗದ ಅಭ್ಯರ್ಥಿಗಳಾದ ಎ ಎನ್ ಹೆಗಡೆ ಹಾರೂಗಾರ್ (2235) ಪ್ರಶಾಂತ ಭಟ್ (2211) ಪ್ರಸನ್ನ ಕೆ ಎಸ್ (2183) ಕೃಷ್ಣಮೂರ್ತಿ ಎಸ್ ಭಟ್ (2151) ಮತಗಳನ್ನು ಪಡೆದು ಪ್ರಚಂಡ ಮತಗಳೊಂದಿಗೆ ಆಯ್ಕೆಯಾಗಿದ್ದಾರೆ.

ಪ್ರತಿಸ್ಪರ್ಧಿಗಳಾಗಿದ್ದ ಎಂ ಆರ್ ಮಂಜುನಾಥ್(485) ಶಿವಾನಂದ ಎಸ್(437) ಎಂ ಎನ್ ಹೆಗಡೆ ಕಡತೋಕ(424) ತಾರಾನಾಥ್ ಯು ಆರ್ (349) ಮತಗಳನ್ನು ಮಾತ್ರ ಪಡೆಯುವ ಮೂಲಕ ಸೋಲು ಅನುಭವಿಸಿದ್ದಾರೆ.

ಹವ್ಯಕ ಸಮಾಜ ಈ ಚುನಾವಣೆಯ ಮೂಲಕ " ಸಮಾಜ ಒಗ್ಗಟ್ಟಾಗಿದೆ, ಸಮಾಜ ಒಡೆಯುವವರನ್ನು ತಿರಸ್ಕರಿಸುತ್ತದೆ" ಎಂಬ ಸ್ಪಷ್ಟ ಉತ್ತರವನ್ನು ನೀಡಿ ಗುರುಸ್ಥಾನಗಳಿಗೆ ಹಾಗೂ ಸಮಾಜಕ್ಕೆ ಗೌರವವನ್ನು ಸಲ್ಲಿಸಿದೆ ಎಂದು ಆದಿಶಂಕರ ಬಳಗ ಸಂತೋಷ ವ್ಯಕ್ತ ಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+