ದೇಶದಲ್ಲೇ ಪ್ರಪ್ರಥಮ ಬಾರಿಗೆ ಪರಿಸರ ಸ್ನೇಹಿ ಬೋಯಿಂಗ್ ವಿಮಾನ ಪರಿಚಯಿಸಿದ 'ಆಕಾಸ ಏರ್‌ಲೈನ್‌'

ಬೆಂಗಳೂರು, ಆಗಸ್ಟ್ 01: ಪರಿಸರಕ್ಕೆ ಪೂರಕವಾದ ದ್ವಿಚಕ್ರ ವಾಹನ, ಕಾರು, ಬಸ್‌ಗಳನ್ನು ಸಾಲಿಗೆ ಇದೀಗ ವಿಮಾನಗಳು ಸೇರಿವೆ. ಹೌದು ದೇಶದಲ್ಲೇ ಮೊದಲ ಬಾರಿಗೆ ಪರಿಸರ ಸ್ನೇಹಿಯಾದ ಮತ್ತು ಕಡಿಮೆ ಹೊಗೆ ಹೊರಸೂಸುವ 'ಬೋಯಿಂಗ್'‌ ಹೊಂದಿರುವ 20ನೇ ವಿಮಾನವನ್ನು 'ಆಕಾಸ ಏರ್‌ಲೈನ್‌' ಮಂಗಳವಾರ ಪರಿಚಯಿಸಿತು.

ಪರಿಸರ ಸ್ನೇಹಿ ಬೋಯಿಂಗ್ ಆದ 737 MAX , 737-8-200 ವಿಮಾನವು ಮಂಗಳವಾರ ಬೆಳಗ್ಗೆ 9.31ಗಂಟೆಗೆ ಬೆಂಗಳೂರಿಗೆ ಆಗಮಿಸಿತು. ಈ ನೂತನ ವಿಮಾನವನ್ನು ಯುಎಸ್‌ಎನ ಸಿಯಾಟಲ್‌ನಲ್ಲಿ ಈ ವಿಮಾನಯಾನವು ಅಲ್ಲಿಂದ ಹೊರಟು ಇಂದು ಬೆಂಗಳೂರಿಗೆ ಬಂದು ತಲುಪಿದೆ ಎಂದು ಏರ್‌ಲೈನ್ಸ್ ತಿಳಿಸಿದೆ.

Akasa Airlines Introduced Eco Friendly Boeing Flight In First Time Of India, Know Speciality

ಕಳೆದ ವರ್ಷದ ವಿಮಾನಯಾವನ್ನು ಪ್ರಾರಂಭಿಸಿದ ಆಕಾಸ ವಿಮಾನ ಸಂಸ್ಥೆಯು ಒಂದು ವರ್ಷದೊಳಗೆ 20 ಪರಿಸರ ಸ್ನೇಹಿ ವಿಮಾನವನ್ನು ವಿವಿಧ ಮಾರ್ಗಗಳಿಗೆ ತೆರೆದಿದೆ. ಇನ್ನು, ವಿಮಾನನೌಕಾಪಡೆಗೆ ಸೇರ್ಪಡೆಗೊಳ್ಳಬೇಕೆಂದರೆ, ಕನಿಷ್ಠ 20 ವಿಮಾನಗಳನ್ನು ಹೊಂದಿರಬೇಕು. ಆ ನಿಯಮದಂತೆ ಇಂದು ಏರ್‌ಲೈನ್ಸ್ ತನ್ನ 20ನೇ ವಿಮಾನವನ್ನು ಪರಿಚಯಿಸಿರುವ ಆಕಾಸ ವಿಮಾನ ಕಂಪನಿಯು ಇದೀಗ ವಿಮಾನನೌಕಾಪಡೆಗೂ ಸೇರ್ಪಡೆಗೊಂಡಿದೆ.

ಒಂದೇ ವರ್ಷದಲ್ಲಿ 20 ವಿಮಾನ

ಈ ಕುರಿತು ಮಾತನಾಡಿದ ಆಕಾಸ ಏರ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ದುಬೆ ಅವರು, ಆಕಾಸ ವಿಮಾನಯಾನ ಪ್ರಾರಂಭಗೊಂಡ ಒಂದೇ ವರ್ಷದಲ್ಲಿ ತನ್ನ ವಿಮಾನಗಳ ಸಂಖ್ಯೆಯನ್ನು 20ಕ್ಕೆ ಹೆಚ್ಚಿಸಿಕೊಂಡಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಅದೂ ಅಲ್ಲದೆ ಮೊದಲ ಬಾರಿಗೆ ಬೋಯಿಂಗ್ 737 MAX ವಿಮಾನ ಪಡೆದ ಸಂಸ್ಥೆಯೂ ನಮ್ಮದಾಗಿದೆ. ಈ ಬೋಯಿಂಗ್‌ನ ವಿಶೇಷತೆ ಎಂದರೆ, ಇದು ಸಾಮಾನ್ಯ ಎಂಜಿನ್‌ಗಿಂತ ಶೇಕಡಾ 20ರಷ್ಟು ಕಡಿಮೆ ಇಂಧನ ಹೊರ ಸೂಸುತ್ತದೆ. ಹೀಗಾಗಿ ಹೆಚ್ಚು ಪರಿಸರ ಸ್ನೇಹಿ ವಿಮಾನ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Akasa Airlines Introduced Eco Friendly Boeing Flight In First Time Of India, Know Speciality

ಪರಿಸರ ಸ್ನೇಹಿ ವಿಮಾನದ ವಿಶೇಷತೆ

ಇಂಧನ ದಕ್ಷತೆಯನ್ನು ಸಹ ಇದು ಕಾಪಾಡಿಕೊಳ್ಳಲು ಹೆಚ್ಚು ಸಹಕಾರಿಯಾಗಿದೆ. ಈ ಬೋಯಿಂಗ್‌ನಿಂದ ಗ್ರಾಹಕರಿಗೆ ಆರಾಮದಾಯಕ ಪ್ರಯಾಣ ದೊರೆಯಲಿದೆ. ಇದಷ್ಟೇ ಅಲ್ಲದೆ, ಬೇರೆ ವಿಮಾನಗಳಂತೆ ಇದು ಹೆಚ್ಚು ಶಬ್ಧ ಮಾಡುವುದಿಲ್ಲ. ಶೇ.೫೦ರಷ್ಟು ಕಡಿಮೆ ಶಬ್ಧ ಮಾಡಲಿದ್ದು, ಶಬ್ಧ ಮಾಲಿನ್ಯವನ್ನು ತಡೆಯಲಿದೆ ಎಂದು ಅವರು ವಿವರಿಸಿದರು.

ಆಗಸ್ಟ್ 2022ರಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಆಕಾಸ ವಿಮಾನಸಂಸ್ಥೆಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆ ಆಗಿದೆ. ಇಂದು 20 ವಿಮಾನಗಳ ಸಮೂಹವನ್ನು ಹೊಂದಿದೆ ಮತ್ತು ಇದುವರೆಗೆ 4 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ. 16 ಭಾರತೀಯ ನಗರಗಳನ್ನು ಸಂಪರ್ಕಿಸುವ 35 ವಿವಿಧ ಮಾರ್ಗಗಳಲ್ಲಿ ಹಾರಾಟ ನಡೆಸುತ್ತಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+