ಬೆಂಗಳೂರಿನಲ್ಲಿ ಡಿ.12ರಂದು ವಾಯುಪಡೆಗೆ ನೇಮಕಾತಿ

ಬೆಂಗಳೂರು, ನ. 24 : ಭಾರತೀಯ ವಾಯು ಪಡೆಯು ಗ್ರೂಫ್ ಎಕ್ಸ್ ವಿಭಾಗದ ಎಜುಕೇಷನ್ ಇನ್‍ಸ್ಟ್ರಕ್ಟರ್ ಹುದ್ದೆಗಳ ಭರ್ತಿಗಾಗಿ 2014ರ ಡಿಸೆಂಬರ್ 12 ರಂದು ಬೆಂಗಳೂರಿನ ಕಬ್ಬನ್ ರಸ್ತೆಯ ಏರ್‍ಮನ್ ಆಯ್ಕೆ ಕೇಂದ್ರದಲ್ಲಿ ನೇಮಕಾತಿ ನಡೆಯಲಿದೆ. 22 ವರ್ಷಕ್ಕೆ ಮೇಲ್ಪಟ್ಟ ಅವಿವಾಹಿತ ಪುರುಷ ಅಭ್ಯರ್ಥಿಗಳು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ.

ನೇಮಕಾತಿಗೆ ಆಗಮಿಸುವ ಅಭ್ಯರ್ಥಿಗಳು ಕನಿಷ್ಠ ಶೇ. 50 ಅಂಕಗಳೊಂದಿಗೆ ಕಲೆ, ವಿಜ್ಞಾನ, ವಾಣಿಜ್ಯ ವಿಭಾಗಗಳಲ್ಲಿ ಪದವಿ ಪಡೆದಿದ್ದು ಬಿ.ಎಡ್., ಪದವಿ ಅಥವಾ ಸರ್ಕಾರದಿಂದ ಮಾನ್ಯತೆ ಹೊಂದಿದ ಶಾಲೆ/ಕಾಲೇಜಿನಲ್ಲ್ಲಿ ಎರಡು ವರ್ಷಗಳ ಬೋಧನಾ ಅನುಭವ ಅಥವಾ ಇಂಗ್ಲೀಷ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದರಾಗಿರಬಕು.

Indian Air Force

ಪದವಿ ಅಭ್ಯರ್ಥಿಗಳು 1991ರ ಫೆಬ್ರವರಿ 1 ಮತ್ತು 1995 ರ ಮೇ 31 ರ ನಡುವೆ ಹುಟ್ಟಿದವರಾಗಿರಬೇಕು. ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು 1988ರ ಫೆಬ್ರವರಿ 1 ರಿಂದ 1995ರ ಮೇ 31 ರ ನಡುವೆ ಜನಿಸಿದವರಾಗಿರಬೇಕು. [ಎಸ್ ಬಿಐನಲ್ಲಿ 6425 ಕ್ಲರ್ಕ್ ಹುದ್ದೆಗಳಿವೆ ಅರ್ಜಿ ಹಾಕಿ]

ಅರ್ಹ ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ ಉತ್ತೀರ್ಣರಾಗಿರುವ ದಾಖಲೆ ಮತ್ತು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪ್ರಮಾಣ ಪತ್ರಗಳ ಮೂಲ ಪ್ರತಿ ಹಾಗೂ ನಾಲ್ಕು ಸ್ವಯಂ ದೃಢೀಕರಿಸಿದ ಪ್ರತಿಗಳು ಹಾಗೂ 7 ಪಾಸ್‍ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರಗಳೊಡನೆ ಪರೀಕ್ಷೆಗೆ ಹಾಜರಾಗಬೇಕು.

ಹೆಚ್ಚಿನ ವಿವರಗಳಿಗಾಗಿ www.indianairforce.nic.in ವೆಬ್‌ಸೈಟ್ ಅಥವ ವಾಯುದಳ ನೇಮಕಾತಿ ಕೇಂದ್ರ ನಂ. 1 ಕಬ್ಬನ್ ರಸ್ತೆ, ಬೆಂಗಳೂರು 560 001 ಇಲ್ಲಿಗೆ ಭೇಟಿ ನೀಡಬಹುದಾಗಿದೆ. 080-25592199 ದೂರವಾಣಿ ಸಂಖ್ಯೆಗೂ ಕರೆ ಮಾಡಿ ಮಾಹಿತಿ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+