ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ: ಮೊದಲ ಹಂತದ ರೂಟ್ ಮ್ಯಾಪ್

ಬೆಂಗಳೂರು, ಜನವರಿ 23: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಫೆಬ್ರವರಿ 10ರಿಂದ ಕರ್ನಾಟಕದಲ್ಲಿ ಚುನಾವಣೆ ರಣ ಕಹಳೆ ಊದಲಿದ್ದಾರೆ. ರಾಹುಲ್ ಗಾಂಧಿ ಅವರ ಪ್ರವಾಸ ಮಾರ್ಗ, ಕೈಗೊಳ್ಳಬೇಕಾದ ಪೂರ್ವ ಸಿದ್ಧತೆ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು ರಾಹುಲ್ ಅವರ ಪ್ರವಾಸದ ಮೊದಲ ಹಂತದ ಮಾರ್ಗದ ನಕಾಶೆಯನ್ನು ಪ್ರಕಟಿಸಿದ್ದಾರೆ.

ರಾಹುಲ್ ಗಾಂಧಿ ಅವರ ಮೊದಲ ಹಂತದ ರೂಟ್ ಮ್ಯಾಪ್ ನಿಗದಿಯಾಗಿದ್ದು, ಫೆಬ್ರವರಿ 10 ಮತ್ತು 12ಕ್ಕೆ ಮೊದಲ ಹಂತದ ಯಾತ್ರೆ ಹೊಸಪೇಟೆಯಿಂದ ಆರಂಭವಾಗಲಿದೆ. ಈ ಸಮಾವೇಶಕ್ಕೆ ಕನಿಷ್ಟ 2ಲಕ್ಷ ಜನರನ್ನ ಸೇರಿಸಲು ನಾಯಕರಿಗೆ ಪರಮೇಶ್ವರ್ ಸೂಚನೆ ನೀಡಿದ್ದಾರೆ.

ಮಾರ್ಗ ಹೀಗಿದೆ: ಹೊಸಪೇಟೆಯಿಂದ ಆರಂಭವಾಗುವ ರಾಹುಲ್ ಅವರ ರೋಡ್ ಶೋ- ಕೊಪ್ಪಳ, ಯಲಬರ್ಗ, ಕುಷ್ಟಗಿ, ಕನಕಗಿರಿ, ಕರಟಗಿ, ಸಿಂಧನೂರು, ಮಾನ್ವಿ, ರಾಯಚೂರು, ಶಕ್ತಿನಗರ, ಸೈದಾಪೂರ ಮತ್ತು ಯಾದಗಿರಿಗೆ ರಸ್ತೆ ಮೂಲಕವಾಗಿ ಯಾದಗಿರಿಯಲ್ಲಿ ಮೊದಲ ಹಂತದ ಯಾತ್ರೆ ಮುಗಿಯಲಿದೆ. ನಂತರ ಹೆಲಿಕ್ಯಾಪ್ಟರ್ ಮೂಲಕ ಬಸವಕಲ್ಯಾಣಗೆ ರಾಹುಲ್ ತೆರಳಲಿದ್ದಾರೆ. ಬಸವಕಲ್ಯಾಣದಿಂದ ಹೈದರಾಬಾದ್ ಗೆ ತೆರಳಿ ದೆಹಲಿ ಪ್ರಯಾಣ ಮಾಡಲಿದ್ದಾರೆ

AICC President Rahul Gandhi's Karnataka Election campaign first phase route map

ರಾಹುಲ್ ಅವರು ಈ ಬಾರಿ ಬಸ್ ಮೂಲಕ ಯಾತ್ರೆ ನಡೆಸಲಿರುವುದು ವಿಶೇಷ. ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ, ಜಿಲ್ಲಾಧ್ಯಕ್ಷರಿಗೆ, ಎಂ ಎಲ್ ಎ ಗಳಿಗೆ ಮತ್ತು ಹಾಲಿ ಟಿಕೆಟ್ ಆಕಾಂಕ್ಷಿಗಳಿಗೆ ಪರಮೇಶ್ವರ್ ಮತ್ತು ವೇಣುಗೋಪಾಲ್ ಖಡಕ್ ಸೂಚನೆ ನೀಡಿದ್ದಾರೆ.

ರಾಹಲ್ ಪ್ರವಾಸದ ಸಂದರ್ಭದಲ್ಲಿ ಯಾತ್ರೆ ಉದ್ದಕ್ಕೂ ಜನರನ್ನ ಸೇರಿಸುವ ಜವಾಬ್ದಾರಿ ಆಯಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೆ ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಬಸವ ಕಲ್ಯಾಣ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗದ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಲು ತೀರ್ಮಾನಿಸಲಾಗಿದೆ. ಫೆಬ್ರವರಿ 21,22,23ರಂದು ಎರಡನೆಯ ಹಂತದ ಪ್ರಯಾಣದಲ್ಲಿ ಶೃಂಗೇರಿ ಮಠ ಹಾಗೂ ಉಡುಪಿ ಮಠಕ್ಕೆ ಭೇಟಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+