ಗ್ರೇಟರ್ ಬೆಂಗಳೂರು ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ, ಬೆಂಗಳೂರು ಕಾನೂನು ಘಟಕಕ್ಕೆ ನೇಮಕಗೊಳಿಸಿ ಆದೇಶ
ಗ್ರೇಟರ್ ಬೆಂಗಳೂರು ಚುನಾವಣೆಗೆ ಈಗ ದಿನಗಣನೆ ಆರಂಭವಾಗಿದೆ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯಲು ಸಕಲ ಸೂತ್ರಗಳ ಹೆಣೆಯುತ್ತಿದೆ. ಕನ್ನಡಿಗರ ರಾಜಧಾನಿ ಬೆಂಗಳೂರು ಬೃಹತ್ ಆಗಿ ಬೆಳೆದಿರುವ ಕಾರಣಕ್ಕೆ ಬಿಬಿಎಂಪಿ ವಿಲೀನ ಮಾಡಿ, ಆಡಳಿತವನ್ನ ಸುಲಲಿತವಾಗಿ ನಡೆಸಲು ಗ್ರೇಟರ್ ಬೆಂಗಳೂರು ಸ್ಥಾಪನೆ ಮಾಡಲಾಗಿದೆ. ಹೀಗೆ ಇನ್ನೇನು ಕೆಲ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಆಡಳಿತಕ್ಕೆ ಚುನಾವಣೆ ಕೂಡ ನಡೆಯಲಿದೆ. ಇದೇ ಸಮಯದಲ್ಲಿ ಕರ್ನಾಟಕದಲ್ಲಿ ಯುವ ಕಾಂಗ್ರೆಸ್‌ಗೆ ಇನ್ನಷ್ಟು ಬಲ ತುಂಬಲು ಎಐಸಿಸಿ ಮಹತ್ವದ ಕ್ರಮ ಕೈಗೊಂಡಿದೆ.
ಕಾಂಗ್ರೆಸ್ ಪಕ್ಷ 2023ರ ವಿಧಾನಸಭೆ ಚುನಾವಣೆ ಗೆದ್ದು ಬೀಗುವಲ್ಲಿ ಗ್ಯಾರಂಟಿ ಯೋಜನೆಗಳು ಸಾಕಷ್ಟು ಬಲ ತುಂಬಿದ್ದವು. ಈಗಾಗಲೇ ಯಶಸ್ವಿಯಾಗಿ 2 ವರ್ಷವನ್ನು ಪೂರೈಸಿ 3ನೇ ವರ್ಷಕ್ಕೆ ಕಾಲಿಟ್ಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಗ್ರೇಟರ್ ಬೆಂಗಳೂರು ಚುನಾವಣೆ ಗೆಲುವು ಬಹುಮುಖ್ಯವಾಗಿದೆ. ಅದರಲ್ಲೂ ಈ ಚುನಾವಣೆ ಗೆಲ್ಲಲು ಯುವ ಕಾಂಗ್ರೆಸ್ ಬಲ ತುಂಬಲಿದೆ ಎಂಬುದು ಲೆಕ್ಕಾಚಾರವಾಗಿದೆ. ಈಗಾಗಲೇ, ಹಲವು ಪ್ರಮುಖ ಸ್ಥಾನಗಳಿಗೆ ನೇಮಕಾತಿ ಮಾಡಿದ್ದ ಎಐಸಿಸಿ ನಾಯಕರು ಇದೀಗ ಯುವ ಕಾಂಗ್ರೆಸ್ ಬೆಂಗಳೂರು ಕಾನೂನು ಘಟಕವೂ ಸೇರಿದಂತೆ ಕರ್ನಾಟಕದ ಯುವ ಕಾಂಗ್ರೆಸ್ ಕಾನೂನು ಘಟಕಕ್ಕೆ ನೇಮಕಗೊಳಿಸಿ ಆದೇಶ ಹೊರಡಿಸಿದೆ.

ಯುವ ಕಾಂಗ್ರೆಸ್ ಕಾನೂನು ಘಟಕಕ್ಕೆ ನೇಮಕ
ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಬಲವಾಗಿದೆ. ಹೀಗಾಗಿ ಅಳೆದು ತೂಗಿ ಇದೀಗ ಯುವ ಕಾಂಗ್ರೆಸ್ ಬೆಂಗಳೂರು ಕಾನೂನು ಘಟಕಕ್ಕೆ ಮುಖ್ಯಸ್ಥರ ನೇಮಕವಾಗಿದೆ. ಪ್ರಮುಖವಾಗಿ ಬೆಂಗಳೂರು ದಕ್ಷಿಣ ಭಾಗಕ್ಕೆ ಅಧ್ಯಕ್ಷರಾಗಿ ಪುಟ್ಟಬೈರೇಗೌಡ ಎಬಿ ನೇಮಕವಾಗಿದ್ದರೆ, ಉಪಾಧ್ಯಕ್ಷರಾಗಿ ಎಂ. ರಾಕೇಶ್ ಈಗ ನೇಮಕವಾಗಿದ್ದಾರೆ. ಹಾಗೂ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಸೇರಿ ಬೆಂಗಳೂರು ಪಶ್ಚಿಮ ಮತ್ತು ಬೆಂಗಳೂರು ಗ್ರಾಂ. ಯುವ ಕಾಂಗ್ರೆಸ್ ಕಾನೂನು ಘಟಕಕ್ಕೆ ಮಾಡಿದ್ದಾರೆ ಎಐಸಿಸಿ ನಾಯಕರು.
ಯುವ ಕಾಂಗ್ರೆಸ್ ಬೆಂಗಳೂರು ದಕ್ಷಿಣ ಕಾನೂನು ಘಟಕಕ್ಕೆ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಯುವ ವಕೀಲ ಪುಟ್ಟಬೈರೇಗೌಡ ಎಬಿ ಮಾತನಾಡಿ, ತಮ್ಮ ಮೇಲೆ ನಂಬಿಕೆ ಇಟ್ಟು ಈ ಸ್ಥಾನಕ್ಕೆ ಆಯ್ಕೆ ಮಾಡಿರುವ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ. ಹಾಗೇ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎಸ್. ಮಂಜುನಾಥ್ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ. ಈಗಾಗಲೇ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆಗಳು ಶುರು ಆಗಿದ್ದು, ಕಾಂಗ್ರೆಸ್ ಪಕ್ಷ ಪ್ರಥಮವಾಗಿ ಗ್ರೇಟರ್ ಬೆಂಗಳೂರು ಅಧಿಕಾರ ಹಿಡಿಯುವ ಗುರಿಯೊಂದಿಗೆ ಇದೀಗ ಮುನ್ನುಗ್ಗುತ್ತಿದೆ.












Click it and Unblock the Notifications