AI Hampi Photos: ಜನರ ಕಣ್ಮನ ಸೆಳೆಯುತ್ತಿರುವ 'ಹಂಪಿ' ಎಐ ಪೋಟೊಗಳು, ವೈರಲ್
ಬೆಂಗಳೂರು, ಜುಲೈ 24: ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಪ್ರಮುಖವಾಗಿರುವ ಹಂಪಿಯ ಗತ ವೈಭವವು ಆರ್ಟಿಫಿಷಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ-AI) ನಲ್ಲಿ ಮರುಕಳಿಸಿದ್ದು, ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಎಐ ಮೂಲಕ ಹಂಪಿಯ ವಿಜಯನಗರ ಸಾಮ್ರಾಜ್ಯ ಹೇಗಿತ್ತು ಎಂಬುದನ್ನು ಚಿತ್ರಿಸಲಾಗಿದೆ. ಈ ಬಗೆಗಿನ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹಂಪಿಯಲ್ಲಿ ಇತ್ತೀಚೆಗಷ್ಟೇ ಜಿ-20 ಸಭೆ ನಡೆಯಿತು. ಸಭೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಎಐ ಮೂಲಕ ರಚಿಸಲಾದ ಹಂಪಿ ಮತ್ತು ವಿಜಯನಗರ ಸಾಮ್ರಾಜ್ಯದ ಈ ಚಿತ್ರಗಳನ್ನು ಹಂಚಿಕೊಂಡಿದ್ದರು. ಇವುಗಳು ಇದೀಗ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಾಗಿಸುವಲ್ಲಿ ಬಾರೀ ಗಮನ ಸೆಳೆದಿವೆ. ಈ ಚಿತ್ರಗಳಿಗೆ ಹಂಪಿಯಲ್ಲಿ ಪ್ರವಾಸಿಗರು ಮನಸೋತಿದ್ದಾರೆ.

ರಾಜ ಮಹಾರಾಜರ ಕಾಲದಲ್ಲಿ ಹಂಪಿಯ ಪರಂಪರೆ ಹೇಗಿತ್ತು, ವಿಜಯನಗರ ಸಾಮ್ರಾಜ್ಯ, ಅಲ್ಲಿನ ಜನರು, ಆಚಾರ ವಿಚಾರ, ಸಂಪನ್ಮೂಲ, ದೇವಾಲಯ ವಾಸ್ತುಶಿಲ್ಪ ಹೀಗೆ ಎಲ್ಲವನ್ನು ಎಐ ಚಿತ್ರಗಳಲ್ಲಿ ಕಾಣಬಹುದಾಗಿದೆ. ಈ ಎಐ ಚಿತ್ರಗಳು ಹಂಪಿಯ ಪರಂಪರೆಯನ್ನು ಸಾರುತ್ತಿದೆ.
ಕಣ್ಮನ ಎಐ ಸೆಳೆಯುತ್ತಿರುವ ಫೋಟೊಗಳು
ವಿಜಯನಗರ ಸಾಮ್ರಾಜ್ಯದಲ್ಲಿ ಇದ್ದಿರುವಂತೆ ಹಳೆಯ ಮಾರುಟ್ಟೆ, ಜನರ ಖರೀದಿ- ಓಡಾಟ ಕುದುರೆ, ಆನೆ ಹಾಗೂ ಇತರೆ ಪ್ರಾಣಿಗಳನ್ನು ಸುಂದರವಾಗಿ ಬಿಡಿಸಲಾಗಿದೆ. ತುಂಬಿ ಹರಿಯುತ್ತಿರುವ ನದಿ, ದೇವಾಲಯಗಳು, ರಾಜಮನೆತನದ ಚಿತ್ರ ಹಲವರ ಕಣ್ಮನ ಸೆಳೆಯುತ್ತಿದೆ ಎಂದು ಜಿ20 ಪ್ರತಿನಿಧಿಗಳಿಗೆ ಪ್ರವಾಸಿ ತಾಣಗಳ ಪರಿಚಯಿಸಿದ ಗೈಡ್ ಒಬ್ಬರು ಮಾಹಿತಿ ನೀಡಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯರ ಆಳ್ವಿಕೆಯಲ್ಲಿ ಮುತ್ತು-ರತ್ನಗಳನ್ನು ಸೇರಿನಲ್ಲಿ ಅಳೆಯುತ್ತಿದ್ದರು. ಹಂಪಿ ಸಂಪದ್ಬರಿತವಾಗಿತ್ತು ಎನ್ನುವುದನ್ನು ನಾವು ಇತಿಹಾಸ, ಪುಸ್ತಕಗಳ ಮೂಲಕ ಓದಿ ತಿಳಿದುಕೊಳ್ಳುತ್ತಿದ್ದೆವು. ಇದೀಗ ಹಂಪಿ ಪರಂಪರೆಯನ್ನು, ವಿಜಯನಗರ ಸಾಮ್ರಾಜ್ಯ ವನ್ನು ಆರ್ಟಿಫಿಷಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ-AI) ಮೂಲಕ ಚಿತ್ರಿಸಿ ಜಗತ್ತಿಗೆ ತೋರಿಸಲಾಗಿದೆ.
ಪಾರಂಪರಿಕ ಸ್ಥಳ ಕಣ್ತುಂಬಿಕೊಳ್ಳಲು ಪ್ರವಾಸಿಗರ ಬೇಟಿ
ಇಷ್ಟೊಂದು ಸುಂದರ ಹಂಪಿ ಇಂದು ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ವಾಸ್ತು ಶಿಲ್ಪ, ದೇವಾಲಯಗಳು ಹಾಳಾಗಿದೆ, ಹೀಗಿದ್ದರೂ ಇಲ್ಲಿಗೆ ಬರುವ ದೇಶ ವಿದೇಶಿ ಪ್ರವಾಸಿಗರಿಗೇನು ಕಡಿಮೆ ಇಲ್ಲ. ಹಂಪಿಯಲ್ಲಿರುವ ಸ್ಮಾರಕಗಳು, ದೇವಾಲಯಗಳು ಮತ್ತು ಇತರ ಪಾರಂಪರಿಕ ಸ್ಥಳಗಳ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ.
ಇನ್ನೂ ಇತ್ತೀಚಿನ ದಿನಗಳಲ್ಲಿ ಹಂಪಿಯಲ್ಲಿ ಇಂದು ಪ್ರೀ ವೆಡ್ಡಿಂಗ್ ಶೂಟ್‌ಗೆ ಹೇಳಿ ಮಾಡಿಸಿದ ಜಾಗವಾಗಿದೆ. ಫೋಟೋ ಅಥವಾ ಫಿಲ್ಮ್ ಶೂಟ್‌ಗಳಿಗೆ ಸ್ಥಳೀಯ ಅಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಪ್ರವಾಸಿಗರಿಗೆ ಸದ್ಯ ಮೊಬೈಲ್ ಕ್ಲಿಕ್‌ಗೆ ಅನುಮತಿ ಇದೆ.
ಎಐ ನಲ್ಲಿ ಮೂಡಿ ಬಂದ ಹಂಪಿಯ ಚಿತ್ರಗಳು ಮನಸೂರಿ ಮಾಡುತ್ತಿದ್ದು, ಅತ್ಯಾಕರ್ಷಕವಾಗಿವೆ. ಆದರೆ ಅವು ಹಂಪಿಯ ಸ್ಮಾರಕಗಳಿಗೆ ನ್ಯಾಯ ಒದಗಿಸುತ್ತಿಲ್ಲ. ಚಿತ್ರಗಳು ಉತ್ತರ ಭಾರತದಲ್ಲಿ ಇರುವ ದೇವಾಲಯಗಳನ್ನು ಹೋಲುತ್ತವೆ ಎಂದು ಹಂಪಿಯ ಖ್ಯಾತ ಛಾಯಾಗ್ರಾಹಕ ಶಿವಶಂಕರ ಬಣಗಾರ್ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications