ಗೌರಿ ಹತ್ಯೆಯ ಬಳಿಕ, ಎಡಪಂಥೀಯರನ್ನು ಕಾಯಲು ಮುಂದಾದ ಸಿಎಂ
Recommended Video

ಬೆಂಗಳೂರು, ಸೆ. 06: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಬಳಿಕ, ಎಡಪಂಥೀಯರಿಗೆ ರಕ್ಷಣೆ ಒದಗಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಗೌರಿ ಲಂಕೇಶ್ ಹತ್ಯೆ ತನಿಖೆ ನಡೆಸಲು ವಿಶೇಷ ತನಿಖಾ ದಳ ರಚನೆ ಕುರಿತಂತೆ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಇತ್ತೀಚೆಗೆವೀರಶೈವ ಲಿಂಗಾಯತ ಪ್ರತ್ಯೇಕತೆ ಹೋರಾಟದಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಬಳಿಕ, ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಕರೆ ಬರುತ್ತಿದೆ ಎಂದು ಆ ದಿನಗಳು ಚಿತ್ರ ಖ್ಯಾತಿಯ ನಟ ಚೇತನ್ ಅಹಿಂಸ ಅವರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಗೌರಿ ಲಂಕೇಶ್ ಅವರಿಗೆ ಕಳೆದ ಕೆಲ ದಿನಗಳಿಂದ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ಬಗ್ಗೆ ಗುಪ್ತಚರ ಇಲಾಖೆಗಳಾಗಲಿ, ಪೊಲೀಸರಿಗಾಗಲಿ ಯಾವುದೇ ಮಾಹಿತಿ ಸಿಕ್ಕಿಲ್ಲ.
ಆದರೆ, ಎಡಪಂಥೀಯ ನಿಲುವು ಹೊಂದಿರುವ ವ್ಯಕ್ತಿಗಳು, ಸಮಾಜದ ಮೌಢ್ಯಗಳನ್ನು ಅಳಿಸಲು ಹೋರಾಟ ನಡೆಸುತ್ತಿರುವವರಿಗೆ ನಿರಂತರವಾಗಿ ಬೆದರಿಕೆಗಳು ಬರುತ್ತಿರುವ ಬಗ್ಗೆ ಸರ್ಕಾರ ಮಾಹಿತಿ ಕಲೆ ಹಾಕಿದೆ.
ಪ್ರೋ. ಭಗವಾನ್, ನಿಡುಮಾಮಿಡಿ ಶ್ರೀಗಳು, ನಟ ಚೇತನ್ ಸೇರಿದಂತೆ ಅನೇಕರಿಗೆ ರಕ್ಷಣೆ ಒದಗಿಸುವಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಕೇಳಿಕೊಳ್ಳಲಾಗುತ್ತಿದೆ.
ಇತ್ತ ವಿಶೇಷ ತನಿಖಾ ದಳ ರಚನೆ ಕುರಿತಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಬುಧವಾರ ಸಂಜೆ ಮತ್ತೊಮ್ಮೆ ಸಭೆ ಸೇರಿದ್ದಾರೆ. ಡಿಸಿಪಿ ಮಾಲಿನಿ ಕೃಷ್ಣಮೂರ್ತಿ, ಕ್ರೈಂ ವಿಭಾಗದ ಆಯುಕ್ತ ಸತೀಶ್, ಚಿಕ್ಕಪೇಟೆಯ ಎಸಿಪಿ, ಮುಂತಾದವರು ಸಭೆಯಲ್ಲಿದ್ದಾರೆ.












Click it and Unblock the Notifications