ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪ್ರಕಾಶ್ ರೈ ದಾರಿ ತಪ್ಪಿದ್ದಾರೆ: ಅದಕ್ಕೆ ಇಲ್ಲಿದೆ ಸಾಕ್ಷಿ ಎಂದ ಜೆಡಿಎಸ್

ಬೆಂಗಳೂರು, ಏಪ್ರಿಲ್‌ 16: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಕಾಶ್‌ ರೈ ಉರುಫ್‌ ಪ್ರಕಾಶ್‌ ರೈ ಎಂಬ ಕಲಾವಿದ ದಾರಿ ತಪ್ಪಿದ್ದಾರೆ. ಅದಕ್ಕೆ ಇಲ್ಲಿದೆ ಸಾಕ್ಷ್ಯ ಎಂದು ಜೆಡಿಎಸ್‌ ರಾಜ್ಯ ಘಟಕ ನಟ ಪ್ರಕಾಶ್‌ ರೈ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಜೆಡಿಎಸ್‌, ಕಲಾಸೇವೆ ಬಿಟ್ಟು ಕಾಂಗ್ರೆಸ್ಸಿಗೆ ಪರಿಚಾರಿಕೆ ಮಾಡುತ್ತಿರುವ ಅವರಿಗೆ ತಕ್ಕ ಪ್ರತಿಫಲವೂ ಸಂದಾಯವಾಗುತ್ತಿದೆ. ಸರಕಾರದ ಅನಧಿಕೃತ ವಕ್ತಾರನಾದರೆ ಈ ಪರಿ ಲಾಭವಿದೆಯಾ?Just Asking.. ಅಷ್ಟೇ ಪ್ರಕಾಶ್‌ ರಾಜ್‌ ಅವರೇ ಎಂದು ಕಿಡಿಕಾರಿದೆ.

After Congress Came To Power Prakash Rai Has Gone Astray Says JDS

ಮೊರಾರ್ಜಿ ವಸತಿ ಶಾಲೆಗಳಷ್ಟೇ ಅಲ್ಲ, ಸರಕಾರಿ ವಸತಿ ನಿಲಯಗಳಿಗೆ ಹಣ ಕೊಡಲು ಕಾಂಗ್ರೆಸ್‌ ಸರಕಾರಕ್ಕೆ ಕೈ ಬರುತ್ತಿಲ್ಲ. ಅಲ್ಲಿನ ಮಕ್ಕಳಿಗೆ ಒಳ್ಳೇ ಆಹಾರವಿಲ್ಲ, ನೀರೂ ಇಲ್ಲ. ಸರಕಾರಿ ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ. ಈಚೆಗಷ್ಟೇ ನೀವು ಸ್ಥಾಪಿಸಿದ 'ನಿರ್ದಿಗಂತʼಕ್ಕೆ ಹಣದ ಹೊಳೆ ಹರಿಸುತ್ತಿದೆ ಸರಕಾರ. ನಿಮ್ಮ ಜೋಳಿಗೆ ಭರ್ತಿ ಆಗುತ್ತಿದೆ. Just Asking.. ಅಷ್ಟೇ ಪ್ರಕಾಶ್‌ ರಾಜ್‌ ಅವರೇ ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿಗಳ ವಿಶೇಷ ತೌಲನಿಕ ಅಧ್ಯಯನಕ್ಕಾಗಿ ಪಾಲಸಿಫ್ರಂಟ್ ಎಂಬ ಮಟ್ಟು-ಪಟ್ಟಿನ ಕಳ್ಳಕಂಪನಿಗೆ ಕೋಟಿ ಕೋಟಿ ಸುರಿದಿರುವ ಕಾಂಗ್ರೆಸ್‌ ಸರಕಾರ, ನಿಮ್ಮ 'ನಿರ್ದಿಗಂತʼಕ್ಕೂ ಹಣ ಸುರಿಯುತ್ತಿದೆ. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕಸ ಹೊಡೆಯೋರು ದಿಕ್ಕಿಲ್ಲ, ಕನ್ನಡ ಭವನದಲ್ಲಿ ಧೂಳು ಕೊಡವೋರು ಗತಿ ಇಲ್ಲ. ಇಲ್ಲಿ ನಿಮ್ಮ ಜೋಳಿಗೆಯಲ್ಲಿ ಭರ್ತಿ ಝಣ ಝಣ ಕಾಂಚಾಣ!! ಹೆಂಗೆ? Just Asking.. ಅಷ್ಟೇ ಪ್ರಕಾಶ್‌ ರಾಜ್‌ ಅವರೇ ಎಂದು ಕಿಡಿಕಾರಿದೆ.

ದಾರಿ ತಪ್ಪಿದ ಮಗ ಯಾರು: ಪ್ರಕಾಶ್‌ ರೈ

ಒಂದೆಡೆ.. ಗ್ಯಾರಂಟಿಗಳಿಂದಾಗಿ ಸ್ವಲ್ಪವಾದರೂ ದಾರಿಗೆ ಬಂದ ಬಡ ಕುಟುಂಬಗಳು... ಮತ್ತೊಂದೆಡೆ... ಪೂರ್ತಿಯಾಗಿ ದಿಕ್ಕೆಟ್ಟ, ದಾರಿಗೆಟ್ಟ ಕುಮಾರಸ್ವಾಮಿಗಳು. -ಶಿವಸುಂದರ್ ಹೇಳಿ, "ದಾರಿ ತಪ್ಪಿದ ಮಗ ಯಾರು ?? ಎಂದು ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ. ಹಾಗೂ ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿರುವ ನಟ ಪ್ರಕಾಶ್ ರೈ ಹೆಣ್ಣುಮಕ್ಕಳ ಬಗ್ಗೆ ಇಷ್ಟು ಕೀಳು ಮಟ್ಟಕ್ಕೆ ಮಾತನಾಡಲು ಕುಮಾರಸ್ವಾಮಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲವೇ"? ಎಂದು ಕಿಡಿಕಾರಿದ್ದಾರೆ. ಕಳೆದ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಬಗ್ಗೆ ಕುಮಾರಸ್ವಾಮಿ ಕೆಟ್ಟದಾಗಿ ಮಾತನಾಡಿದ್ದರು. ಆ ಕಾರಣಕ್ಕೆ ಮಂಡ್ಯದ ಮಹಿಳೆಯರು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಿದ್ದರು. ಈ ಬಾರಿಯ ಚುನಾವಣೆಯಲ್ಲೂ ಕುಮಾರಸ್ವಾಮಿ ಅದೇ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 'ಸರಿಯಾದ ಮಗ ಯಾರ ಎಂಬುವುದನ್ನು ಮಂಡ್ಯದ ಜನರು ತೀರ್ಮಾನಿಸಬೇಕು ಎಂದು ಹೇಳಿದರು.

ಎರಡೇ ವರ್ಷಗಳ ಹಿಂದೆ ದೆಹಲಿ ಮಹಾಪ್ರಭುಗಳು ಉತ್ತರ ಕುಮಾರಸ್ವಾಮಿಯ ಕುಟುಂಬಕ್ಕೆ ಅಪ್ಪ ಮಗ, ಮೊಮ್ಮಕ್ಕಳ ಪಕ್ಷ ಅಂತ ಮುಖಕ್ಕೆ ಉಗಿದಿದ್ರು. ಈ ಕಡೆ ಉತ್ತರ ಕುಮಾರಸ್ವಾಮಿಗಳು ಸಿಟ್ಟಿಗೆದ್ದು, ಮಹಾಪ್ರಭು ಕಳ್ಳ ಖದೀಮ ಅಂತೋನು, ಇಂಥೋನು ಅಂತ ಇವ್ರೂ ಎಂದು ಕುಮಾರಸ್ವಾಮಿ ಹಾಗೂ ಮೋದಿ ಅವರ ಮಾತುಗಳನ್ನ ಪ್ರಸ್ತಾಪಿಸಿ ಕಿಡಿಕಾರಿದ್ದಾರೆ. ಇದೀಗ ಇಬ್ರೂ MIX ಆಗಿಬಿಟ್ಟಿವ್ರೆ. ಅವನ ಉಗುಳನ್ನ ಇವನು ಇವನ ಉಗುಳನ್ನ ಅವನು ಒರೆಸಿಕೊಂಡು ಕುಂತಿದ್ದಾರೆ. ಅವನಿಗೂ ನಾಚಿಕೆಯಿಲ್ಲ, ಇವನಿಗೂ ನಾಚಿಕೆಯಿಲ್ಲ. ಎಲ್ಲವನ್ನೂ ನೋಡ್ತಿದ್ದೇವೆ ಇಬ್ಬರಿಗೂ ಪಾಠ ಕಲಿಸುತ್ತೇವೆ ಎಂದು ನಟ ಪ್ರಕಾಶ್‌ ರೈ ಕುಟುಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+