Mysore Sandal Soap: ಮೈಸೂರು ಸ್ಯಾಂಡಲ್ ಸೋಪ್‌ಗೆ ಖ್ಯಾತ ನಟಿ ಬ್ರ್ಯಾಂಡ್ ಅಂಬಾಸಿಡರ್ ?
Mysore Sandal Soap: ಕರ್ನಾಟಕದ ಪ್ರಸಿದ್ಧ ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರು ನೇಮಕವಾಗುವ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಕರ್ನಾಟಕದ ಸುಪ್ರಸಿದ್ಧ ಸೋಪ್ ಮೈಸೂರು ಸ್ಯಾಂಡಲ್ ಸಾಬೂನಿಗೆ ವಿಶ್ವದಾದ್ಯಂತ ಬಳಕೆದಾರರು ಇದ್ದಾರೆ. ಇದರ ಘಮಲು ಈಗ ಕರ್ನಾಟಕದಿಂದ ಭಾರತ ಹಾಗೂ ವಿಶ್ವದ ಹಲವು ರಾಷ್ಟ್ರಗಳಿಗೆ ಹಬ್ಬಿದೆ. ಇದೀಗ ಐತಿಹಾಸಿಕ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಸಂಸ್ಥೆಯಾಗಿರುವ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ತಮನ್ನಾ ಅವರನ್ನು ಹೊಸ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ಳಲು ಸಿದ್ಧತೆ ಶುರು ಮಾಡಿಕೊಂಡಿದೆ. ಕರ್ನಾಟಕದ ಸುಪ್ರಸಿದ್ಧ ಹಾಗೂ ವಿಶ್ವ ವಿಖ್ಯಾತ ಉತ್ಪನ್ನಕ್ಕೆ ತಮನ್ನಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡುವ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಮೈಸೂರು ಸ್ಯಾಂಡಲ್ ಸೋಪ್ ಹಲವು ದಾಖಲೆಗಳನ್ನು ನಿರ್ಮಿಸಿರುವ ಕರ್ನಾಟಕದ ಹೆಮ್ಮೆಯ ಪ್ರಾಡೆಕ್ಟ್. ಈ ಪ್ರಾಡೆಕ್ಟ್‌ಗೆ ಭಾರತದಾದ್ಯಂತ ಸಪರೇಟ್ ಫ್ಯಾನ್‌ಬೇಸ್ ಇದೆ. ಇದೀಗ ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ನಟಿ ತಮನ್ನಾ ಅವರನ್ನು ನೇಮಿಸಿಕೊಳ್ಳಲು ಮುಂದಾಗಿದ್ದು, ಚರ್ಚೆಗಳು ಜೋರಾಗಿವೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರು ಈ ಉತ್ಪನ್ನದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಮುಂದೆ ತಮನ್ನಾ ಅವರು ಮೈಸೂರು ಸ್ಯಾಂಡಲ್ ಸೋಪ್ ಬ್ರ್ಯಾಂಡ್ ಅಂಬಾಸಿಡರ್ ಆಗುವ ಸಾಧ್ಯತೆ ಇದೆ ಎಂದು Moneycontrol ವರದಿ ಮಾಡಿದೆ.

ಮೈಸೂರು ಸ್ಯಾಂಡ್ ಸೋಪ್‌ಗೆ ತನ್ನದೇ ಆದ ಇತಿಹಾಸವಿದೆ. ಈ ಸೋಪ್ ಅಂದಿನಿಂದಲೂ ತನ್ನ ಗುಣಮಟ್ಟ ಹಾಗೂ ಸುವಾಸನೆಯನ್ನು ಉಳಿಸಿಕೊಂಡಿದೆ. ಗ್ರಾಹಕರ ಮೆಚ್ಚಿನ ಸೋಪುಗಳಲ್ಲಿ ಒಂದಾಗಿದ್ದು ಬಹುಬೇಡಿಕೆಯ ಸೋಪ್ ಆಗಿದೆ. ಇದೀಗ ಹೊಸ ಗ್ರಾಹಕರು ಹಾಗೂ ಯುವ ಸಮೂಹವನ್ನು ಸೆಳೆಯು ಉದ್ದೇಶದಿಂದ ಮೈಸೂರು ಸ್ಯಾಂಡಲ್ ಸೋಪ್‌ಗೆ ಹೊಸ ರಾಯಭಾರಿಯನ್ನಾಗಿ ತಮನ್ನಾ ಅವರನ್ನು ನೇಮಿಸಿಕೊಳ್ಳುವುದಕ್ಕೆ ಚರ್ಚೆ ನಡೆದಿದೆ. ಮುಂದಿನ ತಿಂಗಳು ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಭೆ ನಡೆಯಲಿದ್ದು. ಇದರಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.

ಉತ್ತರ ಭಾರತದ ಮಾರುಕಟ್ಟೆ ದೃಷ್ಟಿ: ಮೈಸೂರು ಸ್ಯಾಂಡಲ್ ಸೋಪ್ ಈಗಾಗಲೇ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಗಳಿಸಿದೆ. ಶ್ರೀಗಂಧದ ಎಣ್ಣೆಯಿಂದ ತಯಾರಿಸುವ ಈ ಸೋಪ್‌ಗೆ ಅಪಾರ ಅಭಿಮಾನಿಗಳು ಇದ್ದಾರೆ. ಗುಣಮಟ್ಟ ಹಾಗೂ ಸುವಾಸನೆಯಿಂದ ಈ ಸೋಪ್ ಇಂದಿಗೂ ಹೆಸರುವಾಸಿಯಾಗಿದೆ. ದಕ್ಷಿಣದಲ್ಲಿ ಈಗಾಗಲೇ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿರುವ ಸೋಪ್ ಇದೀಗ ಉತ್ತರ ಭಾರತದಲ್ಲೂ ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಮುಂದಾಗಿದೆ. ಉತ್ತರ ಭಾರತದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಶೇ6% ಮಾರುಕಟ್ಟೆಯನ್ನು ಹೊಂದಿದೆ. ದಕ್ಷಿಣ ರಾಜ್ಯಗಳಲ್ಲಿ ಪ್ರಾಬಲ್ಯ ಹೆಚ್ಚಾಗಿದ್ದು. ಇಲ್ಲಿ ಶೇ 81% ರಷ್ಟು ಪಾಲನ್ನು ಹೊಂದಿದೆ. ಹೀಗಾಗಿ ಉತ್ತರ ಭಾರತದಲ್ಲೂ ಇದರ ಮಾರುಕಟ್ಟೆಯನ್ನು ವಿಸ್ತರಿಸಲು ಯೋಜನೆ ರೂಪಿಸಲಾಗುತ್ತಿದೆ.












Click it and Unblock the Notifications