Vinod Prabhakar: ದರ್ಶನ್ ಭೇಟಿಗೆ ಬಂದ ವಿನೋದ್ ಪ್ರಭಾಕರ್: ಜೂನಿಯರ್ ಟೈಗರ್‌ನಿಂದ ಕೊಲೆ ಆರೋಪಿಗೆ ಬೆಂಬಲ?
ಬೆಂಗಳೂರು, ಜೂನ್ 24: ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಇದೀಗ ಅಕ್ಷರಶಃ ವಿಲವಿಲ ಎನ್ನುತ್ತಿದ್ದಾರೆ. ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಹೊರ ರಾಜ್ಯದಲ್ಲೂ ಸಾಕಷ್ಟು ಸದ್ದು ಮಾಡುತ್ತಿದ್ದು, ದಾಸ ಕೊನೆಗೂ ಜೈಲು ಸೇರುವಂತಾಗಿದ್ದು, ದರ್ಶನ್ ಅವರಿಂದ ಸಾಕಷ್ಟು ಅಂತರ ಪಡೆದುಕೊಂಡಿದ್ದ ಸ್ನೇಹಿತರು ಇದೀಗ ದರ್ಶನ್ ಭೇಟಿಗೆ ಮುಂದಾಗಿದ್ದಾರೆ.
ನಟಿ ಪವಿತ್ರಾಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ ಎಂಬ ವಿಚಾರವಾಗಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದಂದುಕೊಲೆ ಮಾಡಿದ ದರ್ಶನ್ ಅಂಡ್ ಗ್ಯಾಂಗ್ ಇದೀಗ ಜೈಲು ಸೇರಿದ್ದಾರೆ. ನಟ ದರ್ಶನ್ ಹಾಗೂ ನಟಿ ಪವಿತ್ರಾಗೌಡ, ನಟ ಪ್ರದೂಶ್ ಸೇರಿ ಒಟ್ಟು 16 ಜನರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇತ್ತ ದರ್ಶನ್ ಜೊತೆಗಿದ್ದ ಕನ್ನಡ ಚಿತ್ರನಟರೂ ಮೌನಕ್ಕೆ ಜಾರಿದ್ದು, ಇದೀಗ ದರ್ಶನ್ ಜೈಲು ಸೇರಿದ 3ನೇ ದಿನದ ಬಳಿಕ ಜೂನಿಯರ್ ಟೈಗರ್ ವಿನೋದ್ ಪ್ರಭಾಕರ್ ಅವರು ದರ್ಶನ್ ನೋಡಲು ಜೈಲಿಗೆ ಆಗಮಿಸಿದ್ದಾರೆ.

ನಟ ದರ್ಶನ್ ಸೈಲು ಸೇರಿದ್ದು, ದರ್ಶನ್ ಕುರಿತು ಮಾಧ್ಯಮಗಳ ಪ್ರಶ್ನೆಗೆ ಹಲವು ಜನ ಸ್ನೇಹಿತರು ಮೌನವಹಿಸಿದ್ದರು. ಇದೀಗ ದರ್ಶನ್ ಜೈಲಿನಲ್ಲಿ ಮೂರು ದಿನ ಕಳೆದ ಬಳಿಕ ನಟ ದರ್ಶನ್ ನೋಡಲು ಆತನ ಆಪ್ತ ಸ್ನೇಹಿತ ನಟ ವಿನೋದ್ ಪ್ರಭಾಕರ್ ಕೂಡ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸರು ಹಂತ ಹಂತವಾಗಿ ತಪಾಸಣೆ ಮಾಡಿ ಜೈಲಿನ ಒಳಗೆ ನೋಡಲು ಅವಕಾಶ ಕೊಡಲು ಮುಂದಾಗಿದ್ದಾರೆ.
ದರ್ಶನ್ ನೋಡಲು ಬಂದ ವಿನೋದ್ ಪ್ರಭಾಕರ್ ಅವರನ್ನ ಗೇಟಿನ ಹೊರಗೆ ಕಾರನ್ನು ನಿಲ್ಲಿಸಿ ಸಾಮಾನ್ಯ ಜನರಂತೆ ನಡೆದುಕೊಂಡ ಹೋದ ವಿನೋದ್ ಪ್ರಭಾಕರ್ ಅವರಿಗೆ ಮೊಬೈಲ್ ನಿಷೇಧದ ಬಗ್ಗೆ ಮಾಹಿತಿ ನೀಡಿ ನಂತರ ಒಳಗೆ ಬಿಡಲು ಮುಂದಾಗಿದ್ದಾರೆ. ದರ್ಶನ್ ಜೊತೆಗೆ ಉತ್ತಮ ಗೆಳತನ ಹೊಂದಿದ್ದ, ವಿನೋದ್ ಪ್ರಭಾಕರ್ ಅವರು 'ನವಗ್ರಹ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಪೊಲೀಸರಿಂದ ಅನುಮತಿ ಪಡೆದುಕೊಂಡು ದರ್ಶನ್ ಅವರನ್ನು ವಿನೋದ್ ಪ್ರಭಾಕರ್ ಭೇಟಿ ಮಾಡಿದ್ದಾರೆ. ಕಷ್ಟದಲ್ಲಿ ಇರುವ ಗೆಳೆಯನನ್ನು ಅವರು ಮಾತನಾಡಿಸಿಕೊಂಡು ಬಂದಿದ್ದಾರೆ.
ದರ್ಶನ್ ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ
ಇನ್ನು ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರದ ಜೈಲು ಸೇರಿರುವ ನಟ ದರ್ಶನ್ ಭೇಟಿಯಾಗಲು ಬಂದಿದ್ದ ವಿಜಯಲಕ್ಷ್ಮಿಗೆ ಜೈಲಿನ ಸಿಬ್ಬಂದಿ ವಿಶೇಷ ಆತಿಥ್ಯ ನೀಡಿದ್ದಾರೆ. ದರ್ಶನ್ ಬೇಟಿಗೆ ಆಗಮಿಸಿರುವ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ಅವರು ಮಾಧ್ಯಮದವರ ಕ್ಯಾಮೆರಾಗಳನ್ನು ನೋಡಿ ತುಸು ದೂರದಲ್ಲಿ ಕಾರನ್ನು ನಿಲ್ಲಿಸಿದ್ದರು.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಕ್ರೈಂ ಪೇದೆ ಗಣೇಶ್, ಅವರನ್ನು ಭೇಟಿ ಮಾಡಿ ವಿಶೇಷ ಆತಿಥ್ಯದ ಮೂಲಕ ಜೈಲಿನೊಳಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ಮುಂದಾಗಿದ್ದಾರೆ. ಇನ್ನು ನಟ ದರ್ಶನ್ ಸೆಲೆಬ್ರಿಟಿ ಆಗಿದ್ದರಿಂದ ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂಬ ಮಾತು ಕೂಡ ಕೇಳಿಬರುತ್ತಿವೆ.












Click it and Unblock the Notifications