ಕರ್ನಾಟಕ ತುಂಡು-ತುಂಡಾಗುವುದು ಬೇಡ: ಶಿವರಾಜ್‌ಕುಮಾರ್
ಬೆಂಗಳೂರು, ಆಗಸ್ಟ್ 01: ನಮ್ಮ, ಪ್ರೀತಿಯ ಕರ್ನಾಟಕ ತುಂಡು-ತುಂಡಾಗುವುದು ಬೇಡ, ನಮ್ಮದು ಅಖಂಡ ಕರ್ನಾಟಕ ಅದು ಹಾಗೆಯೇ ಇರಬೇಕು ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಹೆಚ್ಚಾಗುತ್ತಿರುವ ಪ್ರತ್ಯೇಕ ರಾಜ್ಯದ ಕೂಗಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನಮ್ಮದು ಹುಬ್ಬಳ್ಳಿ ಭಾಷೆ, ಮೈಸೂರು ಭಾಷೆ, ನಮ್ಮದು ಉತ್ತರ , ನಮ್ಮದು ದಕ್ಷಿಣ ಎಂಬೆಲ್ಲಾ ತಾರತಮ್ಯ ಬೇಡ ನಾವೆಲ್ಲಾ ಒಂದೇ ಎಂದು ಮನದ ಮಾತು ಹೇಳಿದರು.
ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಎಲ್ಲರಿಗೂ ಕಷ್ಟದ ಸಮಯಗಳು ಬರುತ್ತವೆ, ಉತ್ತರವೇ ಆಗಲಿ ದಕ್ಷಿಣವೇ ಆಗಲಿ ಆದರೆ ಹಾಗೆಂದ ಮಾತ್ರಕ್ಕೆ ಪ್ರತ್ಯೇಕವಾದರೆ ಸಮಸ್ಯೆ ಸರಿ ಆಗಿ ಬಿಡುತ್ತದೆಯೇ ಎಂದರು.

ರಾಜಕಾರಣಿಗಳು, ಸ್ವಾಮೀಜಿಗಳ ಬೆಂಬಲ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ಕೆಲವು ರಾಜಕಾರಣಿಗಳು, ಸ್ವಾಮೀಜಿಗಳು ಬೆಂಬಲ ನೀಡುತ್ತಿರುವ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ಅವರಿಗೆ ಬುದ್ಧಿ ಹೇಳುವಷ್ಟು ದೊಡ್ಡವನಲ್ಲ ನಾನು ಆದರೆ ರಾಜ್ಯ ಒಡೆಯುವುದು ಮಾತ್ರ ತಮಗೆ ಸ್ವಲ್ಪವೂ ಇಷ್ಟವಿಲ್ಲ ಎಂದು ಶಿವರಾಜ್‌ಕುಮಾರ್ ಸ್ಪಷ್ಟಪಡಿಸಿದರು.












Click it and Unblock the Notifications