Shiva Rajkumar: ಅಣ್ಣಾವ್ರ ತವರೂರಿಗೆ ಭೇಟಿ ಕೊಟ್ಟ ನಟ ಶಿವರಾಜಕುಮಾರ್ ದಂಪತಿ
ಚಾಮರಾಜನಗರ, ನವೆಂಬರ್ 02: ಸಾಲು ಸಾಲು ಸಿನಿಮಾಗಳಲ್ಲಿ, ರಿಯಾಲಿಟಿ ಶೋನಲ್ಲಿ ಬ್ಯೂಸಿ ಇರುವ ಹಿರಿಯ ನಟ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರು ದೀಪಾವಳಿ ಹಬ್ಬವನ್ನು ಗಾಜನೂರಿನಲ್ಲಿ ಆಚರಿಸುತ್ತಿದ್ದಾರೆ. ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಅವರು ತಮಿಳುನಾಡಿನ ತಾಳವಾಡಿ ಸಮೀಪದ ಗಾಜನೂರಿಗೆ ಶನಿವಾರ ಭೇಟಿ ನೀಡಿದ್ದಾರೆ. ದಂಪತಿ ಸಮೇತರಾಗಿ ಬಂದು ಅಪ್ಪಾಜಿಯ ಜನ್ಮಭೂಮಿಯಲ್ಲಿ ಬೆಳಕಿನ ಹಬ್ಬ ಆಚರಿಸಿದ್ದಾರೆ.
ವರನಟ ಡಾ.ರಾಜಕುಮಾರ್ ಅವರು ಹುಟ್ಟಿ ಬೆಳೆದ ಗಾಜನೂರಿಗೆ ತವರಿಗೆ ಶಿವರಾಕುಮಾರ್ ಹಾಗೂ ಗೀತಾ ಶಿವರಾಜಮಾರ್ ಭೇಟಿ ನೀಡಿದ್ದಾರೆ. ಗಾಜನೂರಿನಲ್ಲೇ ಡಾ.ರಾಜ್ ಸಹೋದರಿಯಾದ ಸೋದರತ್ತೆ ನಾಗಮ್ಮ ಅವರು ವಾಸಿಸುತ್ತಿದ್ದಾರೆ. ಅವರನ್ನು ಕಂಡ ಶಿವಣ್ಣ ದಂಪತಿ ಆಶೀರ್ವಾದ ಪಡೆದಿದ್ದಾರೆ. ಈ ಮೂಲಕ ಶಿವಣ್ಣ ಅವರ ದೀಪಾವಳಿ ಸಂಭ್ರಮ ಡಬಲ್ ಆಗಿದೆ ಎನ್ನಲಾಗಿದೆ.

ಶಿವರಾಜ್ ಕುಮಾರ್ ಅವರನ್ನು ಕಂಡ ನಾಗಮ್ಮ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ನಾಗಮ್ಮ ಅವರ ಆರೋಗ್ಯ ವಿಚಾರಿಸಿ ಕೆಲ ಹೊತ್ತು ಅವರೊಂದಿಗೆ ದಂಪತಿ ಕಳೆದಿದ್ದಾರೆ. ಅಣ್ಣಾವ್ರು ಹುಟ್ಟಿದ ಹಳೇ ಮನೆ, ಮಂಟೇಸ್ವಾಮಿ ದೇಗುಲ ಸೇರಿದಂತೆ ಊರನ್ನು ಸುತ್ತಾಡಿದ ಶಿವಣ್ಣ ದಂಪತಿ ಒಂದಷ್ಟು ಹಳೇ ನೆನಪುಗಳನ್ನು ಸ್ಮರಿಸಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರ ಸ್ಥಾಪಿಸಿದ್ದ ಕ್ಷೀರ ಕೇಂದ್ರಕ್ಕೂ ಭೇಟಿ ಕೊಟ್ಟು ಶುಭ ಹಾರೈಸಿದರು.
ಗಾಜನೂರಿಗೆ ಶಿವಣ್ಣ ದಂಪತಿ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಇಷ್ಟದ ನಟನನ್ನು ನೋಡಲು ಅಭಿಮಾನಿಗಳ ದಂಡೆ ಹರಿದು ಬಂತು. ಶಿವಣ್ಣ ಹಾಗೂ ಗೀತಾ ಅವರನ್ನು ನೋಡಿದ ಅಭಿಮಾನಿಗಳು ಸೆಫ್ಟಿ ತೆಗೆಸಿಕೊಳ್ಳಲು ಮುಗಿಬಿದ್ದರು.
'ಭೈರತಿ ರಣಗಲ್' ಗೆ ಕಾಯುತ್ತಿರುವ ಫ್ಯಾನ್ಸ್
ಇತ್ತೀಚೆಗೆ ಶಿವಣ್ಣಾ ಆರೋಗ್ಯದಲ್ಲಿ ಕೊಂಚ ಏರು ಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಗುಣಮುಖರಾಗಿರುವ ಶಿವಣ್ಣ ಅವರು ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿಯೂ ಸಕ್ರಿಯವಾಗಿದ್ದಾರೆ. ಇತ್ತ ಅವರ ನಟನೆಯ 'ಭೈರತಿ ರಣಗಲ್' ಸಿನಿಮಾ ಇದೇ ತಿಂಗಳು ನವೆಂಬರ್ 15 ರಂದು ಬಿಡುಗಡೆ ಆಗಲಿದೆ. ಇದೊಂದಿಗೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
'ಬೈರತಿ ರಣಗಲ್' ಸಿನಿಮಾವನ್ನು ನಿರ್ದೇಶಕ ನರ್ತನ್ ಅವರು ನಿರ್ದೇಶಿಸಿದ್ದಾರೆ. ಇದನ್ನು ಸ್ವತಃ ಗೀತಾ ಶಿವರಾಜಕುಮಾರ್ ಅವರೇ ನಿರ್ಮಾಣ ಮಾಡಿದ್ದಾರೆ. ಗೀತಾ ಪಿಕ್ಟರ್ಚ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯಡಿ ಈ ಸಿನಿಮಾ ತಯಾರಾಗಿದೆ. ಈ ಚಿತ್ರದಲ್ಲಿ ನಟ ಶಿವಣ್ಣ ಯೂನಿಕ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳು ಇವೆ.












Click it and Unblock the Notifications