ಚಂದ್ರಯಾನ 3 ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ!ನೆಟ್ಟಿಗರಿಂದ ಖಡಕ್ ಕ್ಲಾಸ್
ಬೆಂಗಳೂರು, ಆಗಸ್ಟ್ 21: ವಿವಾದಾತ್ಮಕ ನಟ-ರಾಜಕಾರಣಿ ಪ್ರಕಾಶ್ ರಾಜ್ ಅವರು ಇತ್ತೀಚಿನ ಟ್ವೀಟ್ ಮೂಲಕ ಟೀಕೆಗಳ ಹೊಸ ಅಲೆಯನ್ನು ಹುಟ್ಟುಹಾಕಿದ್ದಾರೆ, ಭಾರತದ ಮುಂಬರುವ ಚಂದ್ರಯಾನ-3 ಮಿಷನ್ ಬಗ್ಗೆ ಅವರ ಅಪಹಾಸ್ಯದ ನಿಲುವಿಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ತಾಜಾ ಸುದ್ದಿ :~
— Prakash Raj (@prakashraaj) August 20, 2023
ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದ್ರಶ್ಯ .. #VikramLander #justasking pic.twitter.com/EWHcQxc1jA
ಭಾರತದ ಬಹುನೀರಿಕ್ಷೆಯ ಚಂದ್ರಯಾನ-3ರ ಉಡಾವಣೆ (Chandrayaan 3 Launch) ಯಶಸ್ವಿಯಾಗಿ ನಡೆದಿದೆ. ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಟೇಕಾಫ್ ಆಗಿದ್ದು, ವಿಜ್ಞಾನಿಗಳು ಸೇರಿದಂತೆ ಸಮಸ್ತ ಭಾರತೀಯರ ಮೊಗದಲ್ಲಿ ಸಂತಸ ಮೂಡಿದೆ.

ಚಂದ್ರಯಾನ - 3 ಬಗ್ಗೆ ದೇಶವೇ ಹೆಮ್ಮೆಪಡುತ್ತಿರುವಾಗ ಬಹುಭಾಷಾ ನಟ ಪ್ರಕಾಶ್ ರಾಜ್ ಚಂದ್ರಯಾನ 3ನ್ನು ವ್ಯಂಗ್ಯವಾಡಿದ್ದಾರೆ. ವ್ಯಕ್ತಿಯೊಬ್ಬ ಚಹಾ ಮಗುಚುವ ವ್ಯಂಗ್ಯ ಚಿತ್ರ ಫೋಸ್ಟ್ ಮಾಡಿದ ಪ್ರಕಾಶ್ ರಾಜ್, ತಾಜಾ ಸುದ್ದಿ: ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ಕ್ಯಾಪ್ಶನ್ ಬರೆದು ಜಸ್ಟ್ ಆಸ್ಕಿಂಗ್, ವಿಕ್ರಮ್ ಲ್ಯಾಂಡರ್ ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಈ ವ್ಯಂಗ್ಯವಾದ ಟ್ವೀಟ್ ನೋಡಿದ ನೆಟ್ಟಿಗರು ನಟನಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೋದಿ ಹಾಗೂ ಆರ್ಎಸ್ಎಸ್ನ್ನು ಬಳಸಿಕೊಂಡು ನೀವು ದ್ವೇಷ ಬಿತ್ತುತ್ತೀರಿ. ಆದರೆ ಅವರನ್ನು ಬಳಸಿಕೊಂಡು ದೇಶವನ್ನು ಬೈಯುವುದೇ ನಿಮ್ಮ ಅಸಲಿ ವ್ಯಕ್ತಿತ್ವ ಎಂದಿದ್ದಾರೆ. ಇನ್ನೂ ಕೆಲವರು ನನ್ನ ಕನ್ನಡ ಮತಾನಾಡುವ ಜನರೇ ಅವರಿಗೆ ಕನ್ನಡದಲ್ಲಿಯೇ ಕ್ಲಾಸ್ ತೆಗೆದುಕೊಳ್ಳಿ ಕಿಡಿಕಾರಿದ್ದಾರೆ.
ಮೋದಿ ಕುರಿತ ದ್ವೇಷದಲ್ಲಿ ಈ ವ್ಯಕ್ತಿ ಇನ್ನೇನು ಮಾಡುತ್ತಾರೋ, ದೇಶವನ್ನು, ಸೈಂಟಿಸ್ಟ್ಗಳನ್ನೂ ದ್ವೇಷಿಸಲು ಅವರ ಕಠಿಣ ಪರಿಶ್ರಮವನ್ನೂ ವ್ಯಂಗ್ಯ ಮಾಡಲಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
ನೆಕ್ಸ್ಟ್ ಟೈಮ್ ಯಾರಾದ್ರು ಲ್ಯಾಡರ್ ಉಡಾವಣೆ ಮಾಡಿದ್ರೆ ಈ ಪ್ರಣ್ಯತ್ಮನ್ನು ಅದರ ಜೊತೆ ಕಳುಹಿಸಿ ಕೊಡಿ , ಇಲ್ಲ ದೇಶದ ಪ್ರಧಾನ ಮಂತ್ರಿಗಳಿಗೆ ಹಾಗೂ ನಮ್ಮ ಹೆಮ್ಮೆಯ ಇಸ್ರೋ ಮಾಡಿದ ಅವಮಾನಕ್ಕೆ ಜೈಲ್ ಗೆ ಹಾಕಿ ಎಂದಿದ್ದಾರೆ ಎಂದು ಟ್ವೀಟಿಗರು ಕಿಡಿಕಾರಿದ್ದಾರೆ.
ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಕುರುಡು ದ್ವೇಷಕ್ಕಾಗಿ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಎಂದು ಹಲವರು ಭಾವಿಸಿದ್ದಾರೆ. ವ್ಯಂಗ್ಯ ಮಾಡುವುದಕ್ಕೂ ಲಿಮಿಟ್ ಇದೆ. ದೇಶದ ವಿರುದ್ಧವೇ ಟ್ವೀಟ್ ಮಾಡುವುದಲ್ಲ ಎಂದು ಬುದ್ದಿ ಹೇಳಿದ್ದಾರೆ. ಮೋದಿಯನ್ನು ದ್ವೇಷಿಸುವುದು ಒಂದು ವಿಷಯ, ಆದರೆ ಭಾರತದ ಅಭಿವೃದ್ಧಿಯನ್ನು ದ್ವೇಷಿಸುವುದು ಅಸಹ್ಯಕರ ಮತ್ತು ಪ್ರಕಾಶ್ ರಾಜ್ ಅವರಂತಹ ಕೀಳು ಜೀವಿಗಳು ಮಾತ್ರ ಮಾಡಬಹುದು! ಚಂದ್ರಯಾನವು ಭಾರತದ ಹೆಮ್ಮೆ, ಮತ್ತು ಇಡೀ ದೇಶವು ಯೋಜನೆಯ ಹಿಂದೆ ಇದೆ, ಅಂತಹ ದೇಶ ದ್ರೋಹಿಗಳನ್ನು ಹೊರತುಪಡಿಸಿ, ಭಾರತವು ಏಳಿಗೆಯನ್ನು ಬಯಸುವುದಿಲ್ಲ ಎಂದು ಪ್ರಕಾಶ್ ರಾಜ್ ವಿರುದ್ದ ಕುಟುಕಿದ್ದಾರೆ.
Prakash ji, this Chandryan mission is from ISRO not BJP. If it gets succeed, it’s for India not for any party.
— CHARLIE (@CharlieGulshan) August 20, 2023
Why you want this mission to fail? BJP is just a ruling party. It will go one day. But, ISRO will remain for years and will make us proud.
In search of truth, you’re…
ಪ್ರಕಾಶ್ ಜೀ, ಈ ಚಂದ್ರಯಾನ್ ಮಿಷನ್ ಇಸ್ರೋದಿಂದ ಬಂದದ್ದು ಬಿಜೆಪಿಯಲ್ಲ. ಅದು ಯಶಸ್ವಿಯಾದರೆ ಅದು ಯಾವುದೇ ಪಕ್ಷಕ್ಕೆ ಅಲ್ಲ ಭಾರತಕ್ಕೆ. ಈ ಮಿಷನ್ ವಿಫಲವಾಗಬೇಕೆಂದು ನೀವು ಏಕೆ ಬಯಸುತ್ತೀರಿ? ಬಿಜೆಪಿ ಕೇವಲ ಆಡಳಿತ ಪಕ್ಷ. ಇದು ಒಂದು ದಿನ ಹೋಗುತ್ತದೆ. ಆದರೆ, ಇಸ್ರೋ ವರ್ಷಗಳ ಕಾಲ ಉಳಿಯುತ್ತದೆ ಮತ್ತು ನಮಗೆ ಹೆಮ್ಮೆ ತರುತ್ತದೆ. ಸತ್ಯದ ಹುಡುಕಾಟದಲ್ಲಿ, ನೀವು ಮೂಲಭೂತ ರಾಷ್ಟ್ರೀಯತೆಯನ್ನು ಮರೆತುಬಿಡುತ್ತಿದ್ದೀರಿ. ಭಾರತದ ಸೋಲು ಗೆಲುವಾಗಬಾರದು. ಇಸ್ರೋವನ್ನು ಈ ರಾಜಕೀಯ ದ್ವೇಷದಿಂದ ದೂರವಿಡಿ ಎಂದು ನೆಟ್ಟಿಗರು ಬುದ್ದಿ ಮಾತು ಹೇಳಿದ್ದಾರೆ.












Click it and Unblock the Notifications