ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ ನಿಶ್ಚಲರಾಗಿ ಮಲಗಿರುವ 'ಮಂಡ್ಯದ ಗಂಡು' ಅಂಬರೀಶ್‌

|
Google Oneindia Kannada News

ಬೆಂಗಳೂರು, ನವೆಂಬರ್ 25: ನಟ, ರಾಜಕಾರಣಿ ಅಂಬರೀಶ್ ಅವರು ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ಅಂಬರೀಶ್ ಅವರ ಮೃತದೇಹವನ್ನು ಕಂಠೀರವ ಸ್ಟೇಡಿಯಂನಲ್ಲಿ ಅಂತಿಮದರ್ಶನಕ್ಕೆ ಇಡಲಾಗಿದೆ. ಬೆಳಿಗಿನಿಂದಲೇ ಅಂಬರೀಶ್ ಅವರ ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟೇಡಿಯಂ ಬಳಿ ಧಾವಿಸಿ ಬರುತ್ತಿದ್ದಾರೆ.

ಅಂಬರೀಶ್ ಅವರಿಗೆ ಗೌರವ ಸಲ್ಲಿಸಲು ನಾಡಿನ ರಾಜಕಾರಣಿಗಳು, ನಟ-ನಟಿಯರು ಕಣ್ಗಳಲ್ಲಿ ನೀರು ತುಂಬಿಕೊಂಡು ಕಂಠೀರವ ಸ್ಟೇಡಿಯಂ ಬಳಿಗೆ ಬರುತ್ತಿದ್ದಾರೆ.

Actor politician Ambareesh demise LIVE updates

ಹೊರ ರಾಜ್ಯಗಳಿಂದಲೂ ಚಿತ್ರರಂಗದ ಗಣ್ಯರು ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಬರುತ್ತಿದ್ದಾರೆ.

Newest FirstOldest First
5:44 PM, 25 Nov

ಮಂಡ್ಯದ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಚಿರಶಾಂತಿಯಲ್ಲಿ ಅಂಬರೀಶ್‌ ಅವರು ಇದೇ ಮೈದಾನದಿಂದಲೇ ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್‌ ಪ್ರಾರಂಭಿಸಿದ್ದರು. ಇದೇ ಕ್ರೀಡಾಂಗಣದಲ್ಲೇ 1996 ರಲ್ಲಿ ಅಂಬರೀಶ್‌ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದರು.
5:41 PM, 25 Nov

ಮಂಡ್ಯದಲ್ಲಿ ತಮ್ಮ ಮೆಚ್ಚಿನ ಅಂಬರೀಶಣ್ಣನನ್ನು ನೋಡಲು ಸಾಗರೋಪಾದಿಯಲ್ಲಿ ಬರುತ್ತಿರುವ ಜನಸಮೂಹ.
5:14 PM, 25 Nov

ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಅಂಬರೀಶ್ ಕುಟುಂಬ ಸದಸ್ಯರು, ಯಶ್, ರಾಕ್‌ಲೈನ್ ವೆಂಕಟೇಶ್‌ ಇನ್ನೂ ಹಲವು ಜನ ಅಂಬರೀಶ್‌ ಅವರ ಪಾರ್ಥಿವ ಶರೀರದ ಜೊತೆಗೆ ಮಂಡ್ಯಕ್ಕೆ ಬಂದಿದ್ದಾರೆ.
5:09 PM, 25 Nov

ಮಂಡ್ಯ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣ ತಲುಪಿದ ಅಂಬರೀಶ್ ಪಾರ್ಥಿವ ಶರೀರ. ಜಯಘೋಷಗಳನ್ನು ಹಾಕಿ ಪ್ರೀತಿಯ ಅಂಬರೀಶಣ್ಣನನ್ನು ನೆನೆದ ಅಭಿಮಾನಿಗಳು, ಪಾರ್ಥಿವ ಶರೀರ ನೋಡಲು ನೂಕುನುಗ್ಗಲು.
5:00 PM, 25 Nov

ಮಂಡ್ಯಕ್ಕೆ ಬಂದ ಅಂಬರೀಶ್ ಪಾರ್ಥಿವ ಶರೀರ. ಅಂಬರೀಶ್‌ ಕೊನೆಯ ದರ್ಶನ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಸರ್‌.ಎಂ.ವಿಶ್ವೇಶ್ವರಯ್ಯ ಮೈದಾನದಲ್ಲಿ ಸೇರಿರುವ ಅಂಬರೀಶ್ ಅಭಿಮಾನಿಗಳು.
4:22 PM, 25 Nov

ಮಂಡ್ಯದ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಶ್‌ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 6 ಗಂಟೆ ವರೆಗೆ ಅಂಬರೀಶ್ ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ.
4:21 PM, 25 Nov

ಎಚ್‌ಎಎಲ್‌ನಿಂದ ಅಂಬರೀಶ್‌ ಮೃತದೇಹವನ್ನು ಸೇನಾ ಹೆಲಿಕಾಪ್ಟರ್‌ ಮೂಲಕ ಮಂಡ್ಯಕ್ಕೆ ರವಾನೆ ಮಾಡಲಾಗುತ್ತಿದೆ. ಕೆಲವೇ ನಿಮಿಷಗಳಲ್ಲಿ ಮಂಡ್ಯಕ್ಕೆ ಅಂಬರೀಶ್ ಮೃತದೇಹ ತಲುಪಲಿದೆ.
Advertisement
4:07 PM, 25 Nov

ಅಂಬರೀಶ್ ಅವರ ಮೃತ ದೇಹ ಮಂಡ್ಯಕ್ಕೆ ತೆಗೆದುಕೊಂಡು ಹೋದ ಪರಿಣಾಮ, ಕಂಠೀರವ ಸ್ಟೇಡಿಯಂನಲ್ಲಿ ಅಭಿಮಾನಿಗಳ ಗಲಾಟೆ. ಇನ್ನೂ ಸಾಕಷ್ಟು ಜನ ದರ್ಶನ ಮಾಡುವರು ಇದ್ದರೂ ಸಹ ಮಂಡ್ಯಕ್ಕೆ ತೆಗೆದುಕೊಂಡು ಹೋಗಿದ್ದಕ್ಕೆ ಆಕ್ರೋಶ.
3:42 PM, 25 Nov

ಕಂಠೀರವ ಸ್ಟೇಡಿಯಂ ನಲ್ಲಿ ಭಾರಿ ಅಭಿಮಾನಿಗಳು ಇದ್ದರೂ ಸಹ ಸಮಯದ ಅಭಾವದಿಂದಾಗಿ ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ನಿರ್ಧಾರ. ಜೀರೋ ಟ್ರಾಫಿಕ್‌ ವ್ಯವಸ್ಥೆಯಲ್ಲಿ ಕಂಠೀರವ ಸ್ಟೇಡಿಯಂ ನಿಂದ ಎಚ್‌ಎಎಲ್‌ಗೆ ಆಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗಲಾಗುತ್ತಿದೆ.
3:40 PM, 25 Nov

ಆಂಬುಲೆನ್ಸ್‌ನಲ್ಲಿ ಕಂಠೀರವ ಸ್ಟೇಡಿಯಂನಿಂದ ಅಂಬರೀಶ್‌ ಅವರ ಮೃತದೇಹ ಎಚ್‌ಎಎಲ್‌ ವಿಮಾನ ನಿಲ್ದಾಣದ ಕಡೆಗೆ ರವಾನೆ. ಅಲ್ಲಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ಮಂಡ್ಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.
3:37 PM, 25 Nov

ಅಂಬರೀಶ್‌ ಮೃತದೇಹ ಎಚ್‌ಎಎಲ್‌ ಕಡೆ ಸಾಗಿಲು ವ್ಯವಸ್ಥೆ. ಕಂಠೀರವ ಸ್ಟೇಡಿಯಂ ಆವರಣದಿಂದ ಅಂಬರೀಶ್ ಮೃತದೇಹ ತೆಗೆದ ಪೊಲೀಸ್ ಸಿಬ್ಬಂದಿ.
3:24 PM, 25 Nov

ಡಿ.ಕೆ.ಶಿವಕುಮಾರ್ ಅವರು ಅಂಬರೀಶ್ ಅವರ ಅಂತಿಮ ದರ್ಶನ ಪಡೆದರು. ಸುದ್ದಿ ಮಾಧ್ಯದವರ ಎದುರಿಗೆ ಬಹಳ ಸಮಯ ಅಂಬರೀಶ್‌ ಅವರೊಂದಿಗಿನ ನಂಟಿನ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿದರು. ಇಬ್ಬರ ನಡುವಿನ ಸ್ನೇಹದ ಬಗ್ಗೆ ಭಾವುಕರಾಗಿ ಡಿಕೆಶಿ ಮಾತನಾಡಿದರು.
Advertisement
3:23 PM, 25 Nov

ಸಿದ್ದರಾಮಯ್ಯ ಅವರು ಅಂಬರೀಶ್‌ ಅವರ ಅಂತಿಮ ದರ್ಶನ ಪಡೆದರು. ಅಂಬರೀಶ್‌ ಅವರಿಗೆ ಇದ್ದಷ್ಟು ಸ್ನೇಹಿತರು ರಾಜಕೀಯದಲ್ಲಿ, ಚಿತ್ರರಂಗದಲ್ಲಿ ಯಾರಿಗೂ ಇರಲಿಲ್ಲ ಎಂದು ಸಿದ್ದರಾಮಯ್ಯ ನೆನಸಿಕೊಂಡರು.
3:04 PM, 25 Nov

ಕುಟುಂಬಸ್ಥರಿಗಾಗಿ ಮತ್ತೆರಡು ಹೆಲಿಕಾಪ್ಟರ್ ನಿಯೋಜನೆ
3:04 PM, 25 Nov

ಅಂಬಿ ಪಾರ್ಥಿವ ಶರೀರ ರವಾನೆಗೆ 1 ಹೆಲಿಕಾಪ್ಟರ್ ನಿಯೋಜನೆ
2:30 PM, 25 Nov

ಹಿರಿಯ ನಟ ಅನಂತ್‌ ನಾಗ್ ಪತ್ನಿ ಗಾಯತ್ರಿ ಅವರ ಜೊತೆ ಆಗಮಿಸಿ ಅಂಬರೀಶ್‌ ಅಂತಿಮ ದರ್ಶನಕ್ಕೆ ಆಗಮಿಸಿದರು. ನಿರ್ದೇಶಕ ಯೋಗರಾಜ್ ಭಟ್‌ ಅವರು ಸಹ ಅಂತಿಮ ದರ್ಶನ ಪಡೆದು ಕಣ್ಣೀರು ಸುರಿಸಿದರು. ಯೋಗರಾಜ್ ಭಟ್ಟರ ಡ್ರಾಮಾ ಚಿತ್ರದಲ್ಲಿ ಅಂಬರೀಶ್ ಪಾತ್ರ ನಿರ್ವಹಿಸಿದ್ದರು.
2:23 PM, 25 Nov

ಮಂಡ್ಯದ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹೆಲಿಕಾಫ್ಟರ್‌ ಲ್ಯಾಂಡ್‌ ಮಾಡುವ ತಾಲೀಮು ಮಾಡಲಾಯಿತು. ಸೇನಾ ಹೆಲಿಕಾಫ್ಟರ್‌ ಮೂಲಕ ಸಂಜೆ 5 ಗಂಟೆಗೆ ವೇಳೆಗೆ ಅಂಬರೀಶ್ ಮೃತದೇಹವನ್ನು ಅಂತಿಮ ದರ್ಶನಕ್ಕೆಂದು ಮಂಡ್ಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.
2:11 PM, 25 Nov

ಅಂಬರೀಶ್ ಸಾವಿಗೆ ಬಾಲಿವುಡ್ ದಂತಕತೆ ಅಮಿತಾಬ್ ಬಚ್ಚನ್‌ ಅವರು ಟ್ವಿಟ್ಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
2:06 PM, 25 Nov

ಅಂಬಿ ಮಾಮ ಇಲ್ಲ ಎನ್ನುವುದು ನಂಬಲಾಗುತ್ತಿಲ್ಲ. ಅಪ್ಪಾಜಿ ಹಾಗೂ ಅಂಬರೀಶ್‌ ಅವರ ಸಮಾಧಿ ಅಕ್ಕ-ಪಕ್ಕ ಮಾಡುತ್ತಿರುವುದು ದೈವ ನಿರ್ಣಯ ಎಂದು ರಾಘವೇಂದ್ರ ರಾಜಕುಮಾರ್ ದುಃಖ ವ್ಯಕ್ತಪಡಿಸಿದ್ದಾರೆ.
2:04 PM, 25 Nov

ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರು ಅಂಬರೀಶ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಸುಮಲತಾ ಅವರೊಂದಿಗೆ ಮಾತನಾಡಿ ಅವರಿಗೆ ಸಾಂತ್ವನ ಹೇಳಿದರು.
2:03 PM, 25 Nov

ಸಿಎಂ ಕುಮಾರಸ್ವಾಮಿ ಅವರು ಅಂಬರೀಶ್‌ ಅವರ ಅಂತಿಮ ಸಂಸ್ಕಾರ ನಡೆಯುವ ಕಂಠೀರವ ಸ್ಟುಡಿಯೋಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
1:44 PM, 25 Nov

ಅಂಬರೀಶ್ ಅವರ ಅಂತ್ಯಸಂಸ್ಕಾರ ನಡೆಯುವ ಕಂಠೀರವ ಸ್ಟುಡಿಯೋದಲ್ಲಿ ಜಾಗವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಪರಿಶೀಲನೆ ನಡೆಸಿದರು.
1:40 PM, 25 Nov

ನಟ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ಧೃವ ಸರ್ಜಾ ಅವರುಗಳು ಅಂಬರೀಶ್‌ ಅವರ ಅಂತಿಮ ದರ್ಶನ ಪಡೆದರು. ಅಂಬರೀಶ್ ಮೃತದೇಹದ ಮುಂದೆ ಅರ್ಜುನ್ ಸರ್ಜಾ ಕಣ್ಣೀರು ಸುರಿಸಿದರು. ಅರ್ಜುನ್ ಸರ್ಜಾ ವಿರುದ್ಧ ಇತ್ತೀಚೆಗಷ್ಟೆ #ಮಿಟೂ ಆರೋಪ ಕೇಳಿಬಂದಾಗ ಅಂಬರೀಶ್‌ ಸಂಧಾನಕ್ಕೆ ಯತ್ನ ಮಾಡಿದ್ದರು.
1:38 PM, 25 Nov

ಅಂಬರೀಶ್‌ ಅಭಿಮಾನಿಗಳು ಶಾಂತಿ, ಸಂಯಮ ಕಾಪಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಟ್ವೀಟ್‌
1:34 PM, 25 Nov

ಅಂಬಿ ಪಾರ್ಥಿವ ಶರೀರ ದರ್ಶನಕ್ಕೆ ಇಟ್ಟಿರುವ ಕಂಠೀರವ ಕ್ರೀಡಾಂಗಣಕ್ಕೆ ಏರ್‌ಫೋರ್ಸ್‌ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮೃತದೇಹವನ್ನು ಮಂಡ್ಯಕ್ಕೆ ಏರ್‌ಲಿಫ್ಟ್‌ ಮಾಡುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.
1:19 PM, 25 Nov

ನಟ ಸುದೀಪ್‌ ಅಂಬರೀಶ್ ಅಂತಿಮ ದರ್ಶನ ಮಾಡಿದರು. ಅಂಬರೀಶ್ ಅವರ ಕೊನೆಯ ಸಿನಿಮಾವನ್ನು ಸುದೀಪ್ ಅವರ ಜೊತೆಯೇ ಮಾಡಿದ್ದರು. ಅಂಬರೀಶ್ ಮೃತ ದೇಹದ ಮುಂದೆ ಕಣ್ಣೀರಿಟ್ಟ ಸುದೀಪ್‌. ನಟ ರಕ್ಷಿತ್‌ ಶೆಟ್ಟಿ ಸಹ ಅಂಬರೀಶ್ ಅಂತಿಮ ದರ್ಶನ ಮಾಡಿದರು.
12:56 PM, 25 Nov

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಂಬರೀಷ್ ಅವರ ಅಂತ್ಯಕ್ರಿಯೆ ನಡೆಯಲಿರುವ ಕಂಠೀರವ ಸ್ಟುಡಿಯೋ ಆವರಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
12:38 PM, 25 Nov

ಮಂಡ್ಯದ ರಾಜಕೀಯ ಮುತ್ಸದಿ ಎಸ್‌.ಎಂ.ಕೃಷ್ಣ ಅವರು ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಆಗಮಿಸಿದ್ದಾರೆ. ಮಂಡ್ಯ ರಾಜಕೀಯದಲ್ಲಿ ಎಸ್‌.ಎಂ.ಕೃಷ್ಣ ಮತ್ತು ಅಂಬರೀಶ್‌ ಧೃವತಾರೆಯಾಗಿ ಮೆರೆದಿದ್ದವರಾಗಿದ್ದಾರೆ.
12:32 PM, 25 Nov

ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಅಂಬರೀಶ್ ಅವರ ಪಾರ್ಥಿವ ಶರೀರದ ದರ್ಶನ ನಡೆದರು. ಕರ್ನಾಟಕ ಕಾಂಗ್ರೆಸ್‌ ಸಮಿತಿ ಸಹ ಅಂಬರೀಶ್‌ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
12:26 PM, 25 Nov

ಚಿತ್ರನಟ ಮಾಜಿ ಸಚಿವ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಅಭಿಮಾನಿಯೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹೊಟ್ಟೆ ಗೌಡನದೊಡ್ಡಿ ಗ್ರಾಮದಲ್ಲಿ ಜರುಗಿದೆ, ತಾಲ್ಲೂಕಿನ ಹೊಟ್ಟೆ ಗೌಡನದೊಡ್ಡಿ ಗ್ರಾಮದ ತಮ್ಮಯ್ಯ ಎಂಬ ಅಭಿಮಾನಿಯ ಮೃತರಾಗಿದ್ದಾರೆ.
READ MORE

English summary
Ace actor and politician Ambareesh passed away yesterday night. He died of cardiac arrest in Vikram hospital. Ambraseesh body is kept in Kanteerava stadium for public view.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X