Actor Sudeep Mother: ಸುದೀಪ್ ಮಾತು ಕೇಳಿ ವೇದಿಕೆ ಮೇಲೆ ಕಣ್ಣಿರು ಹಾಕಿದ್ದ ತಾಯಿ ಸರೋಜಾ ಸಂಜೀವ್
ಬೆಂಗಳೂರು, ಅಕ್ಟೋಬರ್ 20: ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ವಯೋಸಹಜ ಅನಾರೋಗ್ಯ ಕಾರಣದಿಂದ ಇಂದು ಬೆಳಗ್ಗೆ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಎಲ್ಲರಂತೆ ತಾಯಿಯ ಮೇಲೆ ಅತೀವ ಪ್ರೀತಿ, ಕಾಳಜಿಯಿಂದ ಇದ್ದ ನಟ ಸುದೀಪ್‌ಗೆ ತಾಯಿ ನಿಧನ ಸುದ್ದಿ ಬರಸಿಡಿಲು ಬಡಿದಂತಾಗಿದೆ. ಇಂದು ಸಂಜೆ ಅವರ ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ. ತಾಯಿ ಸರೋಜಾ ಅವರ ಮೂಲ ಮಂಗಳೂರು. ಅವರ ಕುರಿತಾಗಿ ಪುತ್ರ ಸುದೀಪ್ ಒಂದಷ್ಟು ಮಾತನಾಡಿದ್ದ ವಿಡಿಯೋ ಇಂದು ಮತ್ತೆ ಹರಿದಾಡುತ್ತಿದೆ.
ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕಿಚ್ಚ ಸುದೀಪ್ ಅವರ ತಾಯಿ ಕೊನೆಯುಸಿರೆಳೆದಿದ್ದಾರೆ. ತಾಯಿಯ ಆರೋಗ್ಯದಲ್ಲಿ ಏರು ಪೇರಾಗಿದ್ದರೂ ಸಹ ಶನಿವಾರ ಬಿಗ್ ಶೋ ನಡೆಸಿಕೊಟ್ಟಿದ್ದ ಅಭಿನಯ ಚಕ್ರವರ್ತಿ ಶೋ ಬಳಿಕ ಆತುರಾತುರವಾಗಿ ತೆರಳಿದ್ದರು ಎಂಬ ಮಾಹಿತಿ.

ಮರು ದಿನವೇ ಸರೋಜಾ ಅವರು ಎಲ್ಲರನ್ನು ಅಗಲಿದ್ದಾರೆ. ತಾಯಿ ಊರು, ಊರೊಂದಿಗಿನ ನಂಟು, ಭಾಷೆಯ ಬಗ್ಗೆ ಈ ಹಿಂದೆ ನಟ ಸುದೀಪ್ ಮಾತನಾಡಿದ್ದರು. ಮಂಗಳೂರಿಗೆ ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ ಅವರು, ಮಂಗಳೂರಿಗೂ ನನಗೂ ತುಂಬಾ ನಂಟಿದೆ. ಏಕೆಂದರೆ ನನ್ನ ತಾಯಿ ಇಲ್ಲಿಯವರು. ಅವರಿಗೆ ತುಳು ಬರುತ್ತದೆ. ನನಗೂ ಒಂದೆರಡು ಪದ ಹೇಳಿಕೊಟ್ಟಿದ್ದರು. ನನಗೆ ಅಷ್ಟಾಗಿ ಮಾತನಾಡಲು ಬರಲ್ಲ ಎಂದಿದ್ದರು.
ತಾಯಿಯ ಹುಟ್ಟೂರಲ್ಲೇ ಬಗ್ಗೆ ಕಿಚ್ಚನ ಮಾತು
ಮಂಗಳೂರಿನವು ತುಂಬಾ ಸ್ವಾಭಿಮಾನಿಗಳು. ನೀವು ಸುಲಭವಾಗಿ ಯಾರನ್ನು ನಂಬುವುದಿಲ್ಲ. ನನಗೂ ಇಲ್ಲಿ ಸ್ನೇಹಿತರಿದ್ದಾರೆ ಎಂದು ತಮ್ಮ ತಾಯಿಯ ಊರು ಇದೆ ಎಂದಿದ್ದರು. ತಮ್ಮ ತಂದೆ ಮಂಗಳೂರಿನ ಹುಡುಗಿಯನ್ನು ಮದುವೆ ಆಗಿದ್ದನ್ನು ವೇದಿಕೆ ಮಾತನಾಡಿದ್ದ ನಟ ಸುದೀಪ್ ಅವರು, ನಾವು ಅರ್ಧ ತುಳುನಾಡಿನವರು. ನಮ್ಮ ಅಪ್ಪ ಕರ್ನಾಟಕದಲ್ಲಿ ಎಲ್ಲಾ ಕಡೆ ಹುಡುಕಿ ಕೊನೆಗೆ ಮಂಗಳೂರಿನ ಹುಡುಗಿಯನ್ನು ಮದುವೆ ಆಗಿದ್ದ ರಂದು ಸ್ಮರಿಸಿಕೊಂಡಿದ್ದರು.
ವೇದಿಕೆ ಮೇಲೆ ತಾಯಿ ಸರೋಜಾ ಭಾವುಕ
ಇದಲ್ಲದೇ ವಿಕ್ರಾಂತ್ ರೋಣ ಸಿನಿಮಾ ವೇಳೆ ವೇದಿಕೆ ಮೇಲೆ ಅವರ ತಾಯಿ ಭಾವುಕ ರಾಗಿದ್ದರು. ಆಗಾಗ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ಸರೋಜಾ ಅವರು ಸುದೀಪ್ ಸಹೋದರಿ ಮಗನ ಸಿನಿಮಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಂದು ವೇದಿಕೆ ಮೇಲೆ ಮಗನನ್ನು, ಮೊಮ್ಮಗನನ್ನು ಕಂಡು ಅವರು ಭಾವುಕರಾಗಿದ್ದರು, ಕಣ್ಣೀರು ಹಾಕಿದ್ದರು.
ಬಿಗ್ ಬಾಸ್ 11ನೇ ಸೀಸನ್ ನಡೆಸಿಕೊಡುತ್ತಿರುವ ನಟ ಕಿಚ್ಚಾ ಸುದೀಪ್ ಅವರು, ಇತ್ತೀಚೆಗೆ ಬಿಗ್ ಬಾಸ್ ವೇದಿಕೆ ಮೇಲೂ ತಾಯಿಯನ್ನು ನೆನೆದಿದ್ದರು. ನವರಾತ್ರಿ ಪಯುಕ್ತ ಅಮ್ಮನನ್ನು ನೋಡಿ ಬರಿಗಾಲಲ್ಲಿ ಬಂದಿದ್ದೇನೆ. ಹಬ್ಬದ ವಿಶೇಷ ಉಡುಗೆಯಲ್ಲಿ ಬಂದಿರುವುದಾಗಿ ತಿಳಿಸಿದ್ದರು.
ತಾಯಿಯೊಂದಿಗೆ ಸಮಯ ಕಳೆಯುತ್ತಿದ್ದ ಕಿಚ್ಚ
ಸಿನಿಮಾದಲ್ಲಿ ಎಷ್ಟೇ ಬ್ಯೂಸಿ ಇದ್ದರೂ ಸಹಿತ ತಾಯಿಯೊಂದಿಗೆ ಸಮಯ ಕಳೆಯುತ್ತಿದ್ದ ಕಿಚ್ಚ ಸುದೀಪ್ ಅವರನ್ನು ಆಗಾಗ ನೆನೆಸಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ಬಿಗ್ ಬಾಸ್ ನಾಲ್ಕನೇ ವಾರದೊಂದಿಗೆ ಮುನ್ನುಗ್ಗುತ್ತಿದೆ. ವಾರದ ಕತೆ ಕಿಚ್ಚನ ಜೊತೆಗೆ ಎಪಿಸೋಡ್ ನೋಡಲು ರಾಜ್ಯವೇ ಕಾತರರಿಂದ ಕಾಯುತ್ತಿರುತ್ತದೆ. ಅಷ್ಟರ ಮಟ್ಟಿಗೆ ಸೊಗಸಾಗಿ ಕಾರ್ಯಕ್ರಮ ನಡೆಸಿಕೊಡುವ ಕಿಚ್ಚಾ ಸುದೀಪ್ ಇತ್ತೀಚೆಗೆ ಇದೇ ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಎಂದು ಘೋಷಿಸಿದ್ದು, ಅವರ ಅಭಿಮಾನಿಗಳಲ್ಲಿ ಬೇಸರ ತಂದಿತ್ತು.












Click it and Unblock the Notifications