ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿರುವ ಕಮಲ್ ಹಾಸನ್

Recommended Video

      ಎಚ್ ಡಿ ಕುಮಾರಸ್ವಾಮಿಯವರನ್ನ ಭೇಟಿ ಮಾಡಲಿದ್ದಾರೆ ಕಮಲ್ ಹಾಸನ್ | Oneindia Kannada

      ಬೆಂಗಳೂರು, ಜೂನ್ 4: ಖ್ಯಾತ ನಟ, ರಾಜಕಾರಣಿ ಕಮಲ್ ಹಾಸನ್ ಅವರು ಸೋಮವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿದ್ದಾರೆ.

      ಕಮಲ್ ಹಾಸನ್ ಅವರು ರಾಜಕೀಯ ರಂಗಕ್ಕೆ ಕಾಲಿಟ್ಟು ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಕೊಂಡಿರುವುದರಿಂದ ಈ ಭೇಟಿ ಮಹತ್ವ ಪಡೆದಿದೆ.

      ಸೋಮವಾರ ಬೆಳಿಗ್ಗೆ 11.30ರ ಸುಮಾರಿಗೆ ಕಮಲ್ ಹಾಸನ್ ಅವರು ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಲಿದ್ದಾರೆ.

      actor kamal hassan

      ಪಕ್ಷಗಳ ನಡುವೆ ರಾಜಕೀಯ ಹೊಂದಾಣಿಕೆಯ ಜತೆಯಲ್ಲಿ, ಕಾವೇರಿ ವಿವಾದ ಕುರಿತು ಸಹ ಕಮಲ್ ಹಾಸನ್ ಅವರು ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

      ತಮಿಳುನಾಡಿನಲ್ಲಿ ಮಕ್ಕಳ್ ನೀಧಿ ಮಯಾಮ್ ಪಕ್ಷವನ್ನು ಸ್ಥಾಪಿಸಿರುವ ಕಮಲ್ ಹಾಸನ್ ಅವರು ಮತ್ತೊಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಅದನ್ನು ಬೆಳೆಸುವ ಪ್ರಯತ್ನದಲ್ಲಿದ್ದಾರೆ.

      ಈ ಸಂಬಂಧ ಅವರು ಕುಮಾರಸ್ವಾಮಿ ಅವರೊಂದಿಗಿನ ಭೇಟಿ ವೇಳೆ ಸಲಹೆಗಳನ್ನು ಪಡೆದುಕೊಳ್ಳಲಿದ್ದಾರೆ. ಜತೆಗೆ ರಾಜಕೀಯ ಬೆಳವಣಿಗೆಗೆ ಅಗತ್ಯ ಸಹಕಾರ ನೀಡುವಂತೆ ಕೋರಲಿದ್ದಾರೆ.

      ಮೇ ತಿಂಗಳಿನಲ್ಲಿ ನಡೆದ ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕಮಲ್ ಹಾಸನ್ ಅವರು ಆಗಮಿಸಿ, ಅವರಿಗೆ ಶುಭ ಹಾರೈಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+