ದೇವೇಗೌಡರ ಬಗ್ಗೆ ಮಿಮಿಕ್ರಿ : ಸ್ಪಷ್ಟನೆ ಕೊಟ್ಟ ನಟ ಜಗ್ಗೇಶ್

Posted By: Gururaj
Subscribe to Oneindia Kannada
   ದೇವೇಗೌಡರವರ ಬಗ್ಗೆ ಮಿಮಿಕ್ರಿ ಮಾಡಿದ ಜಗ್ಗೇಶ್ ಹೇಳಿದ್ದೇನು? | Oneindia Kannada

   ಬೆಂಗಳೂರು, ನವೆಂಬರ್ 07 : 'ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಕುಮಾರಣ್ಣ ನನ್ನ ನಿರ್ಮಾಪಕರು. ದೇವೇಗೌಡರ ಬಗ್ಗೆ ನಾನು ಯಾವುದೇ ಕೆಟ್ಟ ಮಾತು ಆಡಿಲ್ಲ' ಎಂದು ನಟ, ಬಿಜೆಪಿ ನಾಯಕ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.

   ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ಅಂಗವಾಗಿ ಶುಕ್ರವಾರ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಬಿಜೆಪಿ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜಗ್ಗೇಶ್ ಅವರು ದೇವೇಗೌಡರ ಮಾತಿನ ಶೈಲಿಯನ್ನು ಮಿಮಿಕ್ರಿ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

   ದೇವೇಗೌಡರು ಜಗ್ಗೇಶ್ ಮಿಮಿಕ್ರಿ ಬಗ್ಗೆ ಹೇಳಿದ್ದೇನು?

   ಶುಕ್ರವಾರ ಸಂಜೆ ನೆಲಮಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಎಚ್.ಡಿ.ದೇವೇಗೌಡರು, 'ಜಗ್ಗೇಶ್ ದೊಡ್ಡವರು ಜೊತೆಗೆ ಚಿತ್ರ ನಟರು. ಅವರ ಬಗ್ಗೆ ನಾನು ಮಾತನಾಡಲು ಸಾಧ್ಯನಾ?' ಎಂದು ಪ್ರತಿಕ್ರಿಯೆ ಕೊಟ್ಟಿದ್ದರು.

   ಚಾಮುಂಡಿ ಸನ್ನಿಧಿಯಲ್ಲಿ 'ಕುಮಾರಪರ್ವ'ಕ್ಕೆ ಮುನ್ನುಡಿ ಬರೆದ ಜೆಡಿಎಸ್

   ಸೋಮವಾರ ವಿಧಾನಪರಿಷತ್ ಸದಸ್ಯ, ಜೆಡಿಎಸ್ ನಾಯಕ ಟಿ.ಎ.ಶರವಣ ಅವರಿಗೆ ವಾಟ್ಸಪ್ ಸಂದೇಶ ಕಳಿಸಿರುವ ಜಗ್ಗೇಶ್ ಅವರು, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. '1990ರಿಂದ ನಾನು ದೇವೇಗೌಡರ ಅಭಿಮಾನಿ, ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ' ಎಂದು ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.

   ಪಕ್ಷದ ಸಮಾವೇಶದಲ್ಲಿ ಜಗ್ಗೇಶ್ ಭಾಷಣ ಮಾಡಿದ್ದರು

   ಪಕ್ಷದ ಸಮಾವೇಶದಲ್ಲಿ ಜಗ್ಗೇಶ್ ಭಾಷಣ ಮಾಡಿದ್ದರು

   ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ಅಂಗವಾಗಿ ಶುಕ್ರವಾರ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಬಿಜೆಪಿ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜಗ್ಗೇಶ್ ಅವರು ದೇವೇಗೌಡರ ಮಾತಿನ ಶೈಲಿಯನ್ನು ಮಿಮಿಕ್ರಿ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಒಕ್ಕಲಿಗೆ ಸಮುದಾಯಕ್ಕೆ ಸೇರಿದ ಮಸಾಲೆ ಜಯರಾಮ್ ಗೆ ಮತ ನೀಡಿ ಎಂದು ಜಗ್ಗೇಶ್ ಮನವಿ ಮಾಡಿದ್ದರು.

   ಮತ ಹಾಕಬೇಡಿ ಎಂದು ಹೇಳಿದ್ದೇನೆ

   ಮತ ಹಾಕಬೇಡಿ ಎಂದು ಹೇಳಿದ್ದೇನೆ

   ‘ದೇವೇಗೌಡರು ಮತ್ತು ಕುಮಾರಣ್ಣ ಬಂದು ಕೊನೆ ಸಮಯದಲ್ಲಿ ಜಾತಿ ಆಧಾರದ ಮೇಲೆ ಮತಹಾಕಿ ಎಂದು ಕೇಳಿದರೂ. ಮಸಾಲೆ ಜಯರಾಮ್ ಅವರಿಗೆ ಮತ ಹಾಕಿ. ಪಕ್ಷದ ಸದಸ್ಯನಾಗಿ ನಾನು ಈ ಮಾತನ್ನು ಹೇಳಿದ್ದೇನೆ' ಎಂದು ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.

   ಜಗ್ಗೇಶ್ ಹೇಳಿದ್ದೇನು?

   ಜಗ್ಗೇಶ್ ಹೇಳಿದ್ದೇನು?

   ‘ತಪ್ಪು ತಿಳಿಯಬೇಡಿ, ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ. ದೇವೇಗೌಡರ ಬಗ್ಗೆ ಒಂದು ಮಾತನ್ನು ಕೆಟ್ಟದಾಗಿ ಆಡಿಲ್ಲ. 1990ರಿಂದ ನಾನು ಅವರ ದೊಡ್ಡ ಅಭಿಮಾನಿ. ಕುಮಾರಣ್ಣ ನನ್ನ ನಿರ್ಮಾಪಕರು' ಎಂದು ನಟ ಜಗ್ಗೇಶ್ ಟಿ.ಎ.ಶರವಣ ಅವರಿಗೆ ಸಂದೇಶ ಕಳುಹಿಸಿದ್ದಾರೆ.

   ‘ಜಗ್ಗೇಶ್ ದೊಡ್ಡವರು' ಎಂದಿದ್ರು ದೇವೇಗೌಡ

   ‘ಜಗ್ಗೇಶ್ ದೊಡ್ಡವರು' ಎಂದಿದ್ರು ದೇವೇಗೌಡ

   ಜಗ್ಗೇಶ್ ಮಿಮಿಕ್ರಿ ಮಾಡಿದ ಬಗ್ಗೆ ನೆಲಮಂಗಲದಲ್ಲಿ ದೇವೇಗೌಡರನ್ನು ಪ್ರಶ್ನೆ ಮಾಡಲಾಗಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ್ದ ಎಚ್.ಡಿ.ದೇವೇಗೌಡರು, ‘ಜಗ್ಗೇಶ್ ದೊಡ್ಡವರು ಜೊತೆಗೆ ಚಿತ್ರ ನಟರು. ಅವರ ಬಗ್ಗೆ ನಾನು ಮಾತನಾಡಲು ಸಾಧ್ಯನಾ?' ಎಂದು ಪ್ರತಿಕ್ರಿಯೆ ಕೊಟ್ಟಿದ್ದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Actor and BJP leader Jaggesh clarification on mimicry about H.D. Deve Gowda.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ