‘ಟಕ್ಕರ್’ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಲಿದ್ದಾರೆ ಭಜರಂಗಿ ಲೋಕಿ

ರನ್ ಆಂಟನಿ ಖ್ಯಾತಿಯ ರಘು ಶಾಸ್ತ್ರಿ ನಿರ್ದೇಶಿಸಿರುವ ಟಕ್ಕರ್ ಬಿಡುಗಡೆಗೆ ಸರ್ವ ರೀತಿಯಲ್ಲೂ ರೆಡಿಯಾಗಿದೆ. ಮೇ 6ಕ್ಕೆ ಚಿತ್ರಮಂದಿರದ ಅಂಗಳಕ್ಕೆ ಕಾಲಿಡುತ್ತಿರುವ ಟಕ್ಕರ್ ಚಿತ್ರ ಸೈಬರ್ ಕ್ರೈಂ ಕಥಾಹಂದರ ಒಳಗೊಂಡ ಮಾಸ್ ಆಕ್ಷನ್ ಸಿನಿಮಾ. ಈ ಚಿತ್ರದ ಮೂಲಕ ಚಂದನವನಕ್ಕೆ ಮನೋಜ್ ಕುಮಾರ್ ನಾಯಕ ನಟನಾಗಿ ಎಂಟ್ರಿ ಕೊಡುತ್ತಿದ್ದಾರೆ.

Actor Bhajarangi Loki enthralling character in Takkar Kannada film

ಮಾಸ್ ಆಕ್ಷನ್ ಸಿನಿಮಾ ಅಂದಮೇಲೆ ಮಾಸ್ ಫೈಟ್ ರಗಡ್ ವಿಲನ್ ಇರಲೇ ಬೇಕಲ್ವಾ..? ಹಾಗೆ ಈ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಲು ಭಜರಂಗಿ ಲೋಕಿ ಇದ್ದಾರೆ. ನೆಗೆಟಿವ್ ರೋಲ್ ಗಳನ್ನು ನೀರು ಕುಡಿದಷ್ಟೇ ಲೀಲಾಜಾಲವಾಗಿ ಅಭಿನಯಿಸಿ ಕಿಚ್ಚು ಹಚ್ಚುವ ಕನ್ನಡದ ಪ್ರತಿಭಾವಂತ ನಟ ಭಜರಂಗಿ ಖ್ಯಾತಿಯ ಸೌರವ್ ಲೋಕಿ. ಸ್ಟಾರ್ ಸಿನಿಮಾಗಳಲ್ಲಿ ರಗಡ್ ವಿಲನ್ ಆಗಿ ಮಿಂಚಿರುವ ಇವರು ಟಕ್ಕರ್ ನಲ್ಲಿಯೂ ವಿಲನ್ ಆಗಿ ವಿಭಿನ್ನ ರೋಲ್ ನಲ್ಲಿ ಮಿಂಚಿದ್ದಾರೆ. ಸಿನಿಮಾದ ಕಥೆ ಹಾಗೂ ತಮ್ಮ ರೋಲ್ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಲೋಕಿ ಪ್ರೇಕ್ಷಕರ ಪ್ರಶಂಸೆಯ ಮಾತುಗಳನ್ನು ಕೇಳಲು ಎದುರು ನೋಡುತ್ತಿದ್ದಾರೆ.

Actor Bhajarangi Loki enthralling character in Takkar Kannada film

ಎಸ್ ಎಲ್ ಎನ್ ಕ್ರಿಯೇಷನ್ಸ್ ಬ್ಯಾನರ್ ನಡಿ ನಾಗೇಶ್ ಕೋಗಿಲು ನಿರ್ಮಿಸಿರುವ ಈ ಚಿತ್ರ ಮೇ 6ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ವಿಲಿಯಂ ಡೇವಿಡ್ ಕ್ಯಾಮೆರಾ ಕಣ್ಣಲ್ಲಿ ಸಿನಿಮಾ ಸೆರೆಯಾಗಿದ್ದು ಮೈಸೂರು, ಬೆಂಗಳೂರು, ಮಲೇಶಿಯಾ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕದ್ರಿ ಮಣಿಕಾಂತ್ ಸಂಗೀತ, ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದ್ದು, ಸಾಧುಕೋಕಿಲ, ಜೈಜಗದೀಶ್, ಸುಮಿತ್ರ, ಶ್ರೀಧರ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+