ಸಿದ್ದೇಶ್ವರ ಸ್ವಾಮೀಜಿ ಜೀವನಗಾಥೆಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಕ್ರಮ: ಬಸವರಾಜ ಬೊಮ್ಮಾಯಿ

ಬೆಂಗಳೂರು, ಜನವರಿ 4: ಸಿದ್ದೇಶ್ವರ ಸ್ವಾಮೀಜಿಯವರ ಜೀವನಗಾಥೆಯನ್ನು ಶಾಲಾ ಪಠ್ಯದಲ್ಲಿ ಸೇರಿಸುವ ಬಗ್ಗೆ ಅವರ ಉಯಿಲಿನಲ್ಲಿರುವ ಆಶಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಕುರಿತು ಬುಧವಾರ ಟ್ವೀಟ್ ಮೂಲಕ ತಿಳಿಸಿರುವ ಅವರು, ಸ್ವಾಮಿ ವಿವೇಕಾನಂದರ ನಂತರ ಅತ್ಯಂತ ಪ್ರಭಾವ ಬೀರಿದವರು ಸಿದ್ದೇಶ್ವರ ಶ್ರೀಗಳು, ಅವರ ಜೀವನಗಾಥೆಯನ್ನು ಪಠ್ಯದಲ್ಲಿ ಸೇರಿಸುವ ಕುರಿತು ಅವರ ಉಯಲಿನಲ್ಲಿರುವ ಆಶಯದಂತೆ ನಡೆದುಕೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶ್ರೀಗಳ ಅಂತಿಮ ದರ್ಶನ ಪಡೆದ ಸಂದರ್ಭದಲ್ಲಿ ಮಂಗಳವಾರ ಮಾತನಾಡಿದ ಅವರು, ಶ್ರೀಗಳ ಜೀವನ ಗಾಥೆಯನ್ನು ಪಠ್ಯದಲ್ಲಿ ಅಳವಡಿಸುವ ಸಂಬಂಧಭಕ್ತರಿಂದ ಕೇಳಿ ಬಂದ ಒತ್ತಾಯದ ಕುರಿತು ಸೂಕ್ಷ್ಮ ವಾಗಿ ಪ್ರತಿಕ್ರಿಯಿಸಿದರು, ಸಿದ್ದೇಶ್ವರ ಶ್ರೀಗಳು ಬರದ ಉಬಲಿ(ಎಲ್ )ನಂತೆ ನಡೆದುಕೊಳ್ಳುತ್ತೇವೆ. ಭಕ್ತರ ಭಾವನೆಗಳನ್ನು ನಾವು ಗೌರವಿ ಸುತ್ತೇವೆ ಎಂದರು. ಈ ಮೂಲಕ ಅವರ ಜೀವನವನ್ನು ಪಠ್ಯ ದಲ್ಲಿ ಅಳವಡಿಸುವುದು ಸಿದ್ದೇಶ್ವರ ಶ್ರೀಗಳ ಆಶಯಕ್ಕೆ ಪೂರಕವಾಗಿದರೆ ಮಾತ್ರ ಮುಂದಡಿಯಿಡುವ ಸುಳಿವನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ್ದರು.

Action To Include The Siddeshwara Swamiji Life Story In The School Curriculum Says CM Basavaraj Bommai

ಇನ್ನೂ ಸಿದ್ದೇಶ್ವರ ಶ್ರೀಗಳ ಮರಣವೂ ಒಂದು ಪ್ರಕ್ರಿಯೆ. ಮರಣದ ನಂತರವೂ ಬದುಕುವುದು ಸಾಧನೆ. ಶ್ರೀಗಳು ಹಸ್ತಾಂಗತರಾಗಿದ್ದರು, ಅವರು ಜನರ ಮಧ್ಯೆ ಇದ್ದಾರೆ. ಸ್ವಾಮಿ ವಿವೇಕಾನಂದರ ನಂತರ ಅತ್ಯಂತ ಪ್ರಭಾವ ಬೀರಿದವರು ಸಿದ್ದೇಶ್ವರ ಶ್ರೀಗಳು ಶ್ರೀಗಳು ನಮಗೆ ಒಂದು ದೊಡ್ಡ ಪ್ರೇರಣಾ ಶಕ್ತಿ. ಅವರ ವಿಚಾರಗಳನ್ನು ಪಾಲಿಸಿ, ಉಳಿಸಿಕೊಂಡು ಬಂದರೆ ಅವರಿಗೆ ಅದುವೇ ದೊಡ್ಡ ಗೌರವ ಅವರು ಸಾವನ್ನು ಅರಿತು, ಎದುರಿಸಿ, ಸ್ವಾಗತಿಸಿದವರು ಎಂದರು.

ಪರಮಾತ್ಮ ಒಬ್ಬನೆ. ಸೃಷ್ಟಿ ಮತ್ತು ಸೃಷ್ಟಿಕರ್ತನ ಸಮಾಗಮವೇ ನಮ್ಮ ಬದುಕು, ಜೀವನ ಆಧ್ಯಾತ್ಮಿಕ ವಿಚಾರಗಳಲ್ಲಿ ಮೂರು ರೀತಿಯ ಜನರನ್ನು ಗುರುತಿಸಬಹುದು. ಒಬ್ಬರು ಒಂದಿನ ವಿಚಾರಗಳನ್ನು ಪ್ರತಿಪಾದಿಸುವವರು,ಇನ್ನೊಬ್ಬರು ಕ್ರಾಂತಿಗಳಿ೦ದ ಬದಲಾವಣೆ ಬಯಸುವವರು, ಮೂರನೆಯವರು ಸಮಾಜ ಸುಧಾರಕರು, ಸಿದ್ದೇಶ್ವರ ಶ್ರೀಗಳು ಮೂರನೇ ರೀತಿಯ ವ್ಯಕ್ತಿಗಳ ಸಾಲಿಗೆ ಸೇರುವವರು. ಮೊದಲನೆಯವರು ತಾತ್ಪೂರಿಕ ಯಶಸ್ಸು ಕಂಡಿರುತ್ತಾರೆ. ಆದರೆ, ಮೂರನೇಯವರು ಬುದ್ಧ, ಬಸವರಂತೆ ಸಮಾಜವನ್ನು ತಿದ್ದಿದವರು. ಇಂಥವರು ನಮ್ಮ ಪುಣ್ಯ ನಾಡಿನಲ್ಲಿ ಜನ್ಮ ತಳೆದಿದ್ದಾರೆ. ಅವರು ತಮ್ಮ ವೈಚಾರಿಕತೆಯನ್ನು ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಇಂಥವರ ಕಾಲದಲ್ಲಿ ನಾವಿರುವುದೇ ಪುಣ್ಯ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+