ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸಿಬಿ ದಾಳಿ : ಸರ್ಕಾರಿ ನೌಕರರ ಬಳಿ ಸಿಕ್ಕದ್ದು ಕೋಟ್ಯಾಂತರ ಹಣ-ಆಸ್ತಿ

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್ 12: ಎಸಿಬಿಯು ಇದೇ ಮಾರ್ಚ್‌ 9ರಂದು ರಾಜ್ಯದ 9 ಭ್ರಷ್ಟಾಚಾರ ಆರೋಪಿತ ಸರ್ಕಾರಿಗಳ ಅಧಿಕಾರಿಗಳ ಮನೆ ಮೇಲಿನ ದಾಳಿಯಿಂದ ಕೋಟ್ಯಂತರ ಮೌಲ್ಯದ ಆಸ್ತಿ, ಹಣ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.

ಮಾರ್ಚ್‌ 9ರಂದು ಎಸಿಬಿಯು ರಾಜ್ಯದ 9 ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಒಟ್ಟು 36 ಕಡೆ ದಾಳಿ ನಡೆಸಿ ಹಣ, ಚಿನ್ನ, ಹಲವು ದಾಖಲಾತಿಗಳನ್ನು ವಶಪಡಿಸಿಕೊಂಡಿತ್ತು.

 ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್, ರಾಜ್ಯದ 36 ಕಡೆ ದಾಳಿ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್, ರಾಜ್ಯದ 36 ಕಡೆ ದಾಳಿ

ಈ 9 ಸರ್ಕಾರಿ ನೌಕರರು ತಮ್ಮ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 36 ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.

ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

 ಉಡುಪಿಯಲ್ಲಿ ಅಬಕಾರಿ ಡಿವೈಎಸ್ಪಿ ಮನೆ ಸೇರಿ 5 ಕಡೆ ಎಸಿಬಿ ದಾಳಿ ಉಡುಪಿಯಲ್ಲಿ ಅಬಕಾರಿ ಡಿವೈಎಸ್ಪಿ ಮನೆ ಸೇರಿ 5 ಕಡೆ ಎಸಿಬಿ ದಾಳಿ

ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಶೋಧನೆ ನಡಸಲಾದ ಸ್ಥಳಗಳಲ್ಲಿ ತನಿಖೆಯಲ್ಲಿ ಪತ್ತೆಯಾದ ಆರೋಪಿತ ಸರ್ಕಾರಿ ನೌಕರರ ಚರ ಮತ್ತು ಸ್ಥಿರ ಆಸ್ತಿಗಳ ವಿವರ ಈ ಕೆಳಕಂಡಂತಿರುತ್ತವೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಎಂಜಿನಿಯರ್ ಹೆಸರಲ್ಲಿ 3 ಮನೆ!

ಎಂಜಿನಿಯರ್ ಹೆಸರಲ್ಲಿ 3 ಮನೆ!

ಆರ್. ಗಂಗಾಧರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಘನ ತಾಜ್ಯ ನಿರ್ವಹಣೆ, ಚಿಕ್ಕಪೇಟೆ ವಿಭಾಗ, ಬಿಬಿಎಂಪಿ, ಬಸವನಗುಡಿ, ಬೆಂಗಳೂರು. ಇವರಿಗೆ ಸೇರಿದ ನಂದಿನಿಲೇಔಟ್‌ನಲ್ಲಿ 1 ಮನೆ, ಸುಬ್ರಮಣ್ಯ ನಗರದಲ್ಲಿ 1 ಮನೆ, ನಾಗರಭಾವಿ ಯಲ್ಲಿ 1 ಮನೆ, ಮಲತ್ತಹಳ್ಳಿಯಲ್ಲಿ 1 ನಿವೇಶನ, ಚಿಕ್ಕಲ್ಲಸಂದ್ರ ಗ್ರಾಮದಲ್ಲಿ 1 ನಿವೇಶನ, ಸಾಸುವೆಘಟ್ಟ ಗ್ರಾಮದಲ್ಲಿ 2 ನಿವೇಶನ, ಚಿನ್ನ 806.4 ಗ್ರಾಂ, ಬೆಳ್ಳಿ 8 ಕೆಜಿ 202 ಗ್ರಾಂ ಹಾಗೂ 1 ಓಮ್ನಿ ಕಾರ, 1 ಮಾರುತಿ ಸ್ವೀಫ್ಟ್ ಕಾರ್, 1 ಇನ್ನೋವಾ ಕಾರ್, 3 ದ್ವಿಚಕ್ರ ವಾಹನ ಮತ್ತು ಹಲವು ಬ್ಯಾಂಕ್‌ಗಳಲ್ಲಿ ಸುಮಾರು 12 ಲಕ್ಷಗಳ ಠೇವಣಿ ಮತ್ತು ಎಲ್‌ಐಸಿ ವಿಮಾ ಪಾಲಿಸಿಗಳು ಹಾಗೂ ನಗದು ? 54 ಸಾವಿರ ಪತ್ತೆಯಾಗಿರುತ್ತವೆ.

5 ಮನೆಗಳ ಒಡತಿ ಈ ಅಧಿಕಾರಿ

5 ಮನೆಗಳ ಒಡತಿ ಈ ಅಧಿಕಾರಿ

ರಾಜಶ್ರೀ ಜೈನಾಪುರ, ವಿಶೇಷ ಭೂಸ್ವಾಧೀನ ಅಧಿಕಾರಿ, ಹಿಪ್ಪರಗಿ ಅಣೆಕಟ್ಟು ಯೋಜನೆ, ಅಥಣಿ, ಬೆಳಗಾವಿ.
ವಿಜಾಪುರದಲ್ಲಿ 1 ಮನೆ, ಬೆಳಗಾವಿಯಲ್ಲಿ 1 ಮನೆ, ಧಾರವಾಡದಲ್ಲಿ 2 ಮನೆ, ಹುಬ್ಬಳ್ಳಿಯಲ್ಲಿ 1 ನಿವೇಶನ, ಬಸವನಬಾಗೇವಾಡಿಯಲ್ಲಿ ವಿವಿಧ ಸ್ಥಳಗಳಲ್ಲಿ ಒಟ್ಟು 3 ಎಕರೆ 17 ಗುಂಟೆ ಜಮೀನು ಇರುತ್ತದೆ, 1 ಇನ್ನೋವಾ ಕಾರ್, 1 ಐ-2೦ ಕಾರ್ ಹಾಗೂ 1 ದ್ವಿಚಕ್ರ ವಾಹನ ಮತ್ತು ಚಿನ್ನ 669 ಗ್ರಾಂ, ಬೆಳ್ಳಿ 2 ಕೆಜಿ 876 ಗ್ರಾಂ ಹಾಗೂ ನಗದು 9೦ ಸಾವಿರ ಪತ್ತೆಯಾಗಿರುತ್ತವೆ.

ಅಲಂಕೃತ ಮನೆ

ಅಲಂಕೃತ ಮನೆ

ವಿನೋದ್ ಕುಮಾರ್, ಡೆಪ್ಯೂಟಿ ಸೂಪರಿಂಟೆಂಡೆಂಟ್, ಅಬಕಾರಿ, ಉಡುಪಿ. ಮಂಗಳೂರಿನಲ್ಲಿ 1 ವಾಸದ ಮನೆ ಹಾಗೂ 1 ನಿವೇಶನ, 1 ಹೋಂಡಾ ಅಮೇಜ್ ಕಾರ್, 1 ದ್ವಿಚಕ್ರ ವಾಹನ ಮತ್ತು ಚಿನ್ನ 1 ಕೆಜಿ. 175 ಗ್ರಾಂ, ಬೆಳ್ಳಿ 1 ಕೆಜಿ 533 ಗ್ರಾಂ ಹಾಗೂ ಸುಮಾರು ? 4 ಲಕ್ಷ ಗೃಹಪೋಯೋಗಿ ವಸ್ತುಗಳು ಕಂಡು ಬಂದಿರುತ್ತದೆ.

ರೋಲೆಕ್ಸ್ ವಾಚ್ ಧರಿಸುತ್ತಾನೆ ಸರ್ಕಾರಿ ಎಂಜಿನಿಯರ್

ರೋಲೆಕ್ಸ್ ವಾಚ್ ಧರಿಸುತ್ತಾನೆ ಸರ್ಕಾರಿ ಎಂಜಿನಿಯರ್

ವಿಜಯಕುಮಾರ್, ಸಹಾಯಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಉಪ ವಿಭಾಗ, ಗಂಗಾವತಿ ಮತ್ತು (ಪ್ರಭಾರ) ಸಹಾಯಕ ಕಾರ್ಯಪಾಲಕ ಅಭಿಯಂತರು, ಪಂಚಾಯತ್ ರಾಜ್ ಇಂಜಿನಿಯರಿಂಗ್, ಗಂಗಾವತಿ. ಹೈದರಾಬಾದ್‌ನಲ್ಲಿ 5 ಫ್ಲ್ಯಾಟ್, ಬೆಂಗಳೂರಿನಲ್ಲಿ 2 ಫ್ಲ್ಯಾಟ್, ಗಂಗಾವತಿಯಲ್ಲಿ ವಿವಿಧ ಸರ್ವೇ ನಂಬರ್‌ನಲ್ಲಿ ಒಟ್ಟು 4 ಎಕರೆ 24 ಗುಂಟೆ ಜಮೀನು, 1 ಫಾರ್ಚುನರ್ ಕಾರ್, 1 ಇಟಿಯೋಸ್ ಕಾರ್ ಹಾಗೂ 1 ಹೀರೋಹೋಂಡಾ ದ್ವಿಚಕ್ರ ವಾಹನ ಮತ್ತು ಚಿನ್ನ 1 ಕೆ.ಜಿ. 670 ಗ್ರಾಂ, 1 ರೋಲೆಕ್ಸ್ ವಾಚ್ ಹಾಗೂ ಗೃಹಪೋಯೋಗಿ ವಸ್ತುಗಳು ಸುಮಾರು 12,30,000 ಪತ್ತೆಯಾಗಿರುತ್ತವೆ.

1 ಕಾರು, 4 ಬೈಕ್, 2 ಟ್ರಾಕ್ಟರ್

1 ಕಾರು, 4 ಬೈಕ್, 2 ಟ್ರಾಕ್ಟರ್

ಎನ್.ಅಪ್ಪಿ ರೆಡ್ಡಿ, ಸಹಾಯಕ ಅಭಿಯಂತರರು, ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ, ಶ್ರೀನಿವಾಸಪುರ, ಕೋಲಾರ. ಶ್ರೀನಿವಾಸಪುರದಲ್ಲಿ 2 ವಾಸದ ಮನೆ, ಒಟ್ಟು 3 ನಿವೇಶನ, ವಿವಿಧ ಸರ್ವೇ ನಂಬರ್ ಗಳಲ್ಲಿ ಒಟ್ಟು 42 ಎಕರೆ 13 ಗುಂಟೆ ಜಮೀನು, 1 ಸ್ವಿಫ್ಟ್ ಕಾರ್, 2 ಟ್ರಾಕ್ಟರ್, 4 ದ್ಚಿಚಕ್ರ ವಾಹನಗಳು, ಚಿನ್ನ 833 ಗ್ರಾಂ, ಬೆಳ್ಳಿ 3 ಕೆಜಿ 641 ಗ್ರಾಂ, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ? 1,88,542 ಮತ್ತು ನಗದು 1,95,450 ಪತ್ತೆಯಾಗಿರುತ್ತವೆ.

ಬ್ಯಾಂಕ್‌ನಲ್ಲಿ 50 ಲಕ್ಷ

ಬ್ಯಾಂಕ್‌ನಲ್ಲಿ 50 ಲಕ್ಷ

ಶಿವಕುಮಾರ್ ಎ.ಪಿ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಕಡೂರು. ತುಮಕೂರು ಟೌನ್‌ನಲ್ಲಿ 1 ಮನೆ, ತಿಪಟೂರ್ ಟೌನ್‌ನಲ್ಲಿ 1 ಮನೆ ಹಾಗೂ 1 ನಿರ್ಮಾಣ ಹಂತದಲ್ಲಿರುವ ಕಟ್ಟಡ ಹಾಗೂ ವಿವಿಧ ಸ್ಥಳಗಳಲ್ಲಿ 4 ನಿವೇಶನ, ಮಾದಿಹಳ್ಳಿ ಬಡಾವಣೆಯಲ್ಲಿ 1 ನಿವೇಶನ ಮತ್ತು 2 ದ್ವಿಚಕ್ರ ವಾಹನ, 1 ಹುಂಡೈ ಆಸ್ಟ್ರಾ ಕಾರ್, ಚಿನ್ನ 297 ಗ್ರಾಂ, ಬೆಳ್ಳಿ 1 ಕೆಜಿ 43 ಗ್ರಾಂ, ಬ್ಯಾಂಕ್ ಬ್ಯಾಲೇನ್ಸ್ 49,25,000 ಮತ್ತು ಅಂದಾಜು 6.5 ಲಕ್ಷ ಗೃಹ ಬಳಕೆ ವಸ್ತುಗಳು ಹಾಗೂ ನಗದು ? 36,92,900 ಪತ್ತೆಯಾಗಿರುತ್ತವೆ.

ಮನೆ ಅಲಂಕಾರಕ್ಕೆ 15 ಲಕ್ಷ!

ಮನೆ ಅಲಂಕಾರಕ್ಕೆ 15 ಲಕ್ಷ!

ಡಾ. ರಘುನಾಥ, ವೈದೈಕೀಯ ಅಧಿಕಾರಿ, ಬಣವಾಡಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ. ಗಂಗಾವತಿಯ ಜಯನಗರದಲ್ಲಿ 2 ಮನೆ, ತುಮಕೂರಿನಲ್ಲಿ 1 ಮನೆ, ರಾಮನಗರ ಜಿಲ್ಲೆಯಲ್ಲಿ 1 ಮನೆ ಹಾಗೂ ವಿವಿಧ ಸರ್ವೇ ನಂಬರ್‌ಗಳಲ್ಲಿ 4 ಎಕರೆ ಜಮೀನು, 1 ಸ್ವಿಫ್ಟ್ಟ್ ಡಿಸೈರ್ ಕಾರ್, 1 ವರ್ನಾ ಕಾರ್, 1 ದ್ವಿಚಕ್ರ ವಾಹನ, 1 ಬುಲೆಟ್, ಚಿನ್ನ 298 ಗ್ರಾಂ, ಬೆಳ್ಳಿ 250 ಗ್ರಾಂ, ಅಂದಾಜು ? 15 ಲಕ್ಷ ಗೃಹ ಬಳಕೆ ವಸ್ತುಗಳು ಹಾಗೂ ನಗದು 2,28,400 ಪತ್ತೆಯಾಗಿರುತ್ತವೆ.

ಪತ್ನಿ ಹೆಸರಲ್ಲಿ ಹಲವು ಖಾತೆ

ಪತ್ನಿ ಹೆಸರಲ್ಲಿ ಹಲವು ಖಾತೆ

ರುದ್ರ ಪ್ರಸಾದ್, ಎಸ್.ಬಿ, ಅಧೀಕ್ಷಕರು, ಕೆ.ಜಿ.ಐ.ಡಿ, ಬೆಂಗಳೂರು. ಬೆಂಗಳೂರಿನ ಮಲ್ಲತ್‌ಹಳ್ಳಿ 4 ಅಂತಸ್ತಿನ ಕಟ್ಟಡ, ಚಿನ್ನ 731.21 ಗ್ರಾಂ, ಬೆಳ್ಳಿ 865.2 ಗ್ರಾಂ ಹಾಗೂ ಪತ್ನಿಯ ಹೆಸರಿನಲ್ಲಿ ಹಲವು ಬ್ಯಾಂಕ್ ಖಾತೆಗಳಲ್ಲಿ ಸುಮಾರು 10 ಲಕ್ಷಗಳ ಬ್ಯಾಂಕ್ ಬ್ಯಾಲೆನ್ಸ್ ಮತ್ತು ವಿಮಾ ಪಾಲಿಸಿಗಳು ಪತ್ತೆಯಾಗಿರುತ್ತವೆ.

ಮಂಗಳೂರು ಆರ್‌ಟಿಓ ಅಧಿಕಾರಿ

ಮಂಗಳೂರು ಆರ್‌ಟಿಓ ಅಧಿಕಾರಿ

ಕೆ.ಸಿ ವಿರುಪಾಕ್ಷ, ಎಸ್.ಡಿ.ಎ, ಆರ್‌ಟಿಓ ಕಛೇರಿ, ಚಿಕ್ಕಮಗಳೂರು. ಹೊಳೆನರಸೀಪುರದಲ್ಲಿ 2 ಮನೆ, ಹಾಸನ ನಗರದಲ್ಲಿ 1 ನಿವೇಶನ, ಹೊಳೇನರಸೀಪುರ ತಾಲ್ಲೂಕಿನಲ್ಲಿ 3 ಎಕರೆ 20 ಗುಂಟೆ ಜಮೀನು, 1 ಮಾರುತಿ 800 ಕಾರ್, 2 ದ್ವಿಚಕ್ರ ವಾಹನ, ಚಿನ್ನ 173 ಗ್ರಾಂ, ಬೆಳ್ಳಿ 350 ಗ್ರಾಂ, ಅಂದಾಜು ? 9.5 ಲಕ್ಷ ಗೃಹ ಬಳಕೆ ವಸ್ತುಗಳು ಕಂಡುಬಂದಿರುತ್ತವೆ.

English summary
ACB raids on government officers on march 9. Acb found crores of money, land, gold, vehicle, investments and etc. ACB raids on 9 government officers house and offices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X