ACB Raid: ರಾಜ್ಯದೆಲ್ಲೆಡೆ 18 ಭ್ರಷ್ಟರ ಬೇಟೆ: ಎಸಿಬಿ ಅಧಿಕಾರಿಗಳಿಂದ ದಾಳಿ
ಬೆಂಗಳೂರು, ಮಾ.18: ರಾಜ್ಯದೆಲ್ಲೆಡೆ ಭ್ರಷ್ಟರ ವಿರುದ್ಧ ಎಸಿಬಿ ದಾಳಿ. ವಿವಿಧ ಇಲಾಖೆಗಳ ಹದಿನೆಂಟು ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ನೂರು ತಂಡಗಳಿಂದ ದಾಳಿ ನಡೆಸಿದೆ.
ಬುಧವಾರ ಬೆಳ್ಳಂ ಬೆಳಗ್ಗೆಯೇ ಕಾರ್ಯಾಚರಣೆಗೆ ಇಳಿದಿರುವ ಎಸಿಬಿ ಅಧಿಕಾರಿಗಳು ರಾಜ್ಯದಾದ್ಯಂತ 18 ಮಂದಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. 75 ಸ್ಥಳಗಳಿಗೂ ಹೆಚ್ಚಿನ ಕಡೆ ದಾಳಿ ನಡೆದಿದೆ. 100 ಅಧಿಕಾರಿಗಳು ಮತ್ತು 300 ಮಂದಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಎಸಿಬಿ ದಾಳಿ ಒಳಗಾದವರ ವಿವರ
* ಗಜೇಂದ್ರ ಕುಮಾರ್ , ಅಡಿಷನಲ್ ಡೈರೆಕ್ಟರ್ ಸಾರಿಗೆ ಇಲಾಖೆ,
* ರಾಕೇಶ್ ಕುಮಾರ್, ಬಿಡಿಎ ಟೌನ್ ಪ್ಲಾನಿಂಗ್, ಬಿಡಿಎ,
* ರಮೇಶ್ ಕನಕಟ್ಟೆ, Rfo, ಯಾದಗಿರಿ,
* ಬಸವರಾಜ, ಶೇಖರ್ ರೆಡ್ಡಿ ಇಂಜಿನಿಯರ್ ,ಗೋಕಾಕ್,
* ಬಸವಕುಮಾರ್, ಶಿರಸ್ತೆದಾರ್ ಅಣ್ಣಿಗೇರಿ,
* ಗೋಪಿನಾಥ್ , ಮಾಳಗಿ, ನಿರ್ಮಿತಿ ಕೇಂದ್ರ ವಿಜಯಪುರ,
* ಕೆ.ಬಿ. ಶಿವಕುಮಾರ್, ಅಡಿಷನಲ್ ಡೈರೆಕ್ಟರ್, ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ,
* ಶಿವಾನಂದ ಪಿ. ಶರಣಪ್ಪ, RFO, ಬಾದಾಮಿ,
* ಮಂಜುನಾಥ್, ಅಸಿಸ್ಟೆಂಟ್ ಕಮೀಷನರ್, ರಾಮನಗರ,
* ಶ್ರೀನಿವಾಸ್, ಜನರಲ್ ಮ್ಯಾನೇಜರ್ ಸಮಾಜ ಕಲ್ಯಾಣ ಇಲಾಖೆ,
* ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ,
* ಕೃಷ್ಣನ್, ಎಇ, ಎಪಿಎಂಸಿ ಹಾವೇರಿ,
* ಚಲುವರಾಜ್, ಅಬಕಾರಿ ನಿರೀಕ್ಷಕ, ಗುಂಡ್ಲುಪೇಟೆ,
* ಗಿರೀಶ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ,
* ಬಾಲಕೃಷ್ಣ, H.N. ವಿಜಯನಗರ ಪೊಲೀಸ್ ಠಾಣೆ, ಮೈಸೂರು,
* ಗವಿ ರಂಗಪ್ಪ, ಎಇ, ಲೋಕೋಪಯೋಗಿ ಇಲಾಖೆ,
* ಅಶೋಕ ರೆಡ್ಡಿ ಪಾಟೀಲ್, ಎಇಇ, ಕೃಷ್ಣ ಜಲ ಭಾಗ್ಯ ನಿಗಮ, ರಾಯಚೂರು,
* ದಯಾ ಸುಂದರ್ ರಾಜು, ಎಇ kptcl, ದಕ್ಷಿಣ ಕನ್ನಡ












Click it and Unblock the Notifications