ಸಿಎಂಗೆ ಬಿಡದ ವಾಚ್ ಉರುಳು, ಎಸಿಬಿಗೆ ಮತ್ತೊಂದು ದೂರು

Written By:
Subscribe to Oneindia Kannada

ಬೆಂಗಳೂರು, ಮೇ. 14: ಸುತ್ತಿಕೊಂಡಿರುವ ದುಬಾರಿ ಊಬ್ಲೋ ವಾಚು ಪ್ರಕರಣ ಸಿಎಂ ಸಿದ್ದರಾಮಯ್ಯ ಅವರನ್ನು ಬಿಟ್ಟುಹೋಗುವ ಲಕ್ಷಣ ಕಾಣುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವೇ ಮುಂದಾಗಿ ಸ್ಥಾಪನೆ ಮಾಡಿದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು ಸಲ್ಲಿಕೆ ಆಗಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಟಿ ಜೆ ಅಬ್ರಾಹಂ ಎಂಬುವರು ಎಸಿಬಿಯಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಏಪ್ರಿಲ್ 2ರಂದು ವಕೀಲರಾದ ನಟರಾಜ ಶರ್ಮಾ ಎಂಬುವವರು ದುಬಾರಿ ವಾಚ್ ಪ್ರಕರಣ ಸಂಬಂಧ ಮುಖ್ಯಮಂತ್ರಿ ವಿರುದ್ಧ ದೂರು ನೀಡಿದ್ದರು. ಈಗ ಮತ್ತೊಂದು ದೂರು ದಾಖಲು ಆದಂತೆ ಆಗಿದೆ.[ಕರ್ನಾಟಕ ಸರ್ಕಾರಕ್ಕೆ ಮೂರು ವರ್ಷ, ಮುಂದಿದೆ ಎರಡು ವರ್ಷ!]

siddaramaiah

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಡಿನೋಟಿಫಿಕೇಶನ್ ಸೇರಿದಂತೆ ಏಳು ದೂರುಗಳು ದಾಖಲಾದಂತೆ ಆಗಿದೆ. ಆದರೆ ಎಸಿಬಿ ಅಧಿಕಾರಿಗಳು ಅಧಿಕೃತವಾಗಿ ದೂರು ದಾಖಲು ಮಾಡಿಕೊಂಡಿಲ್ಲ.[ಸಿದ್ದರಾಮಯ್ಯ ದುಬಾರಿ ವಾಚ್ ನ ಪೂರ್ಣ ಕತೆ]

ಇಷ್ಟೆಲ್ಲಾ ವಿವಾದಕ್ಕೆ ಕಾರಣವಾದ ವಾಚ್ ಅನ್ನು ಸಿದ್ದರಾಮಯ್ಯ ಸ್ಪೀಕರ್ ಕಾಗೋಡು ತಿಮ್ಮಪ್ಪ ಮೂಲಕ ಸರ್ಕಾರಕ್ಕೆ ನೀಡಿದ್ದರು. ವಜ್ರ ಖಚಿತ ಊಬ್ಲೋ ವಾಚ್‌ ಅನ್ನು ಮಾರ್ಚ್ 2ರಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡಿದ್ದರು. ನಂತರ ಸ್ಪೀಕರ್ ಅದನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ನೀಡಿದ್ದು, ವಜ್ರ ಖಚಿತ ವಾಚ್ ಈಗ ಸರ್ಕಾರದ ಆಸ್ತಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An RTI activist has filed a complaint with the Anti-corruption Bureau (ACB) against Chief Minister Siddaramaiah, seeking a probe into his controversial Hublot watch on Friday. T J Abraham filed the latest complaint. This is the second one on the CM's watch, which has raised brows because of its cost.
Please Wait while comments are loading...