ಆಮ್ ಆದ್ಮಿ ಫೋಟೋ ದುರುಪಯೋಗಕ್ಕೆ ಅಸಮಾಧಾನ
ಬೆಂಗಳೂರು, ಜ.4- ರಾಜ್ಯದಲ್ಲಿ ಇತ್ತೀಚೆಗೆ ವಿವಿಧ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಆಮ್ ಆದ್ಮಿ ಪಾರ್ಟಿಯ ಟೋಪಿ ಮತ್ತು ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾ ಅವರ ಹೆಸರುಗಳನ್ನು ಎಲ್ಲೆಡೆ, ಯಾವುದೇ ಎಗ್ಗುಸಿಗ್ಗು ಇಲ್ಲದೆ, ಕನಿಷ್ಠ ಪಕ್ಷದ ಅನುಮತಿಯೂ ಇಲ್ಲದೆ, ಪಕ್ಷದ ಗಮನಕ್ಕೂ ತಾರದೆ ಯಥೇಚ್ಛವಾಗಿ ಬಳಸುತ್ತಿರುವುದಕ್ಕೆ AAP Karnataka ತೀವ್ರರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಸಂಬಂಧ ತೀವ್ರ ಪ್ರತಿಭಟನೆ ದಾಖಲಿಸಿರುವ ಆಮ್ ಆದ್ಮಿ ಪಾರ್ಟಿಯ ಕರ್ನಾಟಕ ಘಟಕವು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಬ್ಯಾನರ್/ ಪೋಸ್ಟರುಗಳಲ್ಲಿ ಆಮ್ ಆದ್ಮಿ ಪಾರ್ಟಿಯ ಟೋಪಿ ಮತ್ತು ಅರವಿಂದ ಕೇಜ್ರಿವಾಲಾ ಅವರ ಚಿತ್ರಗಳನ್ನು ನೋಡಿದಾಗ ಆ ಅಭ್ಯರ್ಥಿಗಳು ತಮ್ಮ ಪಕ್ಷದ ಜತೆ ರಾಜನಿಷ್ಠೆ ಹೊಂದಿದ್ದಾರೆ ಎಂದು ಭಾಸವಾಗುತ್ತದೆ. ಆದರೆ ವಾಸ್ತವದಲ್ಲಿ ಸದರಿ ಅಭ್ಯರ್ಥಿಗಳು ಅಂತಹ ಯಾವುದೇ ನಿಷ್ಠೆ ಹೊಂದಿಲ್ಲ ಎಂದು ಪ್ರಕಟಣೆಯಲ್ಲಿ ಕರ್ನಾಟಕ ಆಮ್ ಆದ್ಮಿಗಳು ಕಿಡಿಕಾರಿದ್ದಾರೆ.

ಇದು ಈ ಅಭ್ಯರ್ಥಿಗಳು ಅನುಸರಿಸುತ್ತಿರುವ ಅನಧಿಕೃತ, ಅಕ್ರಮ ಮತ್ತು ಅಗ್ಗದ ಪ್ರಚಾರದ ತಂತ್ರವಲ್ಲದೆ ಮತ್ತೇನೂ ಅಲ್ಲ. ಆಮ್ ಆದ್ಮಿ ಪಕ್ಷದ ಶ್ರೇಯಸ್ಸನ್ನು ಅನಾಯಾಸವಾಗಿ ಈ ಅಭ್ಯರ್ಥಿಗಳು ಪಡೆಯಬಯಸಿದ್ದಾರೆ. ಇದನ್ನು ಖಂಡನಾರ್ಹ ಎಂದು ಪತ್ರಿಕಾ ಪ್ರಕಟಣೆಯಲ್ಲಿ AAP Karnataka ತಿಳಿಸಿದೆ.
ಹಾಗೂ ಇಂತಹ ಯಾವುದೇ ಭಿತ್ತಿಚಿತ್ರಗಳು ಕಂಡುಬಂದಲ್ಲಿ ಹೆಲ್ಪ್ ಲೈನ್ 91-8095435393 ತಿಳಿಸಬೇಕು ಅಥವಾ www.aapkarnataka.org ಮೂಲಕ ಪಕ್ಷದ ಗಮನಕ್ಕೆ ತರಬೇಕು ಎಂದು AAP Karnataka ಸಂಚಾಲಕ ಸಿದ್ಧಾರ್ಥ ಅವರು ಸಾರ್ವಜನಿಕರನ್ನು ಕೋರಿದ್ದಾರೆ.












Click it and Unblock the Notifications